ಚಾಮರಾಜನಗರ: ಯಡಬೆಟ್ಟ ಬಳಿ ಇರುವ ಸರ್ಕಾರಿ ಮೆಡಿಕಲ್ ಕಾಲೇಜ್ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಹಿಂದೆ ಮಾತ್ರ ಕಾಲೇಜಿನ ವಸತಿ ನಿಲಯದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ.
ಕೆಲ ದಿನಗಳ ಹಿಂದೆ ವಸತಿ ಗೃಹದ ಕಾರಿಡಾರಿನಲ್ಲಿ ಚಿರತೆ ಓಡಾಡಿದ್ದ ಘಟನೆ ಎಲ್ಲೆಡೆ ಸುದ್ದಿಯಾಗಿತ್ತು. ನಿನ್ನೆ ತಡರಾತ್ರಿಯಲ್ಲಿ ಮತ್ತೆ ಕಾಲೇಜು ಕ್ಯಾಂಪಸ್ ಹಿಂಭಾಗದಲ್ಲಿ ಚಿರತೆ ಕಂಡುಬಂದಿದೆ. ಕಿಟಕಿಯ ಮೂಲಕ ಒಳನುಗ್ಗಲು ಚಿರತೆ ಪ್ರಯತ್ನಿಸಿದ್ದು, ಕಾಲೇಜು ವಿದ್ಯಾರ್ಥಿಯ ಮೊಬೈಲ್ನಲ್ಲಿ ಈ ದೃಶ್ಯ ಸೆರೆಯಾಗಿದೆ.
ಮೆಡಿಕಲ್ ಕಾಲೇಜಿನ ವಸತಿ ನಿಲಯಕ್ಕೆ ಚಿರತೆ ಎಂಟ್ರಿ.. ಸಿಸಿ ಕ್ಯಾಮರಾದಲ್ಲಿ ನೋಡಿ ಬೆಚ್ಚಿಬಿದ್ದ ಸಿಬ್ಬಂದಿ