ಆಪರೇಷನ್ ಆದಿತ್ಯ ಆಳ್ವಾ: ಸಿಸಿಬಿ ತಂಡದಿಂದ ನಡೀತು ರಾತ್ರೋರಾತ್ರಿ ಕಾರ್ಯಾಚರಣೆ

ಭಾನುವಾರ(ಜ.10) ಸಂಜೆ ಆದಿತ್ಯನ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿತ್ತು. ಚೆನ್ನೈನ ಓಲ್ಡ್‌ ಮಹಾಬಲೀಪುರಂ (OMR) ರಸ್ತೆಯ ಕಣತ್ತೂರು ಬಳಿ ಆದಿತ್ಯ ತಲೆಮರಿಸಿಕೊಂಡಿದ್ದಾನೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕ ಬಳಿಕ ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಲ್ಲಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾದ್ರು.

ಆಪರೇಷನ್ ಆದಿತ್ಯ ಆಳ್ವಾ: ಸಿಸಿಬಿ ತಂಡದಿಂದ ನಡೀತು ರಾತ್ರೋರಾತ್ರಿ ಕಾರ್ಯಾಚರಣೆ
ಕೇಂದ್ರ ಅಪರಾಧ ವಿಭಾಗ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Jan 12, 2021 | 10:25 AM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಸಂಬಂಧ ನಾಪತ್ತೆಯಾಗಿದ್ದ ಎ6 ಆದಿತ್ಯ ಆಳ್ವಾ 130 ದಿನಗಳ ಬಳಿಕ ಸೆರೆ ಸಿಕ್ಕಿದ್ದಾನೆ. ಈತನನ್ನು ಸೆರೆ ಹಿಡಿಯಲು ಸಿಸಿಬಿ ಪೊಲೀಸರು ಮಾಡಿದ ಪ್ಲಾನ್ ರೋಚಕ.

ಆದಿತ್ಯಾ ಆಳ್ವಾ ನಿಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಶೋಧ ನಡೆಯುತ್ತಿತ್ತು. ಆಳ್ವಾ ಸಂಪರ್ಕದಲ್ಲಿದ್ದವರ ಮೊಬೈಲ್ ಟವರ್ ಲೋಕೆಷನ್ ಟ್ರೇಸ್ ಮಾಡುವ ಮೂಲಕ ಆದಿತ್ಯನ ಸಂಬಂಧಿಕರ, ಆಪ್ತರ ಕರೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಇನ್ನು ಅರೆಸ್ಟ್ ಆಗುವ ಭೀತಿಯಲ್ಲಿ ಆದಿತ್ಯ ಪದೇ ಪದೆ ಜಾಗ ಬದಲಾವಣೆ ಮಾಡುತ್ತಿದ್ದ.

ಭಾನುವಾರ(ಜ.10) ಸಂಜೆ ಆದಿತ್ಯನ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿತ್ತು. ಚೆನ್ನೈನ ಓಲ್ಡ್‌ ಮಹಾಬಲೀಪುರಂ (OMR) ರಸ್ತೆಯ ಕಣತ್ತೂರು ಬಳಿ ಆದಿತ್ಯ ತಲೆಮರಿಸಿಕೊಂಡಿದ್ದಾನೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕ ಬಳಿಕ ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಲ್ಲಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾದ್ರು.

ಸಿಸಿಬಿ ಇನ್ಸ್‌ಪೆಕ್ಟರ್ ಪುನೀತ್ ನೇತೃತ್ವದ ತಂಡ ಭಾನುವಾರ ರಾತ್ರಿಯೇ ಚೆನ್ನೈ ಕಡೆ ದೌಡಾಯಿಸಿತು. ನಿನ್ನೆ ಇಡೀ ದಿನ ಆರೋಪಿ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ರು. ಬಳಿಕ ಕಣತ್ತೂರಿನ ರೆಸಾರ್ಟ್​ನಲ್ಲಿ ಆರೋಪಿ ಆದಿತ್ಯ ಆಳ್ವಾ ಇರೋದನ್ನ ಖಚಿತಪಡಿಸಿಕೊಂಡು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಆದಿತ್ಯ ಅಳ್ವಾನನ್ನು ವಶಕ್ಕೆ ಪಡೆದ್ರು. ಸದ್ಯ ಆದಿತ್ಯನನ್ನು ಅರೆಸ್ಟ್ ಮಾಡಿದ್ದು ಬೆಂಗಳೂರಿನ ಸಿಸಿಬಿ ಕಚೇರಿಗೆ ಕರೆತರಲಾಗಿದೆ.

ಸಿಸಿಬಿ ಪೊಲೀಸರು, ಆದಿತ್ಯನನ್ನು ಇಂದು ಸಿಸಿಹೆಚ್ 33ರ NDPS ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆ ಮಾಡಬೇಕಾದ ಹಿನ್ನೆಲೆಯಲ್ಲಿ ಸಿಸಿಬಿ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.

ಕೊನೆಗೂ ಅರೆಸ್ಟ್ ಆದ ಆದಿತ್ಯ ಆಳ್ವಾ.. ಕೆಲ ರಾಜಕಾರಣಿಗಳು, ಸೆಲೆಬ್ರೆಟಿಗಳಿಗೆ ಒಳಗೊಳಗೆ ಶುರುವಾಯ್ತು ಭಯ

Published On - 8:52 am, Tue, 12 January 21

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ