AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anna Bhagya Scheme: ಅಕ್ಕಿ ಬೇಡ, ಹಣ ಕೊಡಿ ಎನ್ನುತ್ತಿರುವ ಉತ್ತರ ಕರ್ನಾಟಕದ ಜನತೆ; ಕಾರಣ ಇಲ್ಲಿದೆ ನೋಡಿ

ನಮ್ಮ ಊಟದ ಪ್ರಮುಖ ಅಂಶ ಜೋಳದ ರೊಟ್ಟಿಯಾಗಿದೆ. ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಅಗತ್ಯವಿಲ್ಲ. 10 ಕೆಜಿಯಲ್ಲಿ ಕೇಂದ್ರ ಸರಕಾರ ಐದು ಕೆಜಿಯೂ ಇದೆ. ಐದು ಕೆಜಿ ಅಕ್ಕಿಗೆ ಬದಲಾಗಿ ಕೇಂದ್ರ ಸರ್ಕಾರ ನಮಗೆ ಹಣ ನೀಡಬೇಕೆಂದು ನಾವು ಬಯಸುತ್ತೇವೆ ಎನ್ನುತ್ತಿದ್ದಾರೆ ಉತ್ತರ ಕರ್ನಾಟಕದ ಜನ.

Anna Bhagya Scheme: ಅಕ್ಕಿ ಬೇಡ, ಹಣ ಕೊಡಿ ಎನ್ನುತ್ತಿರುವ ಉತ್ತರ ಕರ್ನಾಟಕದ ಜನತೆ; ಕಾರಣ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Ganapathi Sharma
|

Updated on:Jun 05, 2023 | 8:19 PM

Share

ಧಾರವಾಡ: ಐದು ಪ್ರಮುಖ ಗ್ಯಾರಂಟಿಗಳನ್ನು ಜಾರಿಗೊಳಿಸುವ ಕರ್ನಾಟಕ ಸಚಿವ ಸಂಪುಟದ ನಿರ್ಧಾರಕ್ಕೆ ಉತ್ತರ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಗ್ಯಾರಂಟಿ ಜಾರಿಗೆ ಕ್ರಮ ಕೈಗೊಂಡಿರುವುದರಿಂದ ಮಹಿಳೆಯರು ಸಂತಸಗೊಂಡಿದ್ದಾರೆ. ಆದರೆ, ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದರಿಂದ ಉಂಟಾಗುವ ಆದಾಯ ಕೊರತೆಯನ್ನು ಸರಿದೂಗಿಸಲು ಬಸ್ ದರವನ್ನು ಹೆಚ್ಚಿಸುವ ಸಾಧ್ಯತೆಯ ಬಗ್ಗೆ ಪುರುಷರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ, ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವ ನಿರ್ಧಾರ ಈ ಭಾಗದ ಜನರಿಗೆ ಸಂತಸ ತಂದಿಲ್ಲ. ರಾಜ್ಯದ ಕರಾವಳಿ ಅಥವಾ ದಕ್ಷಿಣ ಭಾಗಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಅಕ್ಕಿಯ ಬಳಕೆ ತುಂಬಾ ಕಡಿಮೆ.

ನಮ್ಮ ಊಟದ ಪ್ರಮುಖ ಅಂಶ ಜೋಳದ ರೊಟ್ಟಿಯಾಗಿದೆ. ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಅಗತ್ಯವಿಲ್ಲ. 10 ಕೆಜಿಯಲ್ಲಿ ಕೇಂದ್ರ ಸರಕಾರ ಐದು ಕೆಜಿಯೂ ಇದೆ. ಐದು ಕೆಜಿ ಅಕ್ಕಿಗೆ ಬದಲಾಗಿ ಕೇಂದ್ರ ಸರ್ಕಾರ ನಮಗೆ ಹಣ ನೀಡಬೇಕೆಂದು ನಾವು ಬಯಸುತ್ತೇವೆ. ಜೋಳ, ಬೇಳೆ, ಖಾದ್ಯ ಎಣ್ಣೆ ಮುಂತಾದವುಗಳನ್ನು ಖರೀದಿಸಲು ನಮ್ಮ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಬೇಕು. ನಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವುದರಿಂದ ಯಾವುದೇ ರೀತಿಯ ಅಕ್ರಮವನ್ನು ತಡೆಯಬಹುದು ಎಂದು ಗದಗದ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದ ಬಸನಗೌಡ ಪಾಟೀಲ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಬಸನಗೌಡ ಪಾಟೀಲ ಅವರ ಕುಟುಂಬದಲ್ಲಿ ಎಂಟು ವಯಸ್ಕರಿದ್ದು, ಅವರಿಗೆ ಪ್ರತಿ ತಿಂಗಳು 80 ಕೆಜಿ ಅಕ್ಕಿ ಅಗತ್ಯವಿಲ್ಲ ಎಂದು ಮನೆಯ ಸಹಾಯಕಿ ಹಸೀನಾ ಹೇಳಿದ್ದಾರೆ. ನಮ್ಮಲ್ಲಿ ಹೆಚ್ಚಿನವರು ನಮಗೆ ನೀಡಿದ ಅಕ್ಕಿಯನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ ಮತ್ತು ಆ ಹಣವನ್ನು ಇತರ ವಸ್ತುಗಳನ್ನು ಖರೀದಿಸಲು ಬಳಸುತ್ತಾರೆ. ಕೇಂದ್ರ ಸರ್ಕಾರ ನಮಗೆ ಉಚಿತ ಅಕ್ಕಿ ಬದಲು ಹಣ ನೀಡಬೇಕು. ರಾಜ್ಯ ಸರ್ಕಾರ ಏನೇ ಕೊಟ್ಟರೂ ಸಾಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Gruha Jyothi Scheme: ಗೃಹಜ್ಯೋತಿಗೆ ಹೊಸ ನಿಬಂಧನೆ, ಉಚಿತ ವಿದ್ಯುತ್​ಗಾಗಿ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಲು ಸೂಚನೆ

ಕೇಂದ್ರ ಸರಕಾರದಿಂದ ಐದು ಕೆಜಿ ಅಕ್ಕಿ ನೀಡಲಾಗುತ್ತಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ಫಲಾನುಭವಿಗಳಿಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಅಕ್ಕಿ ನೀಡುವ ಬದಲಿಗೆ ಕೇಂದ್ರ ಸರ್ಕಾರವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಬಹುದು. ಇದರಿಂದ, ಬಡವರು ಹಸಿವಿನಿಂದ ಬಳಲದಂತೆ ಮಾಡಲು ಕೇಂದ್ರ ಸರ್ಕಾರವೂ ನೆರವಾಗುತ್ತದೆ ಎಂಬುದನ್ನು ಫಲಾನುಭವಿಗಳಿಗೆ ತಿಳಿಯುವಂತೆ ಮಾಡಬಹುದು ಎಂದು ಬಾಗಲಕೋಟೆಯ ಅಭಯ ಮನಗೋಳಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 pm, Mon, 5 June 23