ಬೆಂಗಳೂರು: ಎಂಇಎಸ್ ದಬ್ಬಾಳಿಕೆ, ಪುಂಡಾಟಿಕೆ ವಿರೋಧಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್ ಮಾಡಿ ಹೋರಾಟಗಾರ ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಕರ್ನಾಟಕ ಬಂದ್ ಆಗಲಿದೆ. ತುರ್ತುಸೇವೆಗಳನ್ನು ಹೊರತುಪಡಿಸಿ ಎಲ್ಲ ಕಡೆ ಬಂದ್ ಆಗಬೇಕು. ಪಕ್ಷಾತೀತವಾಗಿ ಎಲ್ಲರೂ ಕರ್ನಾಟಕ ಬಂದ್ ಬೆಂಬಲಿಸಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ (Karnataka Bandh).
ಕರ್ನಾಟಕ ಬಂದ್ ಬೆಂಬಲ ನೀಡಲಿರುವ ಕನ್ನಡಪರ ಸಂಘಟನೆಗಳು:
ಸುಮಾರು 35 ಸಂಘಟನೆಗಳಿಂದ ಬಂದ್‌ಗೆ ಬೆಂಬಲ ಸಿಗುವ ಸಾಧ್ಯತೆ ಇದೆ. ಲಾರಿ ಮಾಲೀಕರ ಸಂಘ, ಆಟೋ ಚಾಲಕರು, ಟ್ಯಾಕ್ಸಿ ಮಾಲೀಕರು, ಹೋಟೆಲ್ ಮಾಲೀಕರು, ಶಿಕ್ಷಣ ಸಂಸ್ಥೆ, ದಲಿತ ಸಂಘರ್ಷ ಸಮಿತಿ, ಕೈಗಾರಿಕಾ, ಬೀದಿಬದಿ ವ್ಯಾಪರಿಗಳು, ಸಾರಿಗೆ ನೌಕರರು, ಸಿನಿಮಾ, ಅಂಗಡಿ ಮಾಲೀಕರು, ಗಾರ್ಮೆಂಟ್ಸ್ ನೌಕರರು, ಸರ್ಕಾರಿ ನೌಕರರು, ಅಖಿಲ ಭಾರತ ಚಾಲಕರ ಸಂಘ, ಕಟ್ಟಡ ಕಾರ್ಮಿಕರ ಸಂಘ ಬೆಂಬಲಕ್ಕೆ ಸಾಥ್ ನೀಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಕರ್ನಾಟಕ ಬಂದ್ಗೆ ಬೀದಿ ಬದಿ ವ್ಯಾಪಾರಿಗಳ ಸಂಘ, ಓಲಾ, ಉಬರ್ ಬೆಂಬಲ ನೀಡಿದೆ. ಓಲಾ, ಉಬರ್ ಅಸೋಸಿಯೇಷನ್ ತನ್ವೀರ್, ಬಂದ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಅವತ್ತು ಯಾವುದೇ ವಾಹನ ರೋಡಿಗಿಳಿಯಲ್ಲ ಎಂದು ಮಾಹಿತಿ ನೀಡಿದ್ದಾರೆ. ಹಾಗೂ ನಮ್ಮ ಬೆಂಬಲವಿಲ್ಲ. ನಮ್ಮ ಎಲ್ಲಾ ಆಟೋ ಅಂದು ಸಂಚಾರ ಮಾಡುತ್ತೆ ಎಂದು ಪೀಸ್ ಆಟೋ ರಾಜ್ಯಾಧ್ಯಕ್ಷ ಮಾಹಿತಿ ನೀಡಿದ್ದಾರೆ. ಹೋಟೆಲ್ ಗಳು, ಮಾಲ್ ಗಳು, ಕೆಲ ಆಟೋಗಳು, ಖಾಸಗಿ ಬಸ್ ಗಳು ಸಾರ್ವಜನಿಕರ ಸೇವೆಗೆ ಲಭ್ಯವಿರಲಿದೆ.
ಚಿತ್ರೋದ್ಯಮದ ನಿರ್ಧಾರ ಇನ್ನೂ ಅಸ್ಪಷ್ಟ:
ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ. ಆದ್ರೆ ಚಿತ್ರೋದ್ಯಮದ ನಿರ್ಧಾರ ಇನ್ನೂ ಅಸ್ಪಷ್ಟವಾಗಿದೆ. ಸಭೆ ಕರೆದು ನಂತರ ತೀರ್ಮಾನ ಮಾಡುವುದಾಗಿ ಚಲನ ಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ. ಅಲ್ಲದೆ ಆ ದಿನ ಚಿತ್ರೋದ್ಯಮ ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾಗೋ ಸಾಧ್ಯತೆಯೂ ಇದೆ. ಸದ್ಯ ಪ್ರದರ್ಶನಕ್ಕೆ ಬ್ರೇಕ್ ಹಾಕೋ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಈ ಬಗ್ಗೆ ಸಂಜೆ ವೇಳೆಗೆ ಅಥವಾ ನಾಳೆಗೆ ವಾಣಿಜ್ಯ ಮಂಡಳಿ ನಿರ್ಧಾರ ಪ್ರಕಟಿಸಿಲಿದೆ. ನಿನ್ನೆ ಸುದ್ದಿಗೋಷ್ಠಿ ಮಾಡಿ ಬೆಂಬಲಕೊಡ್ತಿವಿ ಅಂದಿದ್ದ ವಾಣಿಜ್ಯ ಮಂಡಳಿ ಈಗ ತನ್ನ ನಿಲುವು ಬದಲಾಯಿಸಿದೆ. ಡಿಸೆಂಬರ್ 31 ರಂದು ಲವ್ ಯು ರಚ್ಚು ಸೇರಿದಂತೆ ಹಲವು ಸಿನಿಮಾಗಳು ರಿಲೀಸ್ ಆಗಲಿವೆ. ಬಂದ್ ನಿಂದಾಗಿ ರಿಲೀಸ್ಗೆ ನಿಂತ ಸಿನಿಮಾಗಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.
ಬಂದ್ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸಭೆ ನಾಳೆ :
ಡಿಸೆಂಬರ್ 31ರಂದು ಕರ್ನಾಟಕ ಬಂದ್ ಘೋಷಿಸಿರುವ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ನಾಳೆ ಸಭೆ ಕರೆದಿದೆ. ಸಭೆಯಲ್ಲಿ ಬಂದ್‌ಗೆ ಬೆಂಬಲ ನೀಡುವ ಕುರಿತು ಚರ್ಚೆ ಯಾಗಲಿದೆ ಎಂದು ಟಿವಿ9ಗೆ ಕರವೇ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ. ಬಂದ್ಗೆ ಬೆಂಬಲ ನೀಡುವ ಬಗ್ಗೆ ನಾವು ಇನ್ನೂ ನಿರ್ಧಾರ ಕೈಗೊಂಡಿಲ್ಲ. ನಾಳೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ ಕರವೇ ಅಧ್ಯಕ್ಷ ನಾರಾಯಣಗೌಡ.
ಇದನ್ನೂ ಓದಿ: Karnataka Bandh: ವರ್ಷದ ಕೊನೆಯ ದಿನ ಕರ್ನಾಟಕ ಬಂದ್, ಕನ್ನಡ ಪರ ಸಂಘಟನೆಗಳ ಘೋಷಣೆ
Published On - 1:36 pm, Wed, 22 December 21