ಕೊರೊನಾ ಕಾಟ ಮಧ್ಯೆ ಹಸಿರು ಹಬ್ಬದ ಹೊಂಬೆಳಕಾಗಲಿ ದೀಪಾವಳಿ
ಬೆಂಗಳೂರು: ದೀಪಾವಳಿ ಹಬ್ಬ ಇನ್ನೇನು ಹತ್ತಿರದಲ್ಲೇ ಇದೆ. ಈ ಬಾರಿ ಕೊರೊನಾ ಅಟ್ಟಹಾಸನೂ ಜೊತೆಗಿದೆ. ಪಟಾಕಿಯನ್ನ ಬಳುಸುವುದೋ? ಬೇಡ್ವೋ? ಅನ್ನೋ ಪ್ರಶ್ನೆ ಎಲ್ಲರಲ್ಲಿ ಮನೆಮಾಡಿದೆ. ಕೊರೊನಾ ಅಟ್ಟಹಾಸದಲ್ಲಿ ಹಬ್ಬದ ಮೆರುಗು ಸ್ವಲ್ಪ ಮಟ್ಟಿಗೆ ಕಡಿಮೆ ಇದ್ರೂ, ಸಡಗರ ಸಂಭ್ರಮ ಕಡಿಮೆಯಾಗಲ್ಲ. ಈ ಬಾರಿಯ ಹಬ್ಬದಲ್ಲಿ ಪಟಾಕಿ ಸಿಡಿಸುವುದೋ ಬೇಡ್ವೋ ಎಂಬ ಗೊಂದಲದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ಪಟಾಕಿ ಚಿಂತನೆಯನ್ನು ಸೂಚಿಸಿದ್ದಾರೆ. ಹಸಿರು ಪಟಾಕಿ ಅಂದ್ರೇನು? ಅದು ಹೇಗಿರುತ್ತೆ? ಆದ್ರೆ. ಇನ್ನೂ ಹಸಿರು ಪಟಾಕಿ ನಮ್ಮ ರಾಜ್ಯದ ಮಾರುಕಟ್ಟೆಗೆ […]

ಬೆಂಗಳೂರು: ದೀಪಾವಳಿ ಹಬ್ಬ ಇನ್ನೇನು ಹತ್ತಿರದಲ್ಲೇ ಇದೆ. ಈ ಬಾರಿ ಕೊರೊನಾ ಅಟ್ಟಹಾಸನೂ ಜೊತೆಗಿದೆ. ಪಟಾಕಿಯನ್ನ ಬಳುಸುವುದೋ? ಬೇಡ್ವೋ? ಅನ್ನೋ ಪ್ರಶ್ನೆ ಎಲ್ಲರಲ್ಲಿ ಮನೆಮಾಡಿದೆ.
ಕೊರೊನಾ ಅಟ್ಟಹಾಸದಲ್ಲಿ ಹಬ್ಬದ ಮೆರುಗು ಸ್ವಲ್ಪ ಮಟ್ಟಿಗೆ ಕಡಿಮೆ ಇದ್ರೂ, ಸಡಗರ ಸಂಭ್ರಮ ಕಡಿಮೆಯಾಗಲ್ಲ. ಈ ಬಾರಿಯ ಹಬ್ಬದಲ್ಲಿ ಪಟಾಕಿ ಸಿಡಿಸುವುದೋ ಬೇಡ್ವೋ ಎಂಬ ಗೊಂದಲದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ಪಟಾಕಿ ಚಿಂತನೆಯನ್ನು ಸೂಚಿಸಿದ್ದಾರೆ.
ಹಸಿರು ಪಟಾಕಿ ಅಂದ್ರೇನು? ಅದು ಹೇಗಿರುತ್ತೆ? ಆದ್ರೆ. ಇನ್ನೂ ಹಸಿರು ಪಟಾಕಿ ನಮ್ಮ ರಾಜ್ಯದ ಮಾರುಕಟ್ಟೆಗೆ ಜಾರಿಗೆ ಬಂದಿಲ್ಲ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು. ಸಾಮಾನ್ಯ ಪಟಾಕಿಗಳೆಲ್ಲ ಹೆಚ್ಚು ಹೊಗೆ ಬೀರುವ ಪಟಾಕಿಗಳಾಗಿವೆ. ಆದರೆ ಹಸಿರು ಪಟಾಕಿಗಳಲ್ಲಿ ಹೊಗೆ ನಿಯಂತ್ರಣ ಮಾಡಬಹುದು. ಬೆಳಕು ಮತ್ತು ಶಬ್ದ ಸಾಮಾನ್ಯ ಪಟಾಕಿಯಷ್ಟೇ ಇರುತ್ತದೆ. ಹಸಿರು ಪಟಾಕಿಯನ್ನು ಕೇಂದ್ರ ಸಚಿವ ಡಾ. ಹರ್ಷವರ್ಧನ್ ಹಿಂದಿನ ವರ್ಷ ದೆಹಲಿಯಲ್ಲಿ ಬಿಡುಗಡೆಗೊಳಿಸಿದ್ದರು ಎಂದು ಮಾಲಿನ್ಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಶ್ವಾಸಕೋಶ ಸಂಬಂಧಿ ರೋಗವಾದ್ದರಿಂದ ಪಟಾಕಿ ಹೊಗೆ ಇನ್ನೂ ಹೆಚ್ಚು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಉಸಿರಾಟದ ತೊಂದರೆ, ರಕ್ತದೊಟ್ಟಡದಂತಹ ತೊಂದರೆಗಳು ಪಟಾಕಿಯ ಹೊಗೆಯಿಂದ ಬರುವಂತದ್ದು. ಅದರಲ್ಲಿಯೂ ಕೊರೊನಾ ರಾಜ್ಯದೆಲ್ಲೆಡೆ ಆವರಿಸಿರುವುದರಿಂದ ಸೋಂಕಿತರು ಗುಣಮುಖರಾಗಲು ಹೆಚ್ಚಿನ ಸಮಯಬೇಕು ಎಂದು ವೈದ್ಯಾಧಿಕಾರಿಗಳು ಅಭಿಪ್ರಾಯಪಡುತ್ತಾರೆ.
Published On - 4:44 pm, Sat, 7 November 20