ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾಗುತ್ತಿದ್ದಂತೆ ರಾಜ್ಯಾದ್ಯಂತ ಹುಲಿ ಉಗುರು ಭಾರಿ ಸದ್ದು ಮಾಡ್ತಿದೆ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಧಾರ್ಮಿಕ ಕ್ಷೇತ್ರದವರು ಹುಲಿ ಉಗುರಿನ ಉರುಳಲ್ಲಿ ಸಿಕ್ಕಿ ಬೀಳ್ತಿದ್ದಾರೆ. ಪ್ರತಿ ದಿನ ಒಂದೊಂದು ಪ್ರಕರಣ ಪತ್ತೆಯಾಗುತ್ತಿದೆ. ವನ್ಯಜೀವಿ ಸಂಪತ್ತು ಹಾಗೂ ಅಗಾಂಗ ಹೊಂದಿದವರಿಗೆ ಬಿಗ್ ಶಾಕ್ ಎದುರಾಗಿದೆ.ಸದ್ಯ ಇವತ್ತು ನ್ಯಾಯಾಲಯದ ತೀರ್ಪು ಹೊರ ಬೀಳಲಿದ್ದು ವರ್ತೂರು ಸಂತೋಷ್‌ಗೆ ಬೇಲಾ? ಜೈಲಾ? ಎಂಬುವುದು ಖಚಿತವಾಗಲಿದೆ. ಇನ್ನು ಪ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರನ ಮತ್ತೊಂದು ಪುಂಡಾಟ ಬಯಲಾಗಿದೆ. ಬೆಂಗಳೂರಿನ ಯಲಹಂಕದ ರಸ್ತೆಯಲ್ಲಿ ರಾತ್ರಿ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಆ್ಯಡಂ ಬಿದ್ದಪ್ಪ ಹೈಡ್ರಾಮಾ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ರಾಜಕೀಯ, ಅಪರಾಧ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಅಂಕಿಹಳ್ಳಿಯಲ್ಲಿ ಕಾಡಾನೆ ದಾಳಿಯಿಂದ ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೂಲಿ ಕಾರ್ಮಿಕ ದೀಪಕ್ ರೈ(54) ಮೃತ ರ್ದುದೈವಿ.
ದಿನಸಿ ತರಲು ಅಂಗಡಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕೂಡಲೇ ಸಕಲೇಶಪುರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.
ಬೆಂಗಳೂರು: ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಆರೋಪದಡಿ ಅರಣ್ಯಾಧಿಕಾರಿಗಳ ವಿರುದ್ಧ ವಕೀಲ ಎಸ್.ಉಮೇಶ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿ ಕ್ರಮಗೊಳ್ಳಲು ಆಗ್ರಹಿಸಿದ್ದಾರೆ. ಹುಲಿ ಉಗುರು ಧರಿಸಿದ ಪ್ರಕರಣ ಸಂಬಂಧ ವರ್ತೂರು ಸಂತೋಷ್ ಬಂಧನವಾಗುತ್ತಿದ್ದಂತೆ ನಟ-ನಿರ್ಮಾಪಕ ಹಾಗೂ ಸ್ವಾಮೀಜಿಗಳ ವಿರುದ್ಧ ಹುಲಿ ಉಗುರು ಪೆಂಡೆಂಟ್ ಹೊಂದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಅವರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಇದೀಗ ಹುಲಿ ಉಗುರು ಪೆಂಡೆಂಟ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಮಧ್ಯೆ ವಕೀಲ ಉಮೇಶ್ ಎಂಬುವರು ಹುಲಿ ಉಗುರು, ಚರ್ಮ ಹಾಗೂ ನವಿಲು ಗರಿ ಹೊಂದಿರುವ ಬಗ್ಗೆ ಚರ್ಚೆಯಾಗುತ್ತಿದೆ. ದರ್ಗಾ ಹಾಗೂ ಮಠಗಳಲ್ಲಿ ನವಿಲು ಗರಿಗಳಿರುತ್ತವೆ. 1972 ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿ ಬಳಿಕ 2003ರಿಂದ 2006ರವರೆಗೆ ವನ್ಯಜೀವಿಗಳ ಪಳೆಯುಳಿಕೆ ಇಟ್ಟುಕೊಂಡಿರುವವರು ಅರಣ್ಯ ಇಲಾಖೆ ಹಿಂತಿರುಗಿಸಬೇಕೆಂದು ಅವಕಾಶ ನೀಡಿತ್ತು. ಗಡುವು ಮುಗಿದ ಬಳಿಕ ಇಷ್ಟು ವರ್ಷಗಳಲ್ಲಿ ಅಧಿಕಾರಿಗಳು ಏನು ಮಾಡುತ್ತಿದ್ದರು. ಹುಲಿ ಉಗುರು ಹೊಂದಿದ ಸಂತೋಷ್ ಎಂಬಾತನನ್ನ ಬಂಧಿಸಿ ಜೈಲಿಗಟ್ಟಿರುವ ಅಧಿಕಾರಿಗಳು ಸೆಲೆಬ್ರೆಟಿಗಳ ವಿಷಯದಲ್ಲಿ ಯಾಕೆ ಮೌನವಹಿಸಿದೆ. ಅಲ್ಲದೆ, ಅರಣ್ಯ ಅಧಿಕಾರಿಗಳೇ ಹುಲಿ ಉಗುರು ಪೆಂಡೆಂಟ್ ಹೊಂದಿದ್ದಾರೆ. ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ಮೊದಲ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಅಲ್ಲದೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿ ಹಾಗೂ ಉಪ ವನ್ಯಜೀವಿ ಸಂರಕ್ಷಣಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಕಳೆದ ಒಂದೂವರೆ ತಾಸಿನಿಂದಲೂ ಚರ್ಚಿಸುತ್ತಿದ್ದಾರೆ. ಬೆಂಗಳೂರಿನ ಸದಾಶಿವನಗರದ ಪರಮೇಶ್ವರ್ ನಿವಾಸದಲ್ಲಿ ಸಮಾಲೋಚನೆ ನಡೆಯುತ್ತಿದೆ.
ಬೆಂಗಳೂರು: ವರ್ತೂರು ಸಂತೋಷ್ ಜೈಲಿನಿಂದ ಬಿಡುಗಡೆ ಹಿನ್ನೆಲೆ ಸಂತೋಷ್ ಮನೆ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಸ್ನೇಹಿತರು. ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಅರಣ್ಯಾಧಿಕಾರಿಗಳು ಬಿಗ್ಬಾಸ್ ಮನೆಯಿಂದ ಕರೆದುಕೊಂಡು ಹೋಗಲಾಗಿತ್ತು, ಇದೀಗ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ.
ಶಿವಮೊಗ್ಗ: ನಗರದ ಬಿಎಚ್ ರಸ್ತೆ ಯ ಸೈನ್ಸ್ ಕಾಲೇಜ್ ಬಳಿ ಸರಣಿ ಅಪಘಾತವಾಗಿದ್ದು, ಸುಮಾರು 5 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಿಲ್ಲ. ಗಾಯಾಳುಗಳಿಗೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 10 ಕ್ಕೂ ಹೆಚ್ಚು ಬೈಕ್ಗಳಿಗೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ಗಳು ಜಖಂಗೊಂಡಿದೆ. ಈ ಕುರಿತು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಉತ್ತರ ಕನ್ನಡ: ಜಿಲ್ಲೆಯ ಶಿರಸಿ ಸಬ್ ರಿಜಿಸ್ಟ್ರಾರ್ ರಾಧಮ್ಮ ಎಂಬುವವರು 3 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ. ದಾನ ನೀಡಿದ್ದ 3 ಗುಂಟೆ ಜಮೀನು ನೋಂದಣಿ ಮಾಡಿಕೊಡಲು, ದಾಸನಕೊಪ್ಪದ ಬಸವರಾಜ ನಂದಿಕೇಶ್ವರ ಮಠದವರಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ರೆಡ್ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ. ಈ ಕುರಿತು ಕಾರವಾರ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಶಾಖಾದ್ರಿ ನಿವಾಸದಲ್ಲಿ ಜಿಂಕೆ ಹಾಗೂ ಚಿರತೆ ಚರ್ಮ ಪತ್ತೆಯಾಗಿದೆ. ಚಿಕ್ಕಮಗಳೂರಿನ ಎಂ.ಜಿ ರಸ್ತೆ ಬಳಿಯಿರುವ ಶಾಖಾದ್ರಿ ನಿವಾಸವನ್ನು ಪರಿಶೀಲನೆ ಮಾಡಲು ಸರ್ಚ್ ವಾರಂಟ್ ಪಡೆದು RFO ಮೋಹನ್ ನೇತೃತ್ವದಲ್ಲಿ ಶೋಧಕಾರ್ಯ ಮಾಡಲಾಗಿತ್ತು. ಈ ವೇಳೆ ಜಿಂಕೆ, ಚಿರತೆ ಚರ್ಮ ಪತ್ತೆಯಾಗಿದೆ.
ಗದಗ: ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಮೀನಿನಲ್ಲಿ ನೇಣು ಹಾಕಿಕೊಂಡು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪರಸಪ್ಪ ಉಮಚಗಿ (25) ಆತ್ಮಹತ್ಯೆ ಮಾಡಿಕೊಂಡ ರೈತ. ಸಾಲ ಮಾಡಿ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ, ಮೆಣಸಿನಕಾಯಿ ಬಿತ್ತನೆ ಮಾಡಿದ್ದ. ಭೀಕರ ಬರಕ್ಕೆ ಯಾವ ಬೆಳೆಯೂ ಬಾರದ ಹಿನ್ನಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ: ಕೆಟ್ಟು ನಿಂತ ಟೆಂಪೊದಿಂದಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಬಳಿ ಕಿಲೋಮೀಟರ್ವರೆಗೆ ಟ್ರಾಫಿಕ್ ಜಾಮ್ ಆಗಿದೆ. ಆದರೆ, ಯಾವೊಬ್ಬ ಟೋಲ್ ಸಿಬ್ಬಂದಿ, ನೆಲಮಂಗಲ ಸಂಚಾರಿ ಪೊಲೀಸರು ಚಾಲಕನ ನೆರವಿಗೆ ಬಂದಿಲ್ಲ. ಈ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ಬಿಬಿಎಂಪಿಯಲ್ಲಿ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದ ಐಎಎಸ್ ಅಧಿಕಾರಿಗಳನ್ನು ಅದೇ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಮುನೀಶ್ ಮೌದ್ಗಿಲ್- ಬಿಬಿಎಂಪಿ ವಿಶೇಷ ಆಯುಕ್ತ( ಕಂದಾಯ), ವಿನೋತ್ ಪ್ರಿಯ ಆರ್.- ಬಿಬಿಎಂಪಿ ದಕ್ಷಿಣ ವಲಯ ಆಯುಕ್ತೆ, ಸ್ನೇಹಲ್ ಆರ್.- ಬಿಬಿಎಂಪಿ ಪೂರ್ವ ವಲಯ ಆಯುಕ್ತೆ, ಶ್ರೀವಿದ್ಯಾ ಪಿ.ಎಲ್.- ಯೋಜನಾ ನಿರ್ದೇಶಕಿ, ಎನ್ ಎಲ್ ಎಂ, ಡಾ. ರಾಗಪ್ರಿಯ ಆರ್.- ಆಯುಕ್ತೆ, ಉದ್ಯೋಗ ಮತ್ತು ತರಬೇತಿ, ಜ್ಯೋತಿ ಕೆ.- ಚೇರ್ಮನ್, ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಸೇರಿ ಒಟ್ಟು ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ: ಮಹಾನಗರ ಪಾಲಿಕೆಯ ಆಡಳಿತದಲ್ಲಿ ಹಸ್ತಕ್ಷೇಪ ಆರೋಪದ ಹಿನ್ನಲೆ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ರಾಜ್ಯಪಾಲ ಗೆಹ್ಲೋಟ್‌ಗೆ ದೂರು ನೀಡಲಾಗಿದೆ. ಹೌದು, ಬೆಳಗಾವಿ ವಿಟಿಯು ಗೆಸ್ಟ್ ಹೌಸ್‌ನಲ್ಲಿ ವ್ಹೀಲ್ ಚೇರ್‌ನಲ್ಲಿ ಆಗಮಿಸಿ ಮೇಯರ್ ಶೋಭಾ ಸೋಮನಾಚೆ, ಬಿಜೆಪಿ ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಅನಿಲ್ ಬೆನಕೆ, ಮಾಜಿ ಎಂಎಲ್‌ಸಿ ಕವಟಗಿಮಠ, ಬಿಜೆಪಿ ಕಾರ್ಪೊರೇಟರ್‌ಗಳಿಂದ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಕೊಡಗು: ನಾಳೆ ಚಂದ್ರ ಗ್ರಹಣ ಇರುವುದರಿಂದ ಮಡಿಕೇರಿಯ ಐತಿಹಾಸಿಕ ಓಂಕಾರೇಶ್ವರ ದೇವಾಲಯದ ಪೂಜಾ ಸಮಯದಲ್ಲಿ ವ್ಯತ್ಯಯ ಆಗಲಿದೆ. ಮಾಮುಲಿ ಸಮಯಕ್ಕಿಂತ ಒಂದೂವರೆ ಗಂಟೆ ಮೊದಲೇ ಅಂದರೆ ಸಂಜೆ 6.30 ಕ್ಕೆ ದೇವಸ್ಥಾನ ಬಂದ್ ಆಗಲಿದೆ.
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ KSRTC ಬಸ್ ಚಾಲಕ ಮತ್ತು ಕಾರು ಚಾಲಕನ ನಡುವೆ ಮಾರಾಮಾರಿ ನಡೆದಿದೆ. ಓವರ್ ಟೆಕ್ ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿ ಬಸ್ ನಿಲ್ದಾಣದ ಒಳಗೆ ಚಾಲಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಚಾಲಕ ಕಲ್ಲೇಶ್ ಮತ್ತು ಕಾರು ಚಾಲಕ ಆಂಜನೇಯ ನಡುವೆ ಗಲಾಟೆ ನಡೆದಿದ್ದು, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ: ಜಿಲ್ಲೆಯ ಅಥಣಿಯಲ್ಲಿರುವ ಶಾಸಕ ಲಕ್ಷ್ಮಣ ಸವದಿ ಪುತ್ರ ಸುಮಿತ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪದ ಹಿನ್ನಲೆ ಇದೀಗ ಶಾಸಕರ ನಿವಾಸದಲ್ಲಿ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. RFO ಪ್ರಶಾಂತ್ ಗಾಣಿಗೇರ್ ನೇತೃತ್ವದ 10 ಅಧಿಕಾರಿಗಳು ಆಗಮಿಸಿದ್ದು, ಸರ್ಚ್ ವಾರಂಟ್‌ನೊಂದಿಗೆ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಮಲೆನಾಡು ಪ್ರದೇಶದಲ್ಲಿ ವನ್ಯ ಜೀವಿಗಳ ವಸ್ತು ಬಳಕೆ ವಿಚಾರ ‘ ಪಶ್ಚಿಮಘಟ್ಟದ ಎಲ್ಲಾ ಮನೆಗಳಲ್ಲಿ ಹುಲಿ ಉಗುರು, ಚರ್ಮ ಇನ್ನಿತರ ಪ್ರಾಣಿಗಳ ವಸ್ತುಗಳಿವೆ ಎಂದು ವಿಧಾನಸೌಧದಲ್ಲಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ. ‘ಆದಿ ಕಾಲದಿಂದಲೂ ಬೇಟೆಯಾಡಿ ಬದುಕಿದ್ದಾರೆ. ಕಳೆದ 25 ವರ್ಷಗಳಿಂದ ಬೇಟೆಯಾಡುತ್ತಿಲ್ಲ. ಈಗ ಬೇಟೆಯಾಡಿದ್ದಾರೆ ಎಂದು ಬಿಂಬಿಸುವುದು ಬೇಡ. ಸರ್ಕಾರ ವಾರ್ನಿಂಗ್ ಕೊಟ್ಟು ಸರಿ ಮಾಡಬೇಕು. ನಿಖಿಲ್, ದರ್ಶನ್, ಜಗ್ಗೇಶ್, ವಿನಯ ಗುರೂಜಿ ಎಲ್ಲರೂ ಕಾಡಿನಿಂದ ತಂದಿದ್ದು ಅಲ್ಲ, ಯಾರೋ ಕೊಟ್ಟಿರುವುದನ್ನು ಬಳಸಿದ್ದಾರೆ. ಅಧಿಕಾರಿಗಳ ಮನೆಯಲ್ಲೇ ಮೊದಲು ಇರುವುದು. ಅವರೇ ಈಗ ದಾಳಿ ಮಾಡ್ತಾ ಇದ್ದಾರೆ ಎಂದರು.
ಬೆಂಗಳೂರು: ಹಿಂದೆ ಯಾರು ಸರ್ಕಾರ ಉಳಿಸಿದ್ದರೋ, ಅವರೇ ಅಧಿಕಾರ ಇಲ್ಲದೇ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ವಿಧಾನಸೌಧದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ‘ರಾಜಕೀಯ ಬೇಳೆ ಬೇಯಿಸಲು, ಸರ್ಕಾರ ಉರುಳಿಸಲು ಹೀಗೆ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ಗೆ ಮುಂದೆ ಅವಕಾಶ ಸಿಗಬಾರದು ಎಂದು ಹೀಗೆ ಮಾಡುತ್ತಿದ್ದಾರೆ. ಇವರ ಜೊತೆ ಕುಮಾರಸ್ವಾಮಿ ಅವರೂ ಸೇರಿಕೊಂಡಿದ್ದಾರೆ. ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಮುಂದೆ ಬರಬಾರದು ಎಂದು ಮಾಡಿದ್ದಾರೆ ಎಂದರು.
ಶಿವಮೊಗ್ಗ: ನಗರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಆಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು. ‘ ಶಿವಮೊಗ್ಗ – ಭದ್ರಾವತಿ ಸಮಗ್ರ ಅಭಿವೃದ್ಧಿಗಾಗಿ 700-800 ಕೋಟಿ ವೆಚ್ಚದಲ್ಲಿ ಯೋಜನೆ ತರಲು ತೀರ್ಮಾನ ಮಾಡಲಾಗಿ, ಮುಂದಿನ ದಿನಗಳಲ್ಲಿ ಎಲ್ಲಾ ಕೆಲಸ ಅನುಷ್ಠಾನ ಮಾಡಲು ಸರಕಾರ ತೀರ್ಮಾನಿಸಿದೆ. ಇತರೆ ದೊಡ್ಡ ದೊಡ್ಡ ನಗರಗಳಿಗೆ ಹೋಲಿಸಿದರೆ ಶಿವಮೊಗ್ಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಹಳ ಕಡಿಮೆ ಲೇಔಟ್ ಆಗಿದೆ. ಸರಕಾರದಿಂದ ಸಾರ್ವಜನಿಕರಿಗೆ ಬಡವರಿಗೆ ನಿವೇಶನ ಕೊಡುವವರೆಗೆ ಖಾಸಗಿ ಲೇಔಟ್ ಗೆ ಅನುಮತಿ ನೀಡದಂತೆ ಸೂಚಿಸಲಾಗಿದೆ ಎಂದರು.
ಬೆಳಗಾವಿ: ಸವದಿ ಪುತ್ರ ಸುಮಿತ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ ಕೇಳಿಬಂದಿದ್ದು, ಈ ಕುರಿತು ‘ ನನ್ನ ಸಹೋದರನ ಬಳಿ ಇರುವುದು ಪ್ಲಾಸ್ಟಿಕ್ ಉಗುರು ಎಂದು ಜಿಲ್ಲೆಯ ಅಥಣಿಯಲ್ಲಿ ಸವದಿ ಹಿರಿಯ ಪುತ್ರ ಚಿದಾನಂದ ಹೇಳಿದ್ದಾರೆ.
ಮದುವೆ ಸಮಾರಂಭದಲ್ಲಿ ಸುಮಿತ್ ಗೆಳೆಯರು ಉಡುಗೊರೆ ಕೊಟ್ಟಿದ್ದಾರೆ. ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡುತ್ತೇವೆ. ಕಾನೂನಿನಿಗಿಂತ ಯಾರೂ ದೊಡ್ಡವರಲ್ಲ, ತನಿಖೆಗೆ ಸಹಕರಿಸುತ್ತೇವೆ. ಈ ಭಾಗದಲ್ಲಿ ಹುಲಿ ಉಗುರೆಂದು ಧರಿಸುವುದು ಒಂದು ರೀತಿ ಶೋಕಿ ಇದೆ. ಆದರೆ, ಇದು ಪ್ಲಾಸ್ಟಿಕ್ನಿಂದ ಮಾಡಿರುವ ಹುಲಿ ಉಗುರಿನ ಆಕೃತಿ ಆಗಿದೆ ಎಂದರು.
ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಡಿಆರ್ಎಫ್ಒ ದರ್ಶನ್ ಅಮಾನತುಗೊಳಿಸಿ ಕೊಪ್ಪ ಡಿಎಫ್ಒ ನಂದೀಶ್ ಆದೇಶ ಹೊರಡಿಸಿದ್ದಾರೆ. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಡಿಆರ್ಎಫ್ಒ ದರ್ಶನ್ ಅಮಾನತು ಮಾಡಲಾಗಿದೆ. DRFO ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ತನಿಖೆ ನಡೆಸಿ ಕ್ರಮಕೈಗೊಳ್ಳಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದರ್ಶನ್ ವಿರುದ್ಧ ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ದೂರು ನೀಡಿದ್ರು. ಸದ್ಯ DRFO ದರ್ಶನ್ ಅಮಾನತುಗೊಳಿಸಿ ಕೊಪ್ಪ ಡಿಎಫ್ಒ ನಂದೀಶ್ ಆದೇಶ ಹೊರಡಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ದಲಿತ ಯುವಕ ಮೃತ ಸುರೇಶ್(24) ಅಂತ್ಯಸಂಸ್ಕಾರಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಸಸ್ಯಕ್ಷೇತ್ರದ ಭೂಮಿ ಸ್ಮಶಾನಕ್ಕೆ ನೀಡಿ ಕಂದಾಯ ಇಲಾಖೆ ಎಡವಟ್ಟು ಮಾಡಿದ್ದು ಅನಾರೋಗ್ಯದಿಂದ ಸಾವನ್ನಪ್ಪಿದ ಸುರೇಶ್ ಅಂತ್ಯಕ್ರಿಯೆಗಾಗಿ ಜಾಗ ಇಲ್ಲ. ಸ್ಮಶಾನದ ಭೂಮಿಗಾಗಿ ಬೈಚಾಪುರ ದಲಿತ ಕುಟುಂಬಸ್ಥರು 40 ವರ್ಷದಿಂದ ಪರದಾಡುತ್ತಿದ್ದಾರೆ.
ಹೆಸರು ಬದಲಾವಣೆಯ ವೀರ ಅಂದರೆ ಅದು ಡಿ.ಕೆ.ಶಿವಕುಮಾರ್ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಶಾಸಕ ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ. ರಾಮನಗರ ಉಸ್ತುವಾರಿ ಸಚಿವರಾಗದೆ ಬೆಂಗಳೂರಿಗೆ ಬಂದಿದ್ದೀರಿ. ಜನರಿಗೆ ಒಳ್ಳೆಯದು ಮಾಡಲ್ಲ, ಆದ್ರೆ ಕೆಟ್ಟದ್ದನ್ನಂತೂ ಮಾಡಬೇಡಿ. ಮಂತ್ರಿ ಆಗಿ ಎಷ್ಟು ಕೆಡಿಪಿ ಸಭೆಗಳನ್ನು ಮಾಡಿದ್ದೀರಿ. ಹೆಚ್.ಡಿ.ಕುಮಾರಸ್ವಾಮಿ ಸತ್ಯಾಗ್ರಹಕ್ಕೆ ನಮ್ಮ ಬೆಂಬಲ ಇದೆ ಎಂದರು.
ಬೆಂಗಳೂರು ಜಿಲ್ಲೆಗೆ ಕನಕಪುರ ಸೇರಿಸುವ ಬಗ್ಗೆ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಡಿ.ಕೆ.ಶಿವಕುಮಾರ್ ವಿರುದ್ಧ ಶಾಸಕ ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ. 4 ಬಾರಿ ಸಾತನೂರು, 4 ಬಾರಿ ಕನಕಪುರ ಕ್ಷೇತ್ರ ಪ್ರತಿನಿಧಿಸಿದ್ದೀರಿ. ಇಷ್ಟಾದರೂ ನಿಮ್ಮ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಡಿ.ಕೆ.ಶಿವಕುಮಾರ್ಗೆ ಇಷ್ಟು ವರ್ಷವಿಲ್ಲದ ಪರಿಜ್ಞಾನ ಈಗ ಬಂತಾ? ಎಂದು ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದರು. ರಾಮನಗರಕ್ಕೆ ಹಲವರ ಕೊಡುಗೆ ಇದೆ. ಡಿ.ಕೆ.ಶಿವಕುಮಾರ್ ರಾಮದೇವರ ಬೆಟ್ಟಕ್ಕೆ ಒಂದು ಕಲ್ಲೂ ಎತ್ತಿಟ್ಟಿಲ್ಲ. ರಾಮನಗರಕ್ಕೆ ಮೋದಿ ಕೊಡುಗೆ ಅಪಾರ, ನಿಮ್ಮ ಕೊಡುಗೆ ಏನಿಲ್ಲ ಎಂದರು.
ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಮಿತಿಮೀರಿದ ಕಾಡಾನೆಗಳ ಉಪಟಳದಿಂದ ರೈತರು ಕಂಗಾಲಾಗಿದ್ದಾರೆ. ಬಿಕ್ಕೋಡು, ಇಲಕರವಳ್ಳಿ, ಲಕ್ಕುಂದ, ಮಲ್ಸಾವರ, ಮತ್ಸಾವರ ಸೇರಿ ವಿವಿಧ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ. ಕಾಫಿ, ಬಾಳೆ, ಮೆಕ್ಕೆಜೋಳ, ಭತ್ತ, ಮೆಣಸು ಬೆಳೆ ನಾಶ ಮಾಡುತ್ತಿವೆ. ಕಾಡಾನೆಗಳನ್ನು ಕಾಡಿಗಟ್ಟಲು ಇಟಿಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದು ಕಾಡಾನೆಗಳ ಮುಕ್ತಿಗೆ ಸರ್ಕಾರ, ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಟಿವಿ9 ಲೈಫ್ ಸ್ಟೈಲ್, ಫರ್ನಿಚರ್, ಆಟೋಮೊಬೈಲ್ ಎಕ್ಸ್ ಪೋಗೆ ಚಾಲನೆ ಸಿಕ್ಕಿದೆ. ಇಂದಿನಿಂದ 3 ದಿನಗಳ ಕಾಲ ಎಕ್ಸ್ ಪೋ ನಡೆಯಲಿದೆ. ಎಕ್ಸ್ ಪೋನಲ್ಲಿ ನಟಿ ಧನ್ಯಾ ರಾಮ್ಕುಮಾರ್, ನಟ ಚಿಕ್ಕಣ್ಣ, ವಿಕ್ಕಿ ಅರುಣ್, ವಿಕ್ಕಿ ಅರುಣ್, ನವೀನ್ ಗಿರಿಯಾ, ಟಿ.ಎ.ಶರವಣ, ನೊಬೆಲ್ ಜೈಕರ್ ಭಾಗಿಯಾಗಿದ್ದಾರೆ. ಎಕ್ಸ್ ಪೋನಲ್ಲಿ ಫರ್ನಿಚರ್ಸ್, ಸೋಫಾ, ಡೈನಿಂಗ್ ಟೇಬಲ್, ಕಾರು, ಬೈಕ್, ಎಲೆಕ್ಟ್ರಾನಿಕ್ ವಸ್ತು, ಟಿವಿ, ವಾಷಿಂಗ್ಮಷಿನ್, ಫ್ರಿಡ್ಜ್, ಹೋಮ್ ಡೆಕೋರೇಟ್ ವಸ್ತುಗಳು, ಡ್ರೇಸೆಸ್, ಲ್ಯಾಪ್ಟಾಪ್ ಸೇರಿ 100ಕ್ಕೂ ಹೆಚ್ಚು ಸ್ಟಾಲ್ಗಳು ಟಿವಿ9 ಎಕ್ಸ್ ಪೋನಲ್ಲಿ ಲಭ್ಯವಿದೆ.
‘ಹುಲಿ ಉಗುರು ಕೇಸ್ನಲ್ಲಿ ಹಿಂದೂಗಳ ಟಾರ್ಗೆಟ್ ಮಾಡಲಾಗ್ತಿದೆ’ ಎಂಬ ಅರವಿಂದ ಬೆಲ್ಲದ್ ಆರೋಪಕ್ಕೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಧರ್ಮಕ್ಕೆ ಸೇರಿದರೂ ಕಾನೂನು ಒಂದೇ. ಕಾನೂನಿನಡಿ ಕ್ರಮ ತೆಗೆದುಕೊಳ್ತೇವೆಂದು ಅರಣ್ಯ ಸಚಿವರೇ ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕೊರಳಲ್ಲಿ ಹುಲಿ ಪೆಂಡೆಂಟ್ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಸಮಯದಲ್ಲಿ ಯಾರೋ ಗಿಫ್ಟ್ ಕೊಟ್ಟಿದ್ದರು ಅಂತ ಅದನ್ನ ಹಾಕಿದ್ದ. ಮೃಣಾಲ್ ಹಾಕಿದ ಪೆಂಡೆಂಟ್ ಪ್ಲಾಸ್ಟಿಕ್‌ದ್ದು. ದು ಒರಿಜಿನಲ್ ಪೆಂಡೆಂಟ್ ಅಲ್ಲ. ನಾನೂ ಸಸ್ಯಾಹಾರಿ ಹುಲಿ ಜಿಂಕೆ ಕೋಳಿ, ಇನ್ಯಾವುದೇ ಬಲಿಯನ್ನು ನಾನು ಇಷ್ಟ ಪಡಲ್ಲ. ಸದ್ಯ ನಮ್ಮ ಸಂಬಂಧಿಕರು ಬಂದಿದ್ದಾರೆ ಅವರನ್ನು ಬೀಳ್ಕೊಟ್ಟು ಬರ್ತಿನಿ. ನಂತರ ಅಧಿಕಾರಿಗಳು ಕೇಳುವ ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದು ಸಚಿವೆ ತಿಳಿಸಿದರು.
ಶ್ರೀರಾಮಸೇನೆ ಕಾರ್ಯಕರ್ತರಿಂದ ದತ್ತಮಾಲಾ ಅಭಿಯಾನ ಹಿನ್ನೆಲೆ 3 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ನವೆಂಬರ್ 4ರ ಬೆಳಗ್ಗೆ 6ರಿಂದ ನವೆಂಬರ್ 6ರ ಬೆಳಗ್ಗೆ 10ರವರೆಗೆ ದತ್ತಪೀಠ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ, ಮಾಣಿಕ್ಯಾಧಾರ, ಗಾಳಿಕೆರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೇಲ್ಕಾರ್ ಗ್ರಾಮದಲ್ಲಿ ಅ.25ರಂದು ಶಾರದೋತ್ಸವ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಚಾಕು ಇರಿದು ಮೂವರಿಗೆ ಗಾಯಗಳಾಗಿವೆ. ಹುಲಿ ವೇಷ ಹಾಕುವ ವಿಚಾರಕ್ಕೆ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಮೂವರಿಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್, ಶಂಕರ್ಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಂಗಸ್ವಾಮಿ ಅವರು ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ವಿದ್ಯಾರ್ಥಿನಿ ಮೇಲೆ ಎರಚಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮುಖ್ಯಶಿಕ್ಷಕನ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಈಗ ಅಮಾನತುಗೊಳಿಸಲಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ರಾತ್ರೋರಾತ್ರಿ ರಾಷ್ಟ್ರಕವಿ ಕುವೆಂಪು, ಪುನೀತ್ ರಾಜ್ಕುಮಾರ್ ಪ್ರತಿಮೆ ತೆರವು ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕರವೇ ಕಾರ್ಯಕರ್ತರು ಪ್ರತಿಮೆಗಳನ್ನು ಸ್ಥಾಪಿಸಿದ್ದರು. ಇಂದಿರಾ ಕ್ಯಾಂಟೀನ್ ಮುಂಭಾಗ ಪುನೀತ್ ಪ್ರತಿಮೆ ಸ್ಥಾಪಿಸಲಾಗಿತ್ತು. ಅನಧಿಕೃತವಾಗಿ ಸ್ಥಾಪಿಸಿದ್ದಾರೆಂದು ನಗರಸಭೆ ಅಧಿಕಾರಿಗಳು ಪ್ರತಿಮೆಗಳ ತೆರವು ಕಾರ್ಯ ಮಾಡಿದ್ದಾರೆ. ನಗರಸಭೆ ಸಿಬ್ಬಂದಿ ವಿರುದ್ಧ ಕರವೇ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಮನೆಯಲ್ಲಿ ಅಕ್ರಮವಾಗಿ ಆನೆ ಹಲ್ಲು ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಉದಯಗಿರಿಯ ಮನೆ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದು ಅಭಿರಾಮ ಸುಂದರಂ ಎಂಬಾತನನ್ನು ಬಂಧಿಸಿದ್ದಾರೆ. ಹಾಘೂ ಆನೆ ದಂತ ವಶಕ್ಕೆ ಪಡೆದಿದ್ದಾರೆ. ನ್ಯಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರನ ಮತ್ತೊಂದು ಪುಂಡಾಟ ಬಯಲಾಗಿದೆ. ಬೆಂಗಳೂರಿನ ಯಲಹಂಕದ ರಸ್ತೆಯಲ್ಲಿ ರಾತ್ರಿ ಕಂಠಪೂರ್ತಿ ಕುಡಿದು ಆ್ಯಡಂ ಬಿದ್ದಪ್ಪ ಹೈಡ್ರಾಮಾ ಮಾಡಿದ್ದಾರೆ. ಮೊನ್ನೆ ರಾತ್ರಿ ಮದ್ಯ ಸೇವಿಸಿ ಱಶ್ ಡ್ರೈವಿಂಗ್ ಮಾಡಿದ್ದಾರೆ. ಈ ವೇಳೆ ಹಿಂದೆಯಿದ್ದ ಕಾರು ಚಾಲಕ ರಾಹುಲ್ ಹಾರನ್ ಮಾಡಿದ್ದು ಅಷ್ಟಕ್ಕೇ ಕಾರ್ ಓವರ್ ಟೇಕ್ ಮಾಡಿ ಆ್ಯಡಂ ಬಿದ್ದಪ್ಪ ಗಲಾಟೆ ಮಾಡಿದ್ದಾರೆ.
ಕೋಲಾರ ಜಿಲ್ಲಾಸ್ಪತ್ರೆಯಿಂದ ಮಗು ಕಳವು ಪ್ರಕರಣಕ್ಕೆ ಸಂಬಂಧಿಸಿ ಕೋಲಾರ ಮಹಿಳಾ ಠಾಣೆ ಪೊಲೀಸರಿಂದ ಮಗುವಿನ ರಕ್ಷಣೆ ಮಾಡಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಲಾಗಿದೆ.ಕೋಲಾರ ಗಡಿ ತಮಿಳುನಾಡಿನ ಬೇರಿಕೆ ಬಳಿ ಮಗು ರಕ್ಷಣೆ ಮಾಡಿದ್ದು ನಾಲ್ಕು ದಿನದ ಪುಟ್ಟ ಕಂದಮ್ಮ ತಾಯಿ ಮಡಿಲು ಸೇರಿದೆ. ಮಗು ಕಳ್ಳತನ ಮಾಡಿದ್ದ ಆರೋಪಿಗಳ ಪೈಕಿ ಓರ್ವ ಮಹಿಳೆ ಅರೆಸ್ಟ್ ಆಗಿದ್ದಾರೆ.
Published On - 8:06 am, Fri, 27 October 23