ದಸರಾ ವೇಳೆ ಮೈಸೂರು ಅರಮನೆ, ಮೃಗಾಲಯಕ್ಕೆ ಭೇಟಿ ಕೊಟ್ಟ ಪ್ರವಾಸಿಗರ ದಂಡು; ಆದಾಯ ಹೆಚ್ಚಳ
ದಸರಾ ವೇಳೆ ಪ್ರವಾಸಿಗರು ಮೈಸೂರಿನ ಪ್ರವಾಸಿ ತಾಣಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟಿದ್ದಾರೆ. ದಸರಾ ವೇಳೆ ಮೈಸೂರು ಅರಮನೆ, ಮೃಗಾಲಯಕ್ಕೆ ಪ್ರವಾಸಿಗರ ದಂಡು ಹರಿದು ಬಂದಿದ್ದು ಆದಾಯದಲ್ಲಿ ಏರಿಕೆಯಾಗಿದೆ.
ಮೈಸೂರು, ಅ.27: ವಿಶ್ವವಿಖ್ಯಾತ ಮೈಸೂರು ದಸರಾ ವೈಭವ ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಭೇಟಿ ನೀಡಿದ್ದರು (Mysuru Dasara 2023). ಇನ್ನು ಇದೇ ವೇಳೆ ಪ್ರವಾಸಿಗರು ಮೈಸೂರಿನ ಪ್ರವಾಸಿ ತಾಣಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟಿದ್ದಾರೆ. ದಸರಾ ವೇಳೆ ಮೈಸೂರು ಅರಮನೆ (Mysuru Palace), ಮೃಗಾಲಯಕ್ಕೆ (Mysuru Zoo) ಪ್ರವಾಸಿಗರ ದಂಡು ಹರಿದು ಬಂದಿದ್ದು ಆದಾಯದಲ್ಲಿ ಏರಿಕೆಯಾಗಿದೆ. ಅರಮನೆಗೆ ಅಕ್ಬೋಬರ್ 9 ರಿಂದ ಅ. 23ರವರೆಗೆ ಒಟ್ಟು 15 ದಿನಗಳಲ್ಲಿ 1,67,065 ಜನರು ಭೇಟಿ ಕೊಟ್ಟಿದ್ದಾರೆ.
ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೀಗಿದೆ.
ಅ.9ರಂದು 5,229 ಮಂದಿ (ಮಧ್ಯಾಹ್ನ 2ರಿಂದ ಸಂಜೆ 5.30ರವರಗೆ), ಅ.10 ರಂದು 6,714, ಅ.11ರಂದು 5,960, ಅ.12ರಂದು 7,675, ಅ.13 ರಂದು 9,253, ಅ.14ರಂದು 15,485, ಅ.15ರಂದು 12,513, ಅ.16ರಂದು 9,958, ಅ.17ರಂದು 10,376, ಅ.18ರಂದು 10,622, ಅ.19ರಂದು 10,699, ಅ.20ರಂದು 12,345, ಅ.21ರಂದು 17,863, ಅ.22ರಂದು 21,560, ಅ.23ರಂದು 10,813 ಸೇರಿದಂತೆ ಒಟ್ಟಾರೆ 1,67,065 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ.
ಅರಮನೆಯಲ್ಲಿ ರಾಜಮನೆತನದ ಧಾರ್ಮಿಕ ಕಾರ್ಯ ಹಿನ್ನೆಲೆ ನಾಲ್ಕು ದಿನ ಮಧ್ಯಾಹ್ನದವರೆಗೂ ಬಂದ್ ಆಗಿತ್ತು. ವಿಜಯದಶಮಿ ದಿನ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಇದನ್ನೂ ಓದಿ:Jamboo Savari 2023: ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ, ಸತತ 4ನೇ ಬಾರಿ ಅಂಬಾರಿ ಹೊರಲಿದ್ದಾನೆ ಅಭಿಮನ್ಯು
ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೀಗಿದೆ
ಮೈಸೂರು ಮೃಗಾಲಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ಅ.15ರಿಂದ 24ರವರೆಗೆ 1,65,003 ಮಂದಿ ಭೇಟಿ ನೀಡಿದ್ದಾರೆ.
ಅ.15ರಂದು 16,600 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅ.16ರಂದು 10,145, ಅ.17ರಂದು 8,599, ಅ.18ರಂದು 10,603, ಅ.19ರಂದು 11,098, ಅ.20ರಂದು 11,280, ಅ.21ರಂದು 16,875, ಅ.22ರಂದು 25,180, ಅ.23ರಂದು 28,287, ಅ.24ರಂದು 23,890 ಅಲ್ಲದೇ, 2,426 ಇತರೆ ಪ್ರವಾಸಿಗರು ಸೇರಿದಂತೆ ಒಟ್ಟಾರೆ 1,65,003 ಮಂದಿ ಆಗಮಿಸಿದ್ದಾರೆ.
ಇನ್ನು ಮೈಸೂರು ದಸರಾ ವೇಳೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ, ನಂಜನಗೂಡಿನ ಶ್ರೀನಂಜುಂಡೇಶ್ವರ ದೇವಾಲಯ ಸೇರಿದಂತೆ ಮೈಸೂರಿನ ಹಲವು ದೇವಾಲಯಗಳು ಹಾಗೂ ಪ್ರವಾಸಿತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಿಂದ ಆದಾಯ ಕೂಡ ಹೆಚ್ಚಳವಾಗಿದೆ.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ