Karnataka Breaking News Highlights: ವಿಪಕ್ಷಗಳ ಸಭೆ ಹಿನ್ನೆಲೆ ನಾಳೆ ಬೆಂಗಳೂರಿಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ
Breaking News Today Live Updates: ಕರ್ನಾಟಕ ರಾಜಕೀಯ, ಮಳೆ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.
Karnataka Breaking News Live: ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್ ಅಧಿವೇಶನ (Assembly Session) ನಡೆಯುತ್ತಿದ್ದು, ಸರ್ಕಾರ ಮತ್ತು ವಿಪಕ್ಷಗಳ ನಡುವೆ ವಾಗ್ವಾದಗಳು ನಡೆಯುತ್ತಿವೆ. ಇದರ ಜೊತೆಗೆ ಮಹತ್ವದ ಚರ್ಚೆಗಳು ಕೂಡ ನಡೆಯುತ್ತಿವೆ. ಇನ್ನು ನಿನ್ನೆ(ಜು.16) ಮಹಿಳಾ ಮತ್ತು ಮಕ್ಕಳ ಸಚಿವೆ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ನ 5 ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಗೆ ಇದೇ ಜುಲೈ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆಂದು ಹೇಳಿದರು. ಬೆಳಗಾವಿಯ ಚಿಕ್ಕೋಡಿಯ ಜೈನಮುನಿ ಹತ್ಯೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅಲ್ಲದೇ ರಾಜ್ಯದ ಕರವಾಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು (Karnataka Rains), ಕೆಲವು ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗದೆ ರೈತರು ಕಂಗಾಲ ಆಗಿದ್ದಾರೆ. ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಬಗೆಗಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
LIVE NEWS & UPDATES
-
Karnataka Breaking News Live: ತುರ್ತು ಚಿಕಿತ್ಸೆ, ಜೀರೋ ಟ್ರಾಫಿಕ್ ಮೂಲಕ ಮೂರು ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆದೊಯ್ಯುತ್ತಿರುವ ಆಂಬುಲೆನ್ಸ್
ಶಿವಮೊಗ್ಗ: ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಹೃದಯ ಕಾಯಿಲೆಯಿಂದ ಬಳಲುತ್ತಿರುವ ಮೂರು ದಿನದ ಕರಿಷ್ಮಾ ಎನ್ನುವ ಮಗುವಿನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ತೆರೆದ ಹೃದಯದ ಆಪರೇಶನ್ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಸರ್ಜಿ ಆಸ್ಪತ್ರೆಯಿಂದ ಬೆಂಗಳೂರಿನ ಎನ್ ಎಚ್ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದ್ದು, ಬೆಂಗಳೂರಿಗೆ ತೆರಳಲು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್ನ ನಿಲೇಶ್ ಜೈನ್ ಮತ್ತು ಮೋನಿಕಾ ದಂಪತಿಗಳ ಪುತ್ರಿ ಕರಿಷ್ಮಾಳ ವಿಚಾರ ತಿಳಿದ ಕಾಂಗ್ರೆಸ್ ಮುಖಂಡ ಮುಹಿಬ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದಿದ್ದಾರೆ. ಮಧು ಬಂಗಾರಪ್ಪ ಅವರು ಎಸ್ಪಿ ಮಿಥುನ್ ಕುಮಾರ್ ಅವರನ್ನು ಸಂಪರ್ಕಿಸಿದ್ದು, ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ. ಸದ್ದಾಂ, ಮಗುವನ್ನು ಕರೆದುಕೊಂಡು ಹೋಗುತ್ತಿರುವ ಅಂಬುಲೆನ್ಸ್ ಚಾಲಕರಾಗಿದ್ದಾರೆ.
-
Karnataka Breaking News Live: ಹಣದ ವಿಚಾರಕ್ಕೆ ತಂದೆ, ಮಗನ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ
ಹಣದ ವಿಚಾರಕ್ಕೆ ತಂದೆ, ಮಗನ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ. ನಿವೃತ್ತ ಬಿಎಂಟಿಸಿ ಡ್ರೈವರ್ ಕೃಷ್ಣಮೂರ್ತಿ(63) ಕೊಲೆಯಾದವರು. ಮನೆ ಖರೀದಿಸಲು ಪುತ್ರ ಅರ್ಜುನ್ ತಂದೆಗೆ 15 ಲಕ್ಷ ಹಣ ಕೊಟ್ಟಿದ್ದ. ಮನೆಯಿಂದ ಬಂದ ಅಡ್ವಾನ್ಸ್, ಬಾಡಿಗೆ ಹಣ ತಾನೇ ಇಟ್ಟುಕೊಳ್ತಿದ್ದ ತಂದೆ ಮಗನಿಗೆ ಹಣವನ್ನು ವಾಪಸ್ ಕೊಟ್ಟಿಲ್ಲ. ಈ ಕಾರಣಕ್ಕೆ ಜಗಳ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಕರಣ ಸಂಬಂಧ ಅರ್ಜುನ್(28) ನನ್ನು ಪೊಲೀಸರು ಬಂಧಿಸಿದ್ದಾರೆ.
-
Karnataka Breaking News Live: ಬೆಂಗಳೂರಿಗೆ ಆಗಮಿಸಿದ ಸೀತಾರಂ ಯೆಚೂರಿ
ದೇವನಹಳ್ಳಿ: ನಾಳೆಯಿಂದ ನಡೆಯಲಿರುವ ಕಾಂಗ್ರೆಸ್ ಮಿತ್ರಕೂಟ ಸಭೆಯಲ್ಲಿ ಪಾಲ್ಗೊಳ್ಳಲು ಕಮ್ಯುನಿಸ್ಟ್ ಪಾರ್ಟಿ ಆಪ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಇಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
Karnataka Breaking News Live: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಹೃದಯಾಘಾತದಿಂದ ಸಾವು
ಕರ್ನಾಟಕ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ ರವಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೆಲಸ ಮಾಡುತ್ತಿದ್ದ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಡಿಜಿ ಐಜಿಪಿ ಕಚೇರಿಯ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
Karnataka Breaking News Live: ವಿಪಕ್ಷಗಳ ಸಭೆ ಹಿನ್ನೆಲೆ ನಾಳೆ ಬೆಂಗಳೂರಿಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ
ನಾಳೆ ಮತ್ತು ನಾಡಿದ್ದು ಬೆಂಗಳೂರಿನಲ್ಲಿ ಮಹಾ ಮೈತ್ರಿಕೂಟದ ಸಭೆ ನಡೆಯಲಿರುವ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಂಗಳವಾರ ಬೆಳಗ್ಗೆ ಸೋನಿಯಾ ಗಾಂಧಿ ಅವರು ಸಭೆಗೆ ಆಗಮಿಸಲಿದ್ದಾರೆ.
Karnataka Breaking News Live: ವಿಳಂಬ ನೀತಿ ಅನುಸರಿಸದೇ ಸರ್ಕಾರ ತಕ್ಷಣ ಬರಗಾಲ ಅಂತಾ ಘೋಷಣೆ ಮಾಡಬೇಕು: ಈರಣ್ಣ ಕಡಾಡಿ
ಚಿಕ್ಕೋಡಿ: ಜುಲೈ ತಿಂಗಳು ಆರಂಭವಾಗಿ 15 ದಿನ ಕಳೆದರೂ ಸಮರ್ಪಕ ಮಳೆಯಾಗದ ಹಿನ್ನೆಲೆ ಬರಗಾಲ ಘೋಷಣೆಗೆ ರೈತರ ಆಗ್ರಹ ವಿಚಾರವಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಳಂಬ ನೀತಿ ಅನುಸರಿಸದೇ ಸರ್ಕಾರ ತಕ್ಷಣ ಬರಗಾಲ ಅಂತಾ ಘೋಷಣೆ ಮಾಡಬೇಕು. ರಾಜ್ಯದಲ್ಲಿ ವಾಡಿಕೆಗಿಂತ ಶೇಕಡ 45ರಷ್ಟು ಮಾತ್ರ ಮಳೆಯಾಗಿದೆ. ಬರಗಾಲ ಘೋಷಣೆ ಆಗಸ್ಟ್‌ನಲ್ಲಿ ನೋಡುವುದಾಗಿ ಹೇಳುತ್ತಿದ್ದಾರೆ. ಒಂದೂವರೆ ತಿಂಗಳು ಮಳೆ ವಿಳಂಬ ಆಗಿದೆ, ಬಿತ್ತಿದ ಬೆಳೆ ಎಲ್ಲ ಒಣಗುತ್ತಿವೆ. ವಿಳಂಬನೀತಿ ಅನುಸರಿಸದೇ ತಕ್ಷಣ ಬರಗಾಲ ಅಂತಾ ಘೋಷಣೆ ಮಾಡಲಿ ಎಂದರು. ಎನ್‌ಡಿಆರ್‌ಎಫ್ ನಿಯಮಾವಳಿ ಬದಲಾವಣೆ ತಂದು ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರಕ್ಕೆ ರೈತರ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಹಿಂದೆ ಕೇಂದ್ರ ಸರ್ಕಾರ ದಾರಿ ಕಾಯ್ದೆ ಯಡಿಯೂರಪ್ಪ ಯಾವ ರೀತಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ್ದರು ಎಂದು ಎಲ್ಲರಿಗೂ ಗೊತ್ತು. ನೀವು ಪರಿಹಾರ ಕೊಡುವ ಕೆಲಸ ಮಾಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತದೆ ಎಂದರು.
Karnataka Breaking News Live: ಅರ್ಕಾವತಿ ಹಗರಣದಲ್ಲಿ ಇದ್ದವರು ಅವರೇ, ಕದ್ದವರೂ ಅವರೇ: ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ
ಚಿಕ್ಕಮಗಳೂರು: ವಿಧಾನಸಭೆ, ಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಳಂಬ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಕಾಂಗ್ರೆಸ್ನವರಿಗೆ ಈಗ ಆರಾಮಾಯಿತಲ್ಲ, ಈಗ ಅವರಿಗೇಕೆ ಭಯ? ವಿಪಕ್ಷ ನಾಯಕ ಇದ್ದಿದ್ದರೆ ಅರ್ಕಾವತಿ ಪ್ರಕರಣ ಹೊರ ತೆಗೆಯುತ್ತಿದ್ದರು. ಈಗ ಕಾಂಗ್ರೆಸ್ನವರು ನಿಶ್ಚಿಂತೆಯಾಗಿ ಇರಬಹುದಲ್ವಾ? ಅರ್ಕಾವತಿ ಖದೀಮರು ಯಾರು ಎಂದರೆ ತಡಬಡಾಯಿಸಬೇಕಿತ್ತು. ನಾನು ಹತ್ತಾರು ಬಾರಿ ಕೇಳಿದ್ದೇನೆ ಈವರೆಗೂ ಉತ್ತರ ಕೊಟ್ಟಿಲ್ಲ. ಅರ್ಕಾವತಿ ಹಗರಣದಲ್ಲಿ ಇದ್ದ ಮೂವರಲ್ಲಿ ಕದ್ದವರು ಯಾರು? 8000 ಕೋಟಿ ಲೂಟಿ ಹೊಡೆದವರು ಯಾರೆಂದು ಕೇಳುತ್ತಲೇ ಇದ್ದೇನೆ. ಉತ್ತರ ಕೊಡುವ ಧೈರ್ಯವೂ ಅವರಿಗಿಲ್ಲ. ಯಾಕಂದರೆ ಇದ್ದವರು ಅವರೇ, ಕದ್ದವರೂ ಅವರೇ ಎಂದರು.
Karnataka Breaking News Live: ಕುಮಾರಸ್ವಾಮಿ ವಿಪಕ್ಷ ನಾಯಕರಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ: ಆಯನೂರು ಮಂಜುನಾಥ್
ಶಿವಮೊಗ್ಗ: ಕುಮಾರಸ್ವಾಮಿ ಅವರು ವಿಪಕ್ಷ ನಾಯಕರಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ಮಾಜಿ ಎಂಎಲ್ಸಿ ಆಯನೂರು ಮಂಜುನಾಥ್ ಹೇಳಿದ್ದಾರೆ. ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈಹಿಡಿದಿದೆ. ಕಾಂಗ್ರೆಸ್ ನಾಯಕರು ಸಹ ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಬಹಳ ಕಡಿಮೆ ಸ್ಥಾನ ದೊರೆತಿದೆ. ವಿರೋಧ ಪಕ್ಷದ ನಾಯಕರಾಗಿ ಕುಮಾರಸ್ವಾಮಿ ವಿಜೃಂಭಿಸುತ್ತಿದ್ದಾರೆ. ಜುಲೈ 28ರ ನಂತರ ಅಧಿಕೃತ ವಿಪಕ್ಷ ನಾಯಕರಾಗಿ ಆಯ್ಕೆ ನಿರೀಕ್ಷೆ ಇದೆ. ಯಾರನ್ನು ಬಿಟ್ಟು ಬಂದೆನೋ ಅವರನ್ನೇ ಅಪ್ಪಿಕೊಳ್ಳುವ ಸಂದರ್ಭ ಬಂದಿದೆ ಎಂದು ಹೇಳುವ ಮೂಲಕ ಪರೋಕ್ಷ ವಾಗಿ ಬಿಜೆಪಿ ಪಕ್ಷದ ಜೊತೆ ಜೆಡಿಎಸ್ ಪಕ್ಷ ಬೆಂಬಲ ಸುಳಿವು ನೀಡಿದರು.
Karnataka Breaking News Live: ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಇತ್ಯರ್ಥ ಮಾಡುತ್ತೇನೆ: ಈಶ್ವರ್ ಖಂಡ್ರೆ
ಮೈಸೂರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ರಾಜಕೀಯ ಹೈ ಡ್ರಾಮಾ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ನಿಗಮ ಮಂಡಳಿಯಲ್ಲಿ ಗೊಂದಲವಿರುವುದು ಗಮನಕ್ಕೆ ಬಂದಿದೆ. ಮೂರು ದಿನಗಳಿಂದ ಪ್ರವಾಸ ಇದ್ದೆ. ನಾಳೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಇತ್ಯರ್ಥ ಮಾಡುತ್ತೇನೆ. ಮಂಡಳಿ ಪಾರದರ್ಶಕತೆ ಹಾಗೂ ದಕ್ಷತೆಯಿಂದ ಕೆಲಸ ನಡೆಯುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಸೂರಿ ಪಾಯಲ್ ನೇಮಕಾತಿ ವಿಚಾರಕ್ಕೆವಾಗಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನಾಳೆ ಸಭೆ ನಡೆಸಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತಗತ್ತೇನೆ ಎಂದರು.
Karnataka Breaking News Live: ಸ್ಪೀಕರ್ ಯುಟಿ ಖಾದರ್ಗೆ ‘ದಿ ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿ ಪ್ರದಾನ
ಸ್ಪೀಕರ್ ಯು.ಟಿ. ಖಾದರ್ ಅವರಿಗೆ ‘ದಿ ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ನಲ್ಲಿ ನಡೆದ ಭಾರತೀಯ ಬುದ್ಧಿಜೀವಿಗಳ ಸಮ್ಮೇಳನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಛತ್ತೀಸ್‌ಗಢ ರಾಜ್ಯಪಾಲ ಬಿಸ್ವ ಭೂಷಣ ಹರಿಚರಣ್, ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ವಿ ಗೋಪಾಲ್ ಗೌಡ ಅವರು ಉಪಸ್ಥಿತರಿದ್ದರು.
Karnataka Breaking News Live: ನೀರಿನ ಸಮಸ್ಯೆ ಇದೆ, ತಮಿಳುನಾಡಿಗೆ ನೀರು ಬಿಡಲಾಗುತ್ತಿಲ್ಲ: ಕೃಷಿ ಸಚಿವ
ಕಾವೇರಿ ನೀರಿಗಾಗಿ ತಮಿಳುನಾಡಿನಿಂದ ಮತ್ತೆ ಕ್ಯಾತೆ ತೆಗೆದಿರುವ ಬಗ್ಗೆ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ನೀರು ಹರಿಸುವಂತೆ ನಿರ್ವಹಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ. ಮಾನಿಟರ್ ಕಮಿಟಿ ಮುಂದೆ ತಮಿಳುನಾಡು ಮನವಿ ಮಾಡಿದೆ. ಇಲ್ಲಿ ನೀರಿನ ಸಮಸ್ಯೆ ಇದೆ, ತಮಿಳುನಾಡಿಗೆ ನೀರು ಬಿಡಲಾಗುತ್ತಿಲ್ಲ. ನಮ್ಮಲ್ಲೇ ಬೆಳೆಗಳಿಗೂ ಸಮಸ್ಯೆಯಾಗುತ್ತಿದೆ ಎಂದರು. ಮಂಡ್ಯ ನಗರದಲ್ಲಿ ಮಾತನಾಡಿದ ಅವರು, ನೀರಾವರಿ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದ ಬಳಿಕ ತೀರ್ಮಾನ ಮಾಡುತ್ತೇವೆ ಎಂದರು.
Karnataka Breaking News Live: ಹೆಚ್ಡಿಡಿ, ಹೆಚ್ಡಿಕೆ ದೆಹಲಿಗೆ: ರವಿಕುಮಾರ್
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್, ಮಾಹಿತಿ ಪ್ರಕಾರ ಹೆಚ್ಡಿ ದೇವೇಗೌಡ ಮತ್ತು ಹೆಚ್ಡಿ ಕುಮಾರಸ್ವಾಮಿ ಅವರು ದೆಹಲಿಗೆ ಹೋಗಬಹುದು. ಇಬ್ಬರಿಗೂ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಆಹ್ವಾನ ಕೊಟ್ಟಿರಬಹುದು ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿಗೆ ಬೆಂಬಲ ಕೊಡಲು ಅನೇಕ ಪಕ್ಷಗಳು ಮುಂದೆ ಬಂದಿವೆ. ಕೋವಿಡ್ ಸಂದರ್ಭದಲ್ಲಿ ಮೋದಿ ಜೊತೆ ದೇವೇಗೌಡರು ನಿಂತಿದ್ದರು. ಎನ್ಡಿಎ ಜೊತೆ ಹೋಗಲು ದೇವೇಗೌಡ ಮತ್ತು ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ. ಇವರ ಚಿಂತನೆಯನ್ನು ಅಭಿನಂದಿಸುತ್ತೇನೆ. ನಮ್ಮ ಪಕ್ಷದ ನಾಯಕರು ಮುಂದಿನ ತೀರ್ಮಾನ ಮಾಡಲಿದ್ದಾರೆ ಎಂದರು.
Karnataka Breaking News Live: ಗದಗದಲ್ಲಿ ಅನ್ನಭಾಗ್ಯ ಯೋಜನೆ ಹಣವನ್ನ ವರ್ಗಾವಣೆ ಮಾಡಿದ ಸಚಿವ H.K.ಪಾಟೀಲ್
ಗದಗ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ಬದಲು ನೀಡುವ ಹಣವನ್ನ ಇಂದು ಗದಗ ಡಿಸಿ ಕಚೇರಿಯಲ್ಲಿ ಸಚಿವ H.K.ಪಾಟೀಲ್ ವರ್ಗಾವಣೆ ಮಾಡಿದ್ದಾರೆ. ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹೆಚ್.ಕೆ.ಪಾಟೀಲ್, ಜಿಲ್ಲೆಯ 1.88 ಲಕ್ಷ ಕಾರ್ಡ್ದಾರರಿಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಿದರು.
Karnataka Breaking News Live: ಜುಲೈ 17, 18ರಂದು ಬೆಂಗಳೂರಿನಲ್ಲಿ ಮಹಾ ಮೈತ್ರಿಕೂಟದ ಸಭೆಗೆ ಭರದ ಸಿದ್ಧತೆ
ಬೆಂಗಳೂರು: ಜುಲೈ 17, 18ರಂದು ಬೆಂಗಳೂರಿನಲ್ಲಿ ಮಹಾ ಮೈತ್ರಿಕೂಟದ ಸಭೆ ಏರ್ಪಡಿಸಿದ್ದು, ಮಹಾ ಮೈತ್ರಿಕೂಟದ ಸಭೆಗೆ ಖಾಸಗಿ ಹೋಟೆಲ್ನಲ್ಲಿ ಭರದ ಸಿದ್ಧತೆ ನಡೆದಿದೆ. ರೇಸ್ ಕೋರ್ಸ್ನ ಕುಮಾರಕೃಪ ರಸ್ತೆಯಲ್ಲಿ ಬೃಹತ್ ಫ್ಲೆಕ್ಸ್ ಬ್ಯಾನರ್ ಅಳವಡಿಕೆ ಮಾಡಲಾಗುತ್ತಿದ್ದು, ರಸ್ತೆಯ ಎಡಭಾಗದಲ್ಲಿ ವಿರೋಧ ಪಕ್ಷದ ನಾಯಕರುಗಳ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಎಂಕೆ ಸ್ಟ್ಯಾಲಿನ್, ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೇರಳ ಕಾಂಗ್ರೆಸ್ ನ ಪ್ರಮುಖರು, ಉದ್ದವ ಠಾಕ್ರೆ ಸೇರಿದಂತೆ ಪ್ರಮುಖರ ಫ್ಲೆಕ್ಸ್ ಬ್ಯಾನರ್ ಅಳವಡಿಸಿ, ಎಐಸಿಸಿ ನಾಯಕರಿಂದ ಸಿದ್ದತೆಗಳ ಪರಿಶೀಲನೆ ಮಾಡಲಾಗುತ್ತಿದೆ.
Karnataka Breaking News Live: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ; ದಿನೇಶ್ ಗುಂಡೂರಾವ್ ವಾಗ್ದಾಳಿ
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಜೆಡಿಎಸ್ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ‘ಬಿಜೆಪಿಯ ಬಿ ಟೀಂ JDS ಎಂದು ನಾವು ಅನೇಕ ಬಾರಿ ಹೇಳಿದ್ದೆವು, ನಮ್ಮ ಮಾತು ಸತ್ಯ ಎಂಬುದನ್ನು ನಿರೂಪಿಸಲು HDK ಹೊರಟಿದ್ದಾರೆ. ಜೆಡಿಎಸ್ಗೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ ಎಂದಿದ್ದಾರೆ.
1 BJP ಬಿ ಟೀಂ JDS ಎಂದು ನಾವು ಅನೇಕ ಬಾರಿ ಹೇಳಿದ್ದೆವು. ಈಗ HDK ನಮ್ಮ ಮಾತು ಸತ್ಯ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ.
JDS ಪಕ್ಷಕ್ಕೆ ಯಾವುದೇ ತತ್ವ ಸಿದ್ದಾಂತಗಳಿಲ್ಲ. ಕೋಮುವಾದಿ ಪಕ್ಷ BJP ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ JDSಗೆ ಯಾವ ಸಿದ್ದಾಂತವಿದೆ?
ಅದೊಂದು ಅವಕಾಶವಾದಿ ಪಕ್ಷ.
ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ pic.twitter.com/HnUUSRCKHs
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 16, 2023
Karnataka Breaking News Live: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ, ವರಿಷ್ಠರಿಗೆ ಬಿಟ್ಟದ್ದು; ಬೊಮ್ಮಾಯಿ
ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ‘ ಜೆಡಿಎಸ್ ಜೊತೆ ಮೈತ್ರಿ ನಮ್ಮ ವರಿಷ್ಠರಿಗೆ ಬಿಟ್ಟದ್ದು ಎಂದ ಬೊಮ್ಮಾಯಿ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ‘ನಮ್ಮ ವರಿಷ್ಠರು ಮತ್ತು ದೇವೇಗೌಡರ ನಡುವೆ ಮಾತುಕತೆ ನಡೆದಿದೆ. ಈಗಾಗಲೇ ಹೆಚ್ಡಿಕೆ ಕೆಲವೊಂದಿಷ್ಟು ಭಾವನೆ ವ್ಯಕ್ತಪಡಿಸಿದ್ದಾರೆ. ಮಾತುಕತೆ ಫಲಶೃತಿ ಆಧಾರದ ಮೇಲೆ ರಾಜಕೀಯ ಬೆಳವಣಿಗೆಯಾಗಲಿದ್ದು, ಜುಲೈ 18ರ ಬಳಿಕ ವಿಪಕ್ಷ ನಾಯಕರ ಘೋಷಣೆ ಆಗಬಹುದು ಎಂದರು.
Karnataka Breaking News Live: ಶಕ್ತಿ ಯೋಜನೆ ಎಫೆಕ್ಟ್; ಕೆಎಸ್ಆರ್ಟಿಸಿ ಬಸ್ ಫುಲ್
ಬಾಗಲಕೋಟೆ: ಫ್ರೀ ಬಸ್ ಪ್ರಯಾಣ ಹಿನ್ನೆಲೆ ಕೆಎಸ್ಆರ್ಟಿಸಿ ಬಸ್ ಫುಲ್ ಆಗಿ ಸಂಚರಿಸುತ್ತಿದೆ. ಮಹಿಳೆಯರು ಬನಶಂಕರಿ, ಕೂಡಲಸಂಗಮ ಸೇರಿ ಇನ್ನಿತರ ದೇವಸ್ಥಾನಗಳಿಗೆ ತೆರಳುತ್ತಿದ್ದಾರೆ. ಈ ಪರಿಣಾಮ ಬಾಗಲಕೋಟೆ, ನವನಗರ ಬಸ್ ನಿಲ್ದಾಣಗಳಲ್ಲಿ ಎಲ್ಲಿ ನೋಡಿದರೂ ಮಹಿಳೆಯರೇ ಕಾಣುತ್ತಿದ್ದಾರೆ.
Karnataka Breaking News Live: ಮೋದಿ ಮಣಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಒಂದಾಗ್ತಿವೆ; ಬೊಮ್ಮಾಯಿ
ಹುಬ್ಬಳ್ಳಿ: ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕರ ಸಭೆ ವಿಚಾರ ‘ ಮೋದಿ ಮಣಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಒಂದಾಗ್ತಿವೆ ಎಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ‘ಬೆಂಗಳೂರಿನಲ್ಲಿ 2 ದಿನ ಪ್ರತಿಪಕ್ಷ ನಾಯಕರು ಸಭೆ ಮಾಡ್ತಿದ್ದಾರೆ. ಆದರೆ, ದೇಶದಲ್ಲಿ ಪ್ರತಿಪಕ್ಷಗಳು ಶಕ್ತಿಯುತವಾಗಿಲ್ಲ. ಪ್ರತಿಪಕ್ಷಗಳ ಸಭೆಯಿಂದ ಯಾವುದೇ ರಾಜಕೀಯ ಲಾಭ ಆಗಲ್ಲ, ಮೋದಿ ಸೋಲಿಸಲು ಒಟ್ಟಾಗಿದ್ದಾರೆ, ಅದು ಸಾಧ್ಯವಿಲ್ಲದ ಮಾತು ಎಂದಿದ್ದಾರೆ.
Karnataka Breaking News Live: ಅನಾರೋಗ್ಯದಿಂದ ಆಫ್ರಿಕಾದಲ್ಲಿ ಮೃತಪಟ್ಟಿದ್ದ ಯುವಕ; 15 ದಿನಗಳ ಬಳಿಕ ಗ್ರಾಮಕ್ಕೆ ಬಂದ ಮೃತದೇಹ
ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ನ ನಿವಾಸಿ ಇಫ್ರಾಹಿಂ(20) ಅನಾರೋಗ್ಯದಿಂದ ಆಫ್ರಿಕಾದಲ್ಲಿ ಮೃತಪಟ್ಟಿದ್ದ. ಈ ಹಿನ್ನಲೆ ಮೃತನ ಪೋಷಕರು ಮಗನನ್ನ ನೋಡಬೇಕು ಅದಕ್ಕೆ ಅವಕಾಶ ಮಾಡಿಕೊಡಿ ಎಂದಿದ್ದರು. ಅದರಂತೆ ಇದೀಗ 15 ದಿನಗಳ ಬಳಿಕ ಮೃತ ಇಫ್ರಾಹಿಂ ಮೃತದೇಹ ಸ್ವಗ್ರಾಮ ತಲುಪಿದೆ.
Karnataka Breaking News Live: ನಂದಿಬೆಟ್ಟಕ್ಕೆ ಹೊಗಲು ಬಂದು ನಡು ರಸ್ತೆಯಲ್ಲಿ ಪ್ರವಾಸಿಗರ ಪರದಾಟ
ಚಿಕ್ಕಬಳ್ಳಾಫುರ: ಇಂದು ವೀಕೆಂಡ್ ಇರುವ ಹಿನ್ನಲೆ ನಂದಿ ಗಿರಿಧಾಮಕ್ಕೆ ಸಾಗರೋಪಾದಿಯಲ್ಲಿ ಜನರು ಬರುತ್ತಿದ್ದಾರೆ. ಈ ಹಿನ್ನೆಲೆ ರಸ್ತೆಗಳು ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಬೆಳಿಗ್ಗೆಯಿಂದಲೂ ಪ್ರವಾಸಿಗರು ರಸ್ತೆಯಲ್ಲಿಯೇ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೂಡ ಟ್ರಾಫಿಕ್ ಸಮಸ್ಯೆ ಕ್ಲಿಯರ್ ಆಗಿಲ್ಲ. ಈ ವೇಳೆ ಕೆಲವು ಪ್ರವಾಸಿಗರು ಕಾರು ಹಾಗೂ ಬೈಕ್ಗಳನ್ನ ದಾರಿಯಲ್ಲೆ ಬಿಟ್ಟು ಕಾಲ್ನೇಡಿಗೆಯಲ್ಲಿ ಬೆಟ್ಟ ಹತ್ತುತ್ತಿದ್ದಾರೆ.
Karnataka Breaking News Live: ಬೀದರ್ ಜಿಲ್ಲೆಯಲ್ಲಿ ಮಳೆಗಾಗಿ ಗೊಂಬೆಗಳ ಮದುವೆ ಮಾಡಿದ ಗ್ರಾಮಸ್ಥರು
ಬೀದರ್: ರಾಜ್ಯದಲ್ಲಿ ಮಳೆ ಬಾರದೇ ಉತ್ತರ ಕರ್ನಾಟಕದ ಜಿಲ್ಲೆಗಳ ಜನರು ಕಂಗಾಲಾಗಿದ್ದಾರೆ. ಅದರಂತೆ ಇದೀಗ ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಮಳೆ ಬರಲೆಂದು ಗ್ರಾಮಸ್ಥರು ವಿಶಿಷ್ಟ ಆಚರಣೆ ಮಾಡಿದ್ದಾರೆ. ಹೌದು ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮಸ್ಥರು ಸೇರಿ ಮಳೆಗಾಗಿ ಶಾಸ್ತ್ರೋಕ್ತವಾಗಿ ಗೊಂಬೆಗಳ ಮದುವೆ ಮಾಡಿ, ಊರಿನ ಜನರಿಗೆ ಊಟ ಹಾಕಿದ್ದಾರೆ.
Karnataka Breaking News Live: ಸಿಎಂ ವಿರುದ್ದ ಅವಹೇಳನಕಾರಿ ಪೋಸ್ಟ್; ಯುವಕನ ಬಂಧನ
ಮೈಸೂರು: ಟಿ ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಖಂಡಿಸಿ ಸಿಎಂ ಸಿದ್ದರಾಮಯ್ಯ ವಿರುದ್ದ ಇನ್ಸ್ಟಾಗ್ರಾಮ್ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಯುವಕನನ್ನ ಬಂಧನ ಟಿ ನರಸೀಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ರಂಜನೀಸ್ (28) ಬಂಧಿತ ಯುವಕ. ಇತ ಸಿದ್ದರಾಮಯ್ಯ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ್ದ, ಈ ಹಿನ್ನಲೆ ಆತನ ವಿರುದ್ದ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಆರೋಪಿಯನ್ನ ಬಂಧಿಸಲಾಗಿದೆ.
Karnataka Breaking News Live: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ರೈತರಿಗೆ ಮತ್ತೊಮ್ಮೆ ಶಾಕ್; ಲೀಟರ್ಗೆ 1.75 ರೂಪಾಯಿ ಕಡಿತ
ಮಂಡ್ಯ: ಜಿಲ್ಲಾ ಹಾಲು ಒಕ್ಕೂಟದಿಂದ ರೈತರಿಗೆ ಮತ್ತೊಮ್ಮೆ ಶಾಕ್ ಆಗಿದ್ದು, ಹಾಲಿನ ಖರೀದಿ ದರದಲ್ಲಿ ಲೀಟರ್ಗೆ 1.75 ರೂಪಾಯಿ ಕಡಿತ ಮಾಡಲಾಗಿದೆ. ಜೂನ್ ತಿಂಗಳಿನಲ್ಲಿ 1 ರೂಪಾಯಿ ಕಡಿತಗೊಳಿಸಿದ್ದ ಮನ್ಮುಲ್, ಇದೀಗ ರೈತರಿಂದ ಮತ್ತೊಮ್ಮೆ ಖರೀದಿ ಹಾಲಿನ ದರದಲ್ಲಿ ಕಡಿತಗೊಳಿಸಿದ್ದು, ಇಂದಿನಿಂದಲೇ ಪರಿಷ್ಕೃತ ಆದೇಶ ಜಾರಿ ಮಾಡಿದೆ.
Karnataka Breaking News Live: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್; ವಿಚಾರಣೆಗೆ ಹಾಜರು
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು ಹಿನ್ನೆಲೆ ನಿನ್ನೆ(ಜು.15) ರಾತ್ರಿ ಬೆಂಗಳೂರಿನ ಚಿಕ್ಕಜಾಲ ಠಾಣೆಯ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು. ಬಳಿಕ ಠಾಣೆಗೆ ಆಗಮಿಸಿದ ಅರ್ಧ ಗಂಟೆಯಲ್ಲೇ ಶಾಸಕ ಮುನಿರತ್ನ ವಾಪಸ್ಸಾಗಿದ್ದಾರೆ.
Karnataka Breaking News Live: ಜುಲೈ 18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ
ಬೆಂಗಳೂರು: ಲೋಕಸಭೆ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳು ಒಂದಾಗಲು ಸಜ್ಜು ನಡೆಸಿವೆ. ಅದರಂತೆ ಜುಲೈ 18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ಏರ್ಪಡಿಸಿದ್ದು, ಸಭೆಯಲ್ಲಿ ಚರ್ಚೆಯ ನೇತೃತ್ವದ ಜವಾಬ್ದಾರಿಯನ್ನು ಕಾಂಗ್ರೆಸ್‌ಗೆ ವಹಿಸಲಾಗಿದೆ.
Karnataka Breaking News Live: ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಜುಲೈ 19ರಂದು ಚಾಲನೆ
ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಜುಲೈ 19ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು ಜುಲೈ 19ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಂಜೆ 5.30ಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ ಎಂದರು.
Published On - Jul 16,2023 8:00 AM