ಬೆಂಗಳೂರು: ಮಹಾಮಾರಿ ಕೊರೊನಾ ಸಂಕಷ್ಟದ ಸಮಯವನ್ನು ಬಳಸಿಕೊಂಡು ಕೆಲ ಌಂಬುಲೆನ್ಸ್ ಮಾಲೀಕರು ಹಣ ದಾಹ ತೀರಿಸಿಕೊಳ್ಳಲು ಮುಂದಾಗಿದ್ದರು. ಕೊರೊನಾದಿಂದ ಮೃತಪಟ್ಟವರ ಶವಗಳನ್ನು ಸಾಗಿಸಲು ಕುಟುಂಬಸ್ಥರು ಪರದಾಡುತ್ತಿರುವಾಗ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿ ಶವ ಸಾಗಿಸಿ ಹಣ ಮಾಡುತ್ತಿದ್ದರು. ಹೆಚ್ಚಿನ ಹಣ ನೀಡಲಾಗದ ಕುಟುಂಬಸ್ಥರು ಕಣ್ಣೀರಿಡುತ್ತ ಮಾಂಗಲ್ಯ ಸರ, ಒಡವೆ ಮಾರಿದಂತಹ ಅದೆಷ್ಟೋ ಘಟನೆಗಳು ಬೆಂಗಳೂರಿನಲ್ಲಿ ನಡೆದಿವೆ. ಸದ್ಯ ಈಗ ಌಂಬುಲೆನ್ಸ್ಗಳ ಧನದಾಹಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.
ಸಾರಿಗೆ ಇಲಾಖೆಯ ಸಚಿವ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ವೈದ್ಯಕೀಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಌಂಬುಲೆನ್ಸ್ಗಳಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಇನ್ಮುಂದೆ ಮನಸೋ ಇಚ್ಛೆ ಹಣ ವಸೂಲಿ ಮಾಡುವ ಌಂಬುಲೆನ್ಸ್ಗಳಿಗೆ ಬ್ರೇಕ್ ಬೀಳಲಿದೆ.
ರಾಜ್ಯ ಸರ್ಕಾರ 10 ಕಿ.ಮೀ.ಗೆ 1,500 ರೂ. ನಿಗದಿ ಮಾಡಿದೆ. 10 ಕಿ.ಮೀ. ನಂತರ ಪ್ರತಿ ಕಿ.ಮೀ.ಗೆ 120 ರೂ. ದರ ನಿಗದಿ ಮಾಡಲಾಗಿದ್ದು ಌಂಬುಲೆನ್ಸ್ ಕಾಯುವಿಕೆಗಾಗಿ ಪ್ರತಿ ಗಂಟೆಗೆ 200ರೂ. ನಿಗದಿ ಮಾಡಲಾಗಿದೆ. ಲೈಫ್ ಸಪೋರ್ಟ್ ಌಂಬುಲೆನ್ಸ್ಗೆ 10 ಕಿ.ಮೀ.ಗೆ ₹2,000, 10 ಕಿ.ಮೀ. ನಂತರ ಪ್ರತಿ ಕಿ.ಮೀ.ಗೆ 120 ರೂ. ಪಡೆಯಬೇಕು. ಲೈಫ್ ಸಪೋರ್ಟ್ ಌಂಬುಲೆನ್ಸ್ ಕಾಯುವಿಕೆಗಾಗಿ ₹ 250. ಪ್ರತಿ ಗಂಟೆಗೆ 250 ರೂ. ರಾಜ್ಯ ಸರ್ಕಾರ ನಿಗದಿ ಪಡಿಸಿದೆ.
ಇದನ್ನೂ ಓದಿ: ದೆಹಲಿ, ಹರ್ಯಾಣದಲ್ಲಿ ಆಂಬುಲೆನ್ಸ್ ಸುಲಿಗೆಗೆ ಬ್ರೇಕ್, ದರ ನಿಗದಿ: ಕರ್ನಾಟಕದಲ್ಲಿ ಯಾವಾಗ ಇದು ಜಾರಿಗೆ ಬರುವುದು?