Karnataka Budget 2021: ಕೇಂದ್ರ ಸಚಿವೆ ನಿರ್ಮಲಾ ಹಾಕಿಕೊಟ್ಟ ಡಿಜಿಟಲ್ ಬಜೆಟ್ ಮೇಲ್ಪಂಕ್ತಿ ಅನುಸರಿಸದ ಸಿಎಂ ಯಡಿಯೂರಪ್ಪ

|

Updated on: Mar 08, 2021 | 12:17 PM

Karnataka State Budget 2021; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ನ ಸಾಫ್ಟ್ ಕಾಪಿಯನ್ನು (ಆನ್​ಲೈನ್ ಪ್ರತಿ) ಎಲ್ಲಾ ಲೋಕಸಭಾ ಸದಸ್ಯರಿಗೂ ಟ್ಯಾಬ್ ಮೂಲಕ ಓದುವ ಅನುಕೂಲ ಮಾಡಿಕೊಟ್ಟಿದ್ದರು. ಸಿಎಂ ಯಡಿಯೂರಪ್ಪ ಅವರು ಈ ಕ್ರಮ ಅನುಸರಿಸಬಹುದಿತ್ತು. ಈ ಮೂಲಕ ಡಿಜಿಟಲ್ ಇಂಡಿಯಾಕ್ಕೆ ಒತ್ತು ನಿಡಬಹುದಿತ್ತು ಎಂಬ ಮಾತುಗಳು ಕೇಳಿಬಂದಿವೆ.

Karnataka Budget 2021: ಕೇಂದ್ರ ಸಚಿವೆ ನಿರ್ಮಲಾ ಹಾಕಿಕೊಟ್ಟ ಡಿಜಿಟಲ್ ಬಜೆಟ್ ಮೇಲ್ಪಂಕ್ತಿ ಅನುಸರಿಸದ ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Follow us on

ಬೆಂಗಳೂರು: 2021ನೇ ಸಾಲಿನ ಕೇಂದ್ರ ಬಜೆಟ್​ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಪೂರ್ಣ ಆನ್​ಲೈನ್​ನಲ್ಲಿ ಮಂಡಿಸಿದ್ದರು. ಡಿಜಿಟಲ್ ಇಂಡಿಯಾದ ಕನಸಿನೊಂದಿಗೆ ಆನ್​ಲೈನ್ ಬಜೆಟ್​ನ ಮೇಲ್ಪಂಕ್ತಿ ಹಾಕಿದ್ದ ಕೇಂದ್ರ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲಿಸಿದಂತೆ ತೋರುತ್ತಿಲ್ಲ. ಕರ್ನಾಟಕ ರಾಜ್ಯ ಬಜೆಟ್ 2021ನ ಪ್ರತಿಗಳನ್ನು ಮುದ್ರಣ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ಮೂಲಕ ತಮ್ಮದೇ ಪಕ್ಷ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಕಿಕೊಟ್ಟಿದ್ದ ಡಿಜಿಟಲ್ ಬಜೆಟ್ ಮೇಲ್ಪಂಕ್ತಿಯನ್ನು ಅನುಸರಿಸಿಲ್ಲ. ಮುದ್ರಿತ ಬಜೆಟ್​ನ ಸೂಟ್​ಕೇಸ್ ಜತೆ ಶೇಷಾದ್ರಿಪುರಂನಲ್ಲಿರುವ ರಾಘವೇಂದ್ರ ಮಠಕ್ಕೆ ತೆರಳಿ ನಂತರ ವಿಧಾನಸೌಧಕ್ಕೆ ಆಗಮಿಸಿದ್ದಾರೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ನ ಸಾಫ್ಟ್ ಕಾಪಿಯನ್ನು (ಆನ್​ಲೈನ್ ಪ್ರತಿ) ಎಲ್ಲಾ ಲೋಕಸಭಾ ಸದಸ್ಯರಿಗೂ ಟ್ಯಾಬ್ ಮೂಲಕ ಓದುವ ಅನುಕೂಲ ಮಾಡಿಕೊಟ್ಟಿದ್ದರು. ಸಿಎಂ ಯಡಿಯೂರಪ್ಪ ಅವರು ಈ ಕ್ರಮ ಅನುಸರಿಸಬಹುದಿತ್ತು. ಈ ಮೂಲಕ ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಬಹುದಿತ್ತು ಎಂಬ ಮಾತುಗಳು ಕೇಳಿಬಂದಿವೆ.

ಶೇಷಾದ್ರಿಪುರಂನ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಸಿಎಂ
ಬಜೆಟ್​ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಬೆಂಗಳೂರಿನ ಶೇಷಾದ್ರಿಪುರಂನ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ದೈವಭಕ್ತರಾದ ಅವರು ಇಂದು ಮಧ್ಯಾಹ್ನ 12.05ರ ಅಭಿಜಿನ್​ ಮಹೂರ್ತದಲ್ಲಿ ಬಜೆಟ್​ ಮಂಡಿಸಲಿದ್ದಾರೆ. ಶೇಷಾದ್ರಿಪುರಂನಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ, ವಿಶೇಷ ಪೂಜೆ ಸಲ್ಲಿಸಿದ್ಧಾರೆ.

ಮುಖ್ಯಮಂತ್ರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಆರ್.ಅಶೋಕ್ ಸಾಥ್ ನೀಡಿದ್ದಾರೆ. ಬಜೆಟ್ ಪ್ರತಿಗೆ ಪೂಜೆ ಮಾಡಿಸಿದ ಬಿ.ಎಸ್​.ಯಡಿಯೂರಪ್ಪ, ಕಾವೇರಿ ನಿವಾಸದಿಂದ ಹೊರಟ ಬಳಿಕ ನಿವಾಸದ ಗೇಟ್ ದಾಟುವವರೆಗೂ ಕಾರಿನೊಳಗೆ ಕೈ ಜೋಡಿಸಿಕೊಂಡೇ ಕುಳಿತಿದ್ದಿದ್ದು ವಿಶೇಷವಾಗಿತ್ತು

ಇದನ್ನೂ ಓದಿ: ದೇಶದಲ್ಲೇ ಅತಿ ದೊಡ್ಡ ಗಾತ್ರದ ಬಜೆಟ್ ನೀಡಿರುವ ರಾಜ್ಯ ಯಾವುದು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

Published On - 12:12 pm, Mon, 8 March 21