Women’s Canteen: ಗ್ರಾಮೀಣ ಭಾಗದಲ್ಲಿ ಮಹಿಳೆಯರೇ ನಿರ್ವಹಿಸುವ ಕೆಫೆಗಳು; ಯುವಜನರಿಗೆ ಉದ್ಯಮಶೀಲತಾ ತರಬೇತಿ

|

Updated on: Feb 16, 2024 | 1:30 PM

Karnataka Budget 2024, Cafe Sanjeevini: ನಿರುದ್ಯೋಗಿಗಳಿಗೆ ಭತ್ಯೆ ಮಾತ್ರವಲ್ಲ, ಉದ್ಯಮಶೀಲತಾ ತರಬೇತಿ ನೀಡಲಾಗುತ್ತದೆ. ಯುವನಿಧಿ ಪ್ಲಸ್ ಉಪಕ್ರಮದ ಅಡಿಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಇರುತ್ತದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರೇ ನಿರ್ವಹಿಸುವ ಕೆಫೆ ಸಂಜೀವಿನಿ ಕ್ಯಾಂಟೀನ್​ಗಳನ್ನು ಸ್ಥಾಪಿಸಲಾಗುವುದು. 2,500 ಕಾಫಿ ಕಿಯೋಸ್ಕ್​ಗಳನ್ನು ಸ್ಥಾಪಿಸಲಾಗುವುದು. ರಾಜ್ಯದ ಎಲ್ಲಾ ಐಟಿಐಗಳಲ್ಲಿ ಸ್ಥಳೀಯ ಕೈಗಾರಿಕೆ ಮತ್ತು ಉದ್ಯಮಗಳ ಸಹಭಾಗಿತ್ವದಲ್ಲಿ ಡುಯಲ್ ಟ್ರೈನಿಂಗ್ ಸಿಸ್ಟಂ ಅಳವಡಿಸಲಾಗುವುದು ಎಂದು ಬಜೆಟ್​ನಲ್ಲಿ ಹೇಳಲಾಗಿದೆ.

Womens Canteen: ಗ್ರಾಮೀಣ ಭಾಗದಲ್ಲಿ ಮಹಿಳೆಯರೇ ನಿರ್ವಹಿಸುವ ಕೆಫೆಗಳು; ಯುವಜನರಿಗೆ ಉದ್ಯಮಶೀಲತಾ ತರಬೇತಿ
ಸಿದ್ದರಾಮಯ್ಯ
Follow us on

ಬೆಂಗಳೂರು, ಫೆಬ್ರುವರಿ 16: ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರ ಯುವ ನಿಧಿ ಯೋಜನೆ ಮೂಲಕ ಒಂದಷ್ಟು ರಿಲೀಫ್ ಕೊಟ್ಟಿದೆ. ಈಗ ಈ ನಿರುದ್ಯೋಗಿಗಳಿಗೆ ಉತ್ತಮ ವೃತ್ತಿಜೀವನ ಕಂಡುಕೊಳ್ಳಲು ಯೋಜನೆ ರೂಪಿಸಿದೆ. ಯುವನಿಧಿ ಪ್ಲಸ್ ಉಪಕ್ರಮದ (Yuva Nidhi Plus) ಅಡಿಯಲ್ಲಿ 25,000 ಫಲಾನುಭವಿಗಳಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ (Entrepreneurship development training) ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್​ನಲ್ಲಿ ಘೋಷಿಸಿದ್ದಾರೆ. ನಿರುದ್ಯೋಗ ನಿವಾರಣೆಗೆ ಪ್ರಯತ್ನಿಸುತ್ತಿರುವ ಸರ್ಕಾರ ಯುವಜನರಿಗೆ ಉದ್ಯೋಗ ಮತ್ತು ಉದ್ದಿಮೆ ಅವಕಾಶ ಹೆಚ್ಚಿಸಲು ಕೌಶಲ್ಯ ನೀತಿ ಜಾರಿ ಮಾಡುವುದಾಗಿ ಹೇಳಿದೆ. ಇನ್ನು, ಗ್ರಾಮೀಣ ಭಾಗದಲ್ಲಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ ಕೆಫೆ ಸಂಜೀವಿನಿ (Cafe Sanjeevini) ಎಂಬ ಕ್ಯಾಂಟೀನ್​ಗಳ ಸ್ಥಾಪಿಸುವ ಯೋಜನೆಯನ್ನು ಘೋಷಿಸಲಾಗಿದೆ. ಯುವಜನರ ಕೌಶಲ್ಯ ಅಭಿವೃದ್ಧಿಗೆ 2024ರ ಬಜೆಟ್​ನಲ್ಲಿ ಘೋಷಿಸಲಾದ ಕೆಲ ಪ್ರಮುಖ ಸಂಗತಿ ಇಲ್ಲಿವೆ….

ಕರ್ನಾಟಕ ಬಜೆಟ್​ನಲ್ಲಿ ಕೌಶಲ್ಯ ಅಭಿವೃದ್ಧಿಗೆ ಸಿಕ್ಕಿದ್ದು ಇದು…

  • ಯುವಜನರಿಗೆ ಉತ್ತಮ ಉದ್ಯೋಗ ಮತ್ತು ಉದ್ಯಮ ಅವಕಾಶ ಒದಗಿಸಲು ರಾಜ್ಯ ಕೌಶಲ್ಯ ನೀತಿ ಜಾರಿ ಮಾಡಲಾಗುವುದು
  • ಯುವ ನಿಧಿ ಪ್ಲಸ್ ಅಡಿ 25,000 ಫಲಾನುಭವಿಗಳಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ
  • ಗ್ರಾಮೀಣ ಭಾಗದಲ್ಲಿ ಮಹಿಳೆಯರೇ ನಡೆಸುವ ಕೆಫೆ ಸಂಜೀವಿನಿ ಕ್ಯಾಂಟೀನ್​ಗಳ ಸ್ಥಾಪನೆ. 2,500 ಕಾಫಿ ಕಿಯಾಸ್ಕ್​ಗಳ ಸ್ಥಾಪನೆಗೆ ಕ್ರಮ

ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಗುಡ್​ ನ್ಯೂಸ್​ ನೀಡಿದ ಸಿದ್ದರಾಮಯ್ಯ

  • ಬಳ್ಳಾರಿಯ ಸಂಡೂರಿನಲ್ಲಿ ಸ್ಕಿಲ್ ಅಕಾಡೆಮಿ ಸ್ಥಾಪನೆ
  • ಕಲಬುರ್ಗಿ, ತಳಕಲ್ ಮತ್ತು ವರುಣಾದಲ್ಲಿ 350 ಕೋಟಿ ರೂ ವೆಚ್ಚದಲ್ಲಿ ಜಿಟಿಟಿಸಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
  • ಬಳ್ಳಾರಿ, ಚಿತ್ರದುರ್ಗ, ರೋಣದಲ್ಲಿ ಜಿಟಿಟಿಸಿಗಳ ಆರಂಭ
  • ಕಲಬುರ್ಗಿಯ ಕೆಜಿಟಿಟಿಐನಲ್ಲಿ ಸಿಎನ್​ಸಿ ಮೆಷಿನ್​ ಅನ್ನು ಸೆಂಟ್ರಲೈಸ್​ಗೊಳಿಸುವ ಮೊದಲ ಎಕ್ಸಲೆನ್ಸ್ ಸೆಂಟರ್ ಸ್ಥಾಪನೆ
  • 40,000 ಐಟಿಐ ಮತ್ತು ಜಿಟಿಟಿಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷಾ ಕಲೆ ಹಾಗೂ ಸಂವಹನ ಕೌಶಲ್ಯ ತರಬೇತಿ
  • ಎಲ್ಲಾ ಐಟಿಐಗಳಲ್ಲಿ ಸ್ಥಳೀಯ ಕೈಗಾರಿಕೆ ಮತ್ತು ಉದ್ಯಮಗಳ ಸಹಭಾಗಿತ್ವದಲ್ಲಿ ಡುಯಲ್ ಟ್ರೈನಿಂಗ್ ಸಿಸ್ಟಂ (ಡಿಎಸ್​ಟಿ).
  • ಎರಡು ವರ್ಷದಲ್ಲಿ 50,000 ಸ್ವಸಹಾಯ ಗುಂಪಿನ ಮಹಿಳಾ ಸ್ವಾಮ್ಯದ ಸೂಕ್ಷ್ಮ ಉದ್ಯಮಗಳ ಅಭಿವೃದ್ಧಿಗೆ ಕ್ರಮ.
  • ಒಂದು ಲಕ್ಷ ಮಹಿಳಾ ಸ್ವ ಸಹಾಯ ಗುಂಪುಗಳಿಗೆ 100 ಕೋಟಿ ರೂ ವೆಚ್ಚದಲ್ಲಿ ವಿವಿಧ ಕಿರು ಉದ್ದಿಮೆಗಳನ್ನು ಸ್ಥಾಪಿಸಿ ಸೂಕ್ತ ಮಾರುಕಟ್ಟೆ ಅವಕಾಶ ಕಲ್ಪಿಸಲು ಕ್ರಮ
  • ಐಐಎಂಬಿ ಸಹಭಾಗಿತ್ವದಲ್ಲಿ 10 ಜಿಲ್ಲಾ ಮಟ್ಟದ ಇನ್​ಕ್ಯುಬೇಶನ್ ಸೆಂಟರ್ ಸ್ಥಾಪನೆ

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ