2024ರ ಫೆಬ್ರವರಿಯಲ್ಲಿ ವಿಧಾನಮಂಡಲ ಜಂಟಿ ಮತ್ತು ಬಜೆಟ್ ಅಧಿವೇಶನ: H​K ಪಾಟೀಲ್

Karnataka budget session: ವಿಧಾನಮಂಡಲ ಜಂಟಿ ಮತ್ತು ಬಜೆಟ್ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. 2024ರ ಫೆಬ್ರವರಿಯಲ್ಲಿ ವಿಧಾನಮಂಡಲ ಜಂಟಿ ಮತ್ತು ಬಜೆಟ್ ಅಧಿವೇಶನ ನಡೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್​ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

2024ರ ಫೆಬ್ರವರಿಯಲ್ಲಿ ವಿಧಾನಮಂಡಲ ಜಂಟಿ ಮತ್ತು ಬಜೆಟ್ ಅಧಿವೇಶನ: H​K ಪಾಟೀಲ್
ಹೆಚ್​ಕೆ ಪಾಟೀಲ್
Updated By: ರಮೇಶ್ ಬಿ. ಜವಳಗೇರಾ

Updated on: Dec 21, 2023 | 8:54 PM

ಬೆಂಗಳೂರು, (ಡಿಸೆಂಬರ್ 21): ರಾಜ್ಯ ವಿಧಾನಮಂಡಲ ಜಂಟಿ ಮತ್ತು ಬಜೆಟ್ ಅಧಿವೇಶನದ ಮುಹೂರ್ತ ಫಿಕ್ಸ್ ಆಗಿದೆ. ಇಂದು (ಡಿಸೆಂಬರ್ 21) ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್​ಕೆ ಪಾಟೀಲ್, 2024ರ ಫೆಬ್ರವರಿಯಲ್ಲಿ ವಿಧಾನಮಂಡಲ ಜಂಟಿ ಮತ್ತು ಬಜೆಟ್ ಅಧಿವೇಶನ (Karnataka budget session) ನಡೆಯಲಿದೆ ಎಂದು ಮಾಹಿತಿ ನೀಡಿದರು.