ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ; ಇಬ್ಬರು ಆರೋಪಿಗಳ ಬಂಧನ

ಆತ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಕೌಟುಂಬಿಕ ಹಿನ್ನೆಲೆಯಲ್ಲಿ ಇತ್ತೀಚಿಗೆ ಕೆಲಸ ಬಿಟ್ಟು ವಾಪಾಸ್ ಗ್ರಾಮಕ್ಕೆ ಬಂದು ಸೇರಿಕೊಂಡಿದ್ದ. ಅವತ್ತು ಪಾರ್ಟಿ ಮಾಡುವುದಕ್ಕೆ ಎಂದು ಸ್ನೇಹಿತರ ಜೊತೆ ಬಾರ್ ಅಂಡ್ ರೆಸ್ಟೋರೆಂಟ್​ಗೆ ಬಂದಿದ್ದ. ಸ್ನೇಹಿತರ ಜೊತೆ ಸೇರಿ ಕಂಠಪೂರ್ತಿಯಾಗಿ ಕುಡಿದಿದ್ದ. ಈ ವೇಳೆ ರೆಸ್ಟೋರೆಂಟ್​ನಲ್ಲಿ ಸ್ನೇಹಿತರ ಜೊತೆ ಗಲಾಟೆ ಕೂಡ ನಡೆದಿತ್ತು. ಆನಂತರ ಬಾರ್​ನಿಂದ ಸಿಗರೇಟ್ ತರುವುದಕ್ಕೆ ಎಂದು ಹೊರಗೆ ಬಂದಿದ್ದವನನ್ನ ಸ್ನೇಹಿತರೇ ಕೊಲೆ ಮಾಡಿದ್ದರು.

ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ; ಇಬ್ಬರು ಆರೋಪಿಗಳ ಬಂಧನ
ಮೃತ ವ್ಯಕ್ತಿ, ಬಂಧಿತ ಆರೋಪಿಗಳು
Follow us
ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 21, 2023 | 7:48 PM

ಮಂಡ್ಯ, ಡಿ.21: ಇದೇ ಡಿಸೆಂಬರ್ 14 ರ ರಾತ್ರಿ ಮಂಡ್ಯ(Mandya)ದ ಫ್ಯಾಕ್ಟರಿ ಸರ್ಕಲ್ ಬಳಿ ಸಿದ್ದಾರ್ಥ ಕೋಸ್ಟಲ್ ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗದಲ್ಲಿ ಮದ್ದೂರು(Maddur) ತಾಲೂಕಿನ ಕಡಿಲುವಾಗಿಲು ಗ್ರಾಮದ ಗುರುವಿಲಾಸ್(31) ಎಂಬಾತನನ್ನ ಸ್ನೇಹಿತರೇ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಇದೀಗ ಕೊಲೆ ಸಂಬಂಧ ಮಂಡ್ಯದ ಪೂರ್ವ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ನೇಹಿತರ ಜೊತೆ ಜಗಳ

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿದ್ದ ಮೃತ ಗುರುವಿಲಾಸ್, ಪತ್ನಿಯ ಜೊತೆ ಕಲಹ ಉಂಟಾಗಿ ಬೆಂಗಳೂರು ತೊರೆದು ಗ್ರಾಮಕ್ಕೆ ವಾಪಾಸ್ ಬಂದು, ಮಂಡ್ಯದ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದ. ಡಿಸೆಂಬರ್ 14 ರಂದು ಎಣ್ಣೆ ಕುಡಿಯುವುದಕ್ಕೆ ಎಂದು ಬಾರ್​ಗೆ ಬಂದಿದ್ದ ಆತ ಕಂಠಪೂರ್ತಿ ಕುಡಿದಿದ್ದ. ನಂತರ ಕಡಿಲುವಾಗಿಲು ಗ್ರಾಮದ ಶಿವಕುಮಾರ್ ಇರುವುದನ್ನ ಗಮನಿಸಿ ಆತನ ಜೊತೆಗೂ ಕೂಡ ಎಣ್ಣೆ ಹೊಡೆದಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಆರಂಭಗೊಂಡಿತ್ತು. ಗುರುವಿಲಾಸ್, ಸ್ನೇಹಿತ ಶಿವಕುಮಾರ್ ಮೇಲೆ ಹಲ್ಲೆ ಮಾಡಿದ್ದ. ಅಲ್ಲಿದ್ದವರು ಗಲಾಟೆ ಬಿಡಿಸಿ ಕಳುಹಿಸಿದ್ದರು. ಎಲ್ಲರ ಮುಂದೆ ಹಲ್ಲೆ ಮಾಡಿದ ಎಂದು ಅಲ್ಲಿಂದ ಶಿವಕುಮಾರ್ ನೇರವಾಗಿ ಹೊರ ಬಂದು ಅಂಗಡಿಯೊಂದಕ್ಕೆ ಹೋಗಿ ಚಾಕು ತೆಗೆದುಕೊಂಡು ಬಂದಿದ್ದ.

ಇದನ್ನೂ ಓದಿ:ಕಾನೂನಿನ ಸುವ್ಯವಸ್ಥೆ ನಮ್ಮ ಬದ್ಧತೆ: ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚು ಬಗ್ಗೆ ಮೌನ ಮುರಿದ ಮೋದಿ

ಇನ್ನು ಸಿಗರೇಟ್ ತರುವುದಕ್ಕೆ ಎಂದು ಗುರುವಿಲಾಸ್ ಸಹ ಬಾರ್​ನಿಂದ ಹೊರಕ್ಕೆ ಬಂದಿದ್ದ. ಕಾರಿನಿಂದ ಇಳಿದು ಬಂದವನೇ ನೇರವಾಗಿ ಗುರುವಿಲಾಸ್ ಕಡೆ ಹೋಗಿ ಚಾಕುವಿನಿಂದ ಚುಚ್ಚಿ ಗುರುವಿಲಾಸ್​ನನ್ನು ಕೊಲೆ ಮಾಡಿ, ನಂತರ ಕಾರಿನಲ್ಲಿ ಪರಾರಿಯಾಗಿದ್ದರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಮಂಡ್ಯ ಪೂರ್ವ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನು ಭೀಕರ ಕೊಲೆಯ ದೃಶ್ಯ ಪಕ್ಕದಲ್ಲೇ  ಅಳವಡಿಸಿದ್ದ ಸಿಸಿ ಕ್ಯಾಮಾರದಲ್ಲೂ ಕೂಡ ಸೆರೆಯಾಗಿದೆ. ಒಟ್ಟಾರೆ ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ ಆರಂಭಗೊಂಡು ಅದು ಕೊಲೆಯಲ್ಲಿ ಅಂತ್ಯವಾಗಿದ್ದು, ಸ್ನೇಹಿತನನ್ನ ಕೊಂದ ಆರೋಪಿಗಳು ಇದೀಗ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ