ಕಾನೂನಿನ ಸುವ್ಯವಸ್ಥೆ ನಮ್ಮ ಬದ್ಧತೆ: ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚು ಬಗ್ಗೆ ಮೌನ ಮುರಿದ ಮೋದಿ
ನಮಗೆ ಯಾರಾದರೂ ಯಾವುದೇ ಮಾಹಿತಿ ನೀಡಿದರೆ, ನಾವು ಅದನ್ನು ಖಂಡಿತವಾಗಿ ಪರಿಶೀಲಿಸುತ್ತೇವೆ. ನಮ್ಮ ನಾಗರಿಕರು ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡಿದ್ದರೆ ಅದನ್ನು ಖಂಡಿತ ಗಮನಿಸುವ ಕೆಲಸ ಮಾಡುತ್ತೇವೆ. ಕಾನೂನು ಸುವ್ಯವಸ್ಥೆಗೆ ನಮ್ಮ ಬದ್ಧತೆ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೊದಲ ಬಾರಿ ಅಮೆರಿಕದಲ್ಲಿ ಭಾರತಕ್ಕೆ ವಾಡೆಂಟ್ ಆಗಿರುವ ಭಾರತೀಯರ ಹತ್ಯೆ ಸಂಚಿನ ಆರೋಪದ ಬಗ್ಗೆ ಮೌನ ಮುರಿದಿದ್ದಾರೆ. ಫೈನಾನ್ಷಿಯಲ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಪ್ರಧಾನಿ ಮೋದಿ ಅವರು ಉಲ್ಲೇಖಸಿದರೆ. ನಾವು ಪುರಾವೆಗಳನ್ನು ನೋಡುತ್ತೇವೆ, ಇಂತಹ ಘಟನೆಗಳಿಂದ ನಮ್ಮ ಮತ್ತು ಅಮೆರಿಕದ ಸಂಬಂಧ ಹಳಿತಪ್ಪುದಿಲ್ಲ ಎಂದು ಹೇಳಿದ್ದಾರೆ. ಭಾರತದ ಬಗ್ಗೆ ಕಿಡಿಕಾರುತ್ತಿದ್ದ ಹಾಗೂ ಭಾರತದ ಭಯೋತ್ಪಾದನೆ ಪಟ್ಟಿಯಲ್ಲಿ ಸೇರಿಕೊಂಡಿರುವ ಮೋಸ್ಟ್ ವಾಡೆಂಟ್ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಗೆ ಭಾರತ ಸಂಚು ರೂಪಿಸಿದೆ ಎಂದು ಅಮೆರಿಕ ಆರೋಪ ಮಾಡಿತ್ತು.
ಕಾನೂನು ಸುವ್ಯವಸ್ಥೆ ನಮ್ಮ ಬದ್ಧತೆ: ಮೋದಿ
ಈ ಬಗ್ಗೆ ನಮಗೆ ಯಾರಾದರೂ ಯಾವುದೇ ಮಾಹಿತಿ ನೀಡಿದರೆ, ನಾವು ಅದನ್ನು ಖಂಡಿತವಾಗಿ ಪರಿಶೀಲಿಸುತ್ತೇವೆ. ನಮ್ಮ ನಾಗರಿಕರು ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡಿದ್ದರೆ ಅದನ್ನು ಖಂಡಿತ ಗಮನಿಸುವ ಕೆಲಸ ಮಾಡುತ್ತೇವೆ. ಕಾನೂನು ಸುವ್ಯವಸ್ಥೆಗೆ ನಮ್ಮ ಬದ್ಧತೆ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರತವು ತನ್ನ ಪ್ರಜೆ ಮತ್ತು ಪ್ರತ್ಯೇಕತಾವಾದಿ ಸಿಖ್ಸ್ ಫಾರ್ ಜಸ್ಟೀಸ್‌ನ ನಾಯಕ ಎಂದು ಗುರುತಿಸಿಕೊಂಡಿರುವ ಗುರುಪತ್‌ವಂತ್ ಸಿಂಗ್ ಪನ್ನುನ್ ವಿರುದ್ಧ ಹತ್ಯೆಯ ಸಂಚು ಹೂಡಿದೆ ಎಂದು ಅಮೆರಿಕ ಅರೋಪ ಮಾಡಿತ್ತು. ಈಗಾಗಲೇ ಭಾರತವು ಪನ್ನೂನ್‌ನನ್ನು ಭಯೋತ್ಪಾದಕ ಎಂದು ಹೆಸರಿಸಿದೆ.
FT Exclusive: ‘Absolute agreement on all matters cannot be a prerequisite for collaboration.’ Read FT editor @khalafroula‘s interview with India’s prime minister, who responded for the first time to allegations of an Indian assassination plot in the US: https://t.co/7KyKkiOexq pic.twitter.com/GMKgALbirW
— Financial Times (@FT) December 20, 2023
ನಮ್ಮ ಸುತ್ತಮುತ್ತಲೇ ಉಗ್ರವಾದಿಯ ಕೆಲಸಗಳು ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಶದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಬೆದರಿಕೆ ಹಾಗೂ ಹಿಂಸಚಾರಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆದರಿಕೆ ವಿಡಿಯೊ: ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ್ ವಿರುದ್ಧ ಪ್ರಕರಣ ದಾಖಲು
ಭಾರತ-ಯುಎಸ್ ಪ್ರಬುದ್ಧ ಮತ್ತು ಸ್ಥಿರ ಪಾಲುದಾರಿಕೆ ಹೊಂದಿದೆ
ಭಾರತ ಮತ್ತು ಅಮೆರಿಕ ಇಂತಹ ಘಟನೆಗಳನ್ನು ವಿರೋಧಿಸುತ್ತದೆ. ಉಭಯ ದೇಶಗಳು ಸಂಬಂಧದ ಬಲವರ್ಧನೆಗೆ ಬಲವಾದ ಬೆಂಬಲವನ್ನು ನೀಡಿಕೊಂಡು ಬಂದಿದೆ. ಹಾಗಾಗಿ ಭಾರತ-ಯುಎಸ್ ಪ್ರಬುದ್ಧ ಮತ್ತು ಸ್ಥಿರ ಪಾಲುದಾರಿಕೆ ಹೊಂದಿದೆ ಎಂದು ಹೇಳಿದ್ದಾರೆ.
ಭಾರತ-ಅಮೆರಿಕ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ಸಹಕಾರವು ಪ್ರಮುಖವಾಗಿದೆ. ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳೊಂದಿಗೆ ಈ ಘಟನೆಗಳನ್ನು ಜೋಡಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ನಾವು ಬಹುಪಕ್ಷೀಯತೆಯ ಯುಗದಲ್ಲಿ ಬದುಕುತ್ತಿದ್ದೇವೆ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕು. ಜಗತ್ತು ಪರಸ್ಪರ ಸಂಬಂಧ ಮತ್ತು ಪರಸ್ಪರ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಸಿಖ್ಸ್ ಫಾರ್ ಜಸ್ಟೀಸ್‌ನ ನಾಯಕ ಎಂದು ಗುರುತಿಸಿಕೊಂಡಿರುವ ಗುರುಪತ್‌ವಂತ್ ಸಿಂಗ್ ಪನ್ನುನ್ನ್ನು ಹತ್ಯೆ ಮಾಡಲು ಭಾರತ ತನ್ನ ಅಧಿಕಾರಿಗಳ ನೇಮಕ ಮಾಡಿದೆ ಎಂದು ಯುಎಸ್ ಆರೋಪ ಮಾಡಿತ್ತು. ಪನ್ನುನ್ ಹತ್ಯೆಗಾಗಿ ಭಾರತ ರಹಸ್ಯ ಏಜೆಂಟ್ ಗುಪ್ತನ್ನು ನೇಮಕಾ ಮಾಡಿದೆ ಎಂದು ಹೇಳಿತ್ತು. ಇದೀಗ ಈ ಎಲ್ಲ ಆರೋಪಕ್ಕೆ ಪ್ರಧಾನಿ ಮೋದಿ ಅವರು ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Wed, 20 December 23