ಯಾರಿಗೆ ಯೋಗ್ಯತೆ ಇದೆ ಅವರಿಗೆ ಚುನಾವಣಾ ಉಸ್ತುವಾರಿ ಕೊಡುತ್ತಾರೆ: ಬಿ.ವೈ ವಿಜಯೇಂದ್ರ ಟಾಂಗ್

| Updated By: ganapathi bhat

Updated on: Apr 04, 2021 | 6:54 PM

ಏಪ್ರಿಲ್​ 17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಾರಿಗೆ ಯೋಗ್ಯತೆ ಇದೆ ಅವರಿಗೆ ಚುನಾವಣಾ ಉಸ್ತುವಾರಿ ಕೊಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ಗೆ ಮಸ್ಕಿ ಚುನಾವಣಾ ಉಸ್ತುವಾರಿ ಬಿ.ವೈ ವಿಜಯೇಂದ್ರ ಟಾಂಗ್​ ಹೊಡೆದಿದ್ದಾರೆ.

ಯಾರಿಗೆ ಯೋಗ್ಯತೆ ಇದೆ ಅವರಿಗೆ ಚುನಾವಣಾ ಉಸ್ತುವಾರಿ ಕೊಡುತ್ತಾರೆ: ಬಿ.ವೈ ವಿಜಯೇಂದ್ರ ಟಾಂಗ್
ಬಿ.ವೈ ವಿಜಯೇಂದ್ರ (ಸಂಗ್ರಹ ಚಿತ್ರ)
Follow us on

ರಾಯಚೂರು: ಏಪ್ರಿಲ್​ 17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಾರಿಗೆ ಯೋಗ್ಯತೆ ಇದೆ ಅವರಿಗೆ ಚುನಾವಣಾ ಉಸ್ತುವಾರಿ ಕೊಡುತ್ತಾರೆ. ಉಸ್ತುವಾರಿ ಕೊಡುವ ಜವಾಬ್ದಾರಿ ರಾಜ್ಯಧ್ಯಕ್ಷರದ್ದು ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ಗೆ ಮಸ್ಕಿ ಚುನಾವಣಾ ಉಸ್ತುವಾರಿ ವಹಿಸಿರುವ ಬಿ.ವೈ ವಿಜಯೇಂದ್ರ ಟಾಂಗ್​ ಕೊಟ್ಟಿದ್ದಾರೆ.

ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಹಿರಿಯರಿದ್ದಾರೆ. ಶಾಸಕ ಯತ್ನಾಳ್​ ಸಹ ಎಲ್ಲಿಗೆ ಬೇಕಾದರೂ ಹೋಗಬಹುದು. ಎಲ್ಲ ಕಡೆಯೂ ಕಾರ್ಯಕರ್ತರು ಯತ್ನಾಳ್​ರನ್ನ ಸ್ವಾಗತಿಸುತ್ತಾರೆ. ಕೆ.ಆರ್ ಪೇಟೆ ಶಿರಾದಲ್ಲಿ ಬಿಜೆಪಿ ಗೆದ್ದ ಮಾದರಿಯಲ್ಲೇ, ಮಸ್ಕಿಯಲ್ಲೂ ಬಿಜೆಪಿ‌ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಅಯ್ಯೋ ಎಂದೆನಿಸುತ್ತದೆ. ಮತ ಎಣಿಕೆ ದಿನ ಎರಡನೇ ಸುತ್ತಿಗೇ ಕಾಂಗ್ರೆಸ್​ನವರು ಮತ ಎಣಿಕೆ ಕೇಂದ್ರವನ್ನು ಖಾಲಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ; ಕ್ಷೇತ್ರದ ಜನ ಮೋದಿ, ಬಿಎಸ್​ವೈ ಪರ ಒಲವು ತೋರಿದ್ದಾರೆ: ಸಚಿವ ಶ್ರೀರಾಮುಲು
ಬಳ್ಳಾರಿ: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮಸ್ಕಿ ಕ್ಷೇತ್ರದ ಜನರು ಪ್ರಧಾನಿ ಮೋದಿ, ಬಿಎಸ್​ವೈ ಪರ ಒಲವು ತೋರಿದ್ದಾರೆ. ಡಿಕೆಶಿ ಕೇವಲ ಸಿಳ್ಳೆ, ಚಪ್ಪಾಳೆಗೆ ಸೀಮಿತವಾಗಿದ್ದಾರೆ. ಹೀಗಾಗಿ, ಕೆಲವರು ಸಿಳ್ಳೆ-ಚಪ್ಪಾಳೆ ಹೊಡೆದರೆ ಗೆಲ್ಲಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಇನ್ನೂ 7 ರಿಂದ 8 ವರ್ಷ ಕಾಯಬೇಕು ಎಂದು ಮಾತನಾಡಿದ್ದಾರೆ.

ಕಾಂಗ್ರೆಸ್ ನಾಯಕರು ಮೊದಲು ಅವರ ಕ್ಷೇತ್ರವನ್ನ ಉಳಿಸಿಕೊಳ್ಳಬೇಕು. ಈಶ್ವರಪ್ಪ ರಾಜ್ಯಪಾಲರಿಗೆ ಬರೆದಿರುವ ಪತ್ರದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಈ ಹಿಂದೆ ಎಸ್​ಎಂ ಕೃಷ್ಣ, ದೇವೆಗೌಡ ಸಿಎಂ ಇರುವಾಗ ಕೂಡ ಕೆಲವರು ಪತ್ರ ಬರೆದಿದ್ದರು. ಪತ್ರ ಬರೆಯುವುದು ಹೊಸದೇನಲ್ಲ. ಈಶ್ವರಪ್ಪನವರು ಪಕ್ಷದ ಹಿರಿಯ ನಾಯಕರು. ನಾಲ್ಕು ಗೋಡೆ ಮಧ್ಯೆ ಈ ಸಮಸ್ಯೆಯನ್ನ ಪಕ್ಷ ಬಗೆಹರಿಸಲಿದೆ ಎಂದು ಮಾತನಾಡಿದ್ದಾರೆ.

ಇದನ್ನೂ ಓದಿ: ಉಪ ಚುನಾವಣೆಯನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತೇವೆ: ಬಸವರಾಜ ಬೊಮ್ಮಾಯಿ

Karnataka ByElection 2021: ಕರ್ನಾಟಕ ಉಪ ಚುನಾವಣೆಗೆ ಮುಹೂರ್ತ ಫಿಕ್ಸ್ ; ಏಪ್ರಿಲ್ 17ರಂದು ನಡೆಯಲಿದೆ ಚುನಾವಣೆ