ರಾಯಚೂರು: ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಮಸ್ಕಿ ಕ್ಷೇತ್ರದಲ್ಲಿ ಜನರಿಂದ ಅಭೂತ ಪೂರ್ವ ಬೆಂಬಲ ಸಿಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಮೊದಲುರು ಕೆರೆ ತುಂಬಿಸುವ ಕುರಿತಾಗಿ ಬಿ.ವೈ ವಿಜಯೇಂದ್ರ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿ, ಒಂದು ಕೆರೆ ತುಂಬಿಸುವುದೇನು ದೊಡ್ಡ ಸಾಧನೆನಾ? ನಾವು ನೂರಾರು ಕೆರೆಗಳನ್ನು ತುಂಬಿಸಿದ್ದೀವಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಿ.ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರ ಎಲ್ಲ ವಿಚಾರದಲ್ಲೂ ವಿಫಲವಾಗಿದೆ. ನೀರಾವರಿ ವಿಚಾರದಲ್ಲೂ ಬಿಜೆಪಿ ರೈತರಿಗೆ ಅನ್ಯಾಯ ಮಾಡಿದೆ. 5A ಉಪ ಕಾಲುವೆ ನಿರ್ಮಾಣ ವಿಚಾರದಲ್ಲಿ ನಾವು ನೀರಾವರಿಗೆ ಆದ್ಯತೆ ನೀಡುತ್ತೇವೆ. ರೈತರು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಖುದ್ದಾಗಿ ಹೋಗಿ ರೈತರ ಮನವೊಲಿಸುತ್ತೇನೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಜನ ಸರ್ಕಾರದ ವಿರುದ್ಧ ಅಸಮಾಧಾನವಾಗಿದ್ದಾರೆ. 40 ವರ್ಷದ ರಾಜಕಿಯದಲ್ಲಿ ಇಷ್ಟೊಂದು ಭ್ರಷ್ಟ ಸರ್ಕಾರವನ್ನು ನೋಡಿಲ್ಲ. ಬಿ.ವೈ ವಿಜಯೇಂದ್ರ ಡಿ ಫ್ಯಾಕ್ಟರ್ ಚೀಫ ಮಿನಿಸ್ಟರ್. ಡಿನೋಟಿಫಿಕೇಷನ್ ಹಗರಣದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೇಲೆ ಕೇಸ್ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ. 5A ಉಪ ಕಾಲುವೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ. ಎಲ್ಲೆಲ್ಲಿ ನೀರಾವರಿ ಮಾಡುವುದಕ್ಕೆ ಸಾಧ್ಯವಾಗುತ್ತದೆಯೋ, ಅಲ್ಲಲ್ಲಿ ನೀರು ಬಳಕೆಯನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೆ.ಆರ್.ಪೇಟೆ, ಶಿರಾದಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ಆಘಾತವಾಗಿಲ್ಲ. ಯಾರಿಗೆ ಎಲ್ಲೆಲ್ಲಿ ಆಘಾತವಾಗಬೇಕೋ ಆಗ ಆಗುತ್ತೆ. ಮಸ್ಕಿ ಜನ ಕಾಂಗ್ರೆಸ್ ಜತೆ ಭಾವನಾತ್ಮಕವಾಗಿ ಬೆರೆತಿದ್ದಾರೆ. ಜನರೇ ಸ್ವಯಂ ಪ್ರೇರಿತವಾಗಿ ಅಭ್ಯರ್ಥಿಗೆ ಹಣ ನೀಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ತಮ್ಮನ್ನು ತಾವು ಮಾರಿಕೊಂಡಿದ್ದಕ್ಕೆ ಪ್ರತಾಪ ಗೌಡ ವಿರುದ್ಧ ಆಕ್ರೋಶವಿದೆ. ಇಲ್ಲಿ ಸ್ವಾಭಿಮಾನದ ಮೇಲೆ ಚುನಾವಣೆ ನಡೆಯುತ್ತಿದೆ. 3 ಕ್ಷೇತ್ರಗಳ ಬೈಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಜಯಗಳಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
5A ಉಪ ಕಾಲುವೆ ನಿರ್ಮಾಣ ವಿಚಾರ ಕಾಂಗ್ರೆಸ್ ನೀರಾವರಿಗೆ ಆದ್ಯತೆ ನೀಡಿದಷ್ಟು ಯಾವ ಸರ್ಕಾರವೂ ನೀಡಿಲ್ಲ. ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲ್ಲಿದೆ ಎಂದು ಮಾತನಾಡಿದ್ದಾರೆ.
ಇದನ್ನೂ ಓದಿ: Karnataka ByElection 2021; ನಾಳೆಯಿಂದ ಬೆಳಗಾವಿಯಲ್ಲಿ ಪ್ರಚಾರ ನಡೆಸಲಿರುವ ಬಿ.ಎಸ್ ಯಡಿಯೂರಪ್ಪ
Karnataka ByElection 2021: ಕಾಂಗ್ರೆಸ್ಗೆ ಬೈ ಬೈ, ಬಿಜೆಪಿಗೆ ಜೈಜೈ ಎಂದ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ
(Karnataka by-election 2021 There is unprecedented support from people in the field of muskie says siddaramaiah)