ರಾಯಚೂರು: ಬಿಸಿಲಿನಲ್ಲಿ ನಮಗಾಗಿ ಕಾದು ಕುಳಿತ ಕಾಂಗ್ರೆಸ್ ಕಾರ್ಯಕರ್ತರಿಗೆ ಕೋಟಿ ನಮಸ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಏಪರ್ಡಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ತಮ್ಮ ಭಾಷಣ ಆರಂಭಿಸಿದರು. ಮಸ್ಕಿ ಜನರ ತೀರ್ಪು, ಸ್ವಾಭಿಮಾನವನ್ನು ಸಾಯಿಸಿದ್ದಕ್ಕೆ ಚುನಾವಣೆ ನಡೆಯುತ್ತಿದೆ. ಪ್ರತಾಪಗೌಡ ಪಾಟೀಲ್ರದ್ದು ಯಾವಾಗಲೂ ಕಾಟ ಇದ್ದಿದ್ದೇ ಎಂದು ಮಸ್ಕಿ ಪಟ್ಟಣದ ಕಾಂಗ್ರೆಸ್ ಸಮಾವೇಶದಲ್ಲಿ ಡಿಕೆಶಿ ಹೇಳಿದರು.
ಬಸವಣ್ಣನ ತತ್ವ ನಮ್ಮ ಅಭ್ಯರ್ಥಿ ಬಸನಗೌಡ ತುರವಿಹಾಳರಲ್ಲಿ ಕಾಣುತ್ತಿದೆ. ಕಾಂಗ್ರೆಸ್ ಎಲ್ಲಾ ಜಾತಿಗಳ ಪಕ್ಷ. ಬಿಜೆಪಿ ಅಂದ್ರೆ ಬರೀ ಹಿಂದೂ, ಮುಂದು ಅಷ್ಟೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಪ್ರತಾಪಗೌಡ ಯಾರನ್ನೂ ಕೇಳದೆ ಮಾರಾಟವಾಗಿದ್ದಾನೆ. ಪ್ರತಾಪಗೌಡ ನೇರ ಬಾಂಬೆಗೆ ಹೋಗಿ ವ್ಯಾಪಾರ ಆಗಿದ್ದಾನೆ. ಯಾರೊಬ್ಬರಿಗೂ ಹೇಳದೆ ಕೇಳದೆ ರಾಜೀನಾಮೆ ಕೊಟ್ಟಿದ್ದಾನೆ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
‘ಮಸ್ಕಿ ಕ್ಷೇತ್ರಕ್ಕೆ ಕನಕಪುರದಷ್ಟೇ ಗೌರವ ಕೊಡ್ತೇನೆ’
ಪ್ರಕೃತಿ ಎಲ್ಲ ಲೆಕ್ಕ ಹಾಕುತ್ತೆ, ಹಾಗಾಗಿ ನನಗೆ ನಂಬಿಕೆ ಇದೆ. ಮಸ್ಕಿ ಕ್ಷೇತ್ರಕ್ಕೆ ಕನಕಪುರ ಕ್ಷೇತ್ರದಷ್ಟೇ ಗೌರವ ಕೊಡ್ತೇನೆ. ನ್ಯಾಯ, ನೀತಿ ಧರ್ಮದಿಂದ ಚುನಾವಣೆ ಮಾಡೋಣ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ‘ಟಗರು’ಗೆ ಮೇಕೆ ಗಿಫ್ಟ್ ಕೊಟ್ಟು ಕೇಕೆ ಹಾಕಿದ ಅಭಿಮಾನಿಗಳು; ಮೇಕೆಯನ್ನು ಕಾಂಗ್ರೆಸ್ಗೆ ಬರಮಾಡಿಕೊಂಡ ಡಿಕೆಶಿ!
Published On - 7:32 pm, Mon, 29 March 21