Karnataka Cabinet: ಇಂದೇ ಸಚಿವರಿಗೆ ಖಾತೆ ಹಂಚಿಕೆ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

| Updated By: guruganesh bhat

Updated on: Aug 06, 2021 | 3:06 PM

Portfolio Allocation: ಕೊವಿಡ್ ನಿರ್ವಹಣೆ ಕುರಿತು ಪರಿಣಿತರ ಜತೆ ಸಭೆ ನಡೆಸಿದ ಅವರು ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಜಾರಿಯ ಬಗ್ಗೆಯೂ ಮಾಹಿತಿ ನೀಡಿದರು.

Karnataka Cabinet: ಇಂದೇ ಸಚಿವರಿಗೆ ಖಾತೆ ಹಂಚಿಕೆ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
Karnataka Cabinet: ಚೊಚ್ಚಲ ಸಚಿವ ಸಂಪುಟ ರಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಇಂದೇ ಖಾತೆ ಹಂಚಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕೊವಿಡ್ ನಿರ್ವಹಣೆ ಕುರಿತು ಪರಿಣಿತರ ಜತೆ ಸಭೆ ನಡೆಸಿದ ಅವರು ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಜಾರಿಯ ಬಗ್ಗೆಯೂ ಮಾಹಿತಿ ನೀಡಿದರು. ಜತೆಗೆ ಇಂದೇ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಮಾಡುವುದಾಗಿ ತಿಳಿಸಿದರು. ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೋಳಿ ‌ಮನೆಯಲ್ಲಿ ನಡೆದ ಸಭೆಯ ಕುರಿತು  ಪ್ರತಿಕ್ರಿಯಿಸಲು ಅವರು ಈ ಸಂದರ್ಭದಲ್ಲಿ ನಿರಾಕರಿಸಿದರು.

ಶಾಲಾ ಕಾಲೇಜುಗಳು ಆಗಸ್ಟ್ 23 ರಿಂದ ಆರಂಭ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ  ಕೊವಿಡ್ ನಿರ್ವಹಣೆ ಕುಇರತು ಪರಿಣಿತರ ಜತೆ ಸಭೆ ನಡೆಸಿದ ನಂತತ ತಿಳಿಸಿದರು. ಶಾಲಾ-ಕಾಲೇಜುಗಳು ಆಗಸ್ಟ್‌ 23ರಿಂದ ಆರಂಭ ಆಗಲಿದೆ. 9, 10, 12ನೇ ತರಗತಿಗಳು ಆರಂಭವಾಗಲಿವೆ. ನಂತರ 1ರಿಂದ 8ರವರೆಗಿನ ಶಾಲೆಗಳ ಆರಂಭದ (School Opening) ಬಗ್ಗೆ ಚರ್ಚೆ ಮಾಡಲಾಗುವುದು. ಆಗಸ್ಟ್‌ ಬಳಿಕ ಕೋವಿಡ್‌ ತೀವ್ರತೆ ನೋಡಿ ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ರಾತ್ರಿ 9 ಗಂಟೆಯಿಂದ ಮುಂಜಾನೆ 5ರವರೆಗೆ ನೈಟ್ ಕರ್ಫ್ಯೂ (Night Curfew) ಜಾರಿಯಾಗಲಿದೆ. ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂಗೆ (Weekend Curfew) ನಿರ್ಧರಿಸಲಾಗಿದೆ. ಶಾಲೆ ಆರಂಭದ ಬಗ್ಗೆಯೂ ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ. ಮೊದಲ ಹಂತದಲ್ಲಿ 9, 10, 11, 12ನೇ ತರಗತಿ ಆರಂಭಿಸಲಾಗುವುದು. ಬ್ಯಾಚ್ ವೈಸ್ ತರಗತಿ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಕೊರೊನಾ ತೀವ್ರತೆ ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇವೆ. ಪ್ರಾಥಮಿಕ ಶಾಲೆ ಆರಂಭ ಬಗ್ಗೆ ತಜ್ಞರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು.

ನಾಳೆ ಅಥವಾ ನಾಡಿದ್ದು ಟಾಸ್ಕ್ ಫೋರ್ಸ್ ರಚನೆ ಮಾಡುವುದಾಗಿ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಚಿವರಿಗೆ ಇಂದೇ ಖಾತೆ ಹಂಚಿಕೆ ಮಾಡಲಾಗುವುದು ಎಂದು ಸಹ ಅವರು ತಿಳಿಸಿದರು. ಸದ್ಯದ ಕೊರೊನಾ ಪರಿಸ್ಥಿತಿ ಬಗ್ಗೆ ಕೊವಿಡ್ ಪರಿಣಿತರ ಸಭೆಯಲ್ಲಿ ಚರ್ಚೆ ನಡೆಸಿದ್ದಾಗಿ ಅವರು ತಿಳಿಸಿದರು.

ಮೊದಲ ಹಂತದಲ್ಲಿ 9, 10, 11, 12ನೇ ತರಗತಿ ಆರಂಭಿಸಲಾಗುವುದು. ಬ್ಯಾಚ್ ವೈಸ್ ತರಗತಿ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಕೊರೊನಾ ತೀವ್ರತೆ ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇವೆ. ಪ್ರಾಥಮಿಕ ಶಾಲೆ ಆರಂಭ ಬಗ್ಗೆ ತಜ್ಞರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: 

Sigandur Chowdeshwari Temple: ವೀಕೆಂಡ್‌ನಲ್ಲಿ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಭೇಟಿ ನೀಡಿದ್ರೆ ಸಿಗೊಲ್ಲ ತಾಯಿಯ ದರ್ಶನ

ಕೊವಿಡ್ ಲಸಿಕೆ ಪಡೆಯದೇ ಇದ್ದರೆ ಸೆಲ್ ಫೋನ್ ಬ್ಲಾಕ್, ಕೆಲಸಕ್ಕೂ ಕುತ್ತು: ಕಠಿಣ ಕ್ರಮ ಕೈಗೊಂಡ ಪಾಕಿಸ್ತಾನ

(Karnataka Cabinet CM Basavaraj Bommai says portfolio allocation will be done today)

Published On - 3:01 pm, Fri, 6 August 21