ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಐತಿಹಾಸಿಕ ಅಯ್ಯನಕೆರೆ(Ayyana Kere). 100 ಎಕರೆಗೂ ಹೆಚ್ಚಿನ ವಿಸ್ತಿರ್ಣವುಳ್ಳ ಕೆರೆ. ಅಂದಾಜು 5 ರಿಂದ 6 ಸಾವಿರ ಹೆಕ್ಟೇರ್ ನೀರಾವರಿ ಕಲ್ಪಿಸೋ ಜೀವನಾಡಿ. ಮಲೆನಾಡಿನ ಮಳೆ ಅಬ್ಬರಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿ ಪ್ರವಾಸಿ ತಾಣವಾಗಿದೆ(Tourist Spot). ಅಲ್ದೆ, ಏಳು ಗುಡ್ಡಗಳ ಮಧ್ಯೆ ಇರೋ ಈ ಕೆರೆ ಕೋಡಿ ಬಿದ್ದಿರೋದ್ರಿಂದ, ನೀರಿನ ಸೌಂದರ್ಯ ಸವಿಯಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಅಲ್ದೆ, ಕೆರೆ ತುಂಬಿ ಹರಿಯುತ್ತಿರುವುದರಿಂದ ಈ ಭಾಗದ ರೈತರು, ಜನಸಾಮಾನ್ಯರಿಗಂತೂ ಸಂಭ್ರಮವೋ ಸಂಭ್ರಮ.
ಅಯ್ಯನಕೆರೆಯಲ್ಲಿ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು
ಇನ್ನು, ಚಂದ್ರದ್ರೋಣ ಪರ್ವತ ಶ್ರೇಣಿಗೆ ಭೇಟಿ ನೀಡೋ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡಿ ಕಾಲ ಕಳೀತಾರೆ. ಅದ್ರಲ್ಲೂ ಇಲ್ಲಿ ಯುವಕ-ಯುವತಿಯರು, ಪ್ರೇಮಿಗಳ ಸಂಖ್ಯೆಯೇ ಹೆಚ್ಚು. ವೀಕೆಂಡ್‍ನಲ್ಲಿ ಇಲ್ಲಿಗೆ ಆಗಮಿಸೋ ಪ್ರವಾಸಿಗರು ದಿನವಿಡೀ ಕೆರೆ ಬಳಿ ಕುಣಿದು ಕುಪ್ಪಳಿಸ್ತಾರೆ. ಮತ್ತೊಂದೆಡೆ ಸಾಹಸಿ ಈಜುಪಟುಗಳು ಹತ್ತಾರು ಅಡಿ ಆಳವಿರೋ ಕೆರೆಯಲ್ಲಿ ತಮ್ಮ ಸಾಹಸವನ್ನ ತೋರಿಸ್ತಾರೆ. ಇಷ್ಟೇ ಅಲ್ಲ, ಇಲ್ಲಿ ಹರಿಯೋ ನೀರು ಕಡೂರು ತಾಲೂಕಿನ ಬಹುತೇಕ ಭಾಗಕ್ಕೆ ಕುಡಿಯೋ ನೀರಿನ ಸೌಲಭ್ಯ ಕಲ್ಪಿಸಿದೆ. ಇಲ್ಲಿನ ಊರುಕಾಲುವೆ, ಬಸವನಕಾಲುವೆ, ಕಡೇ ಕಾಲುವೆ, ಗೌರಿ ಹಳ್ಳಿ ನಾಲ್ಕು ಕಾಲುವೆಗಳಾಗಿ ಹರಿಯೋ ನೀರು ಸಾವಿರಾರು ಜನರಿಗೆ ಬದುಕುವ ಚೈತನ್ಯ ತಂದಿದೆ.
ಸಾಹಸಿ ಈಜುಪಟುಗಳು ಹತ್ತಾರು ಅಡಿ ಆಳವಿರೋ ಕೆರೆಯಲ್ಲಿ ತಮ್ಮ ಸಾಹಸವನ್ನ ಪ್ರದರ್ಶನ
ಸದ್ಯ, ಪ್ರವಾಸಿ ತಾಣವಾಗಿರೋ ಈ ಸ್ಥಳ, ಪ್ರವಾಸಿಗರನ್ನ ಕೈ ಬಿಸಿ ಕರೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಕೆರೆಯ ಸೌಂದರ್ಯದ ರಾಶಿ ಕೂಡ ಕಣ್ಣಲ್ಲಿ ಕಟ್ಟುವಂತಿದೆ. ಈಗಾಗಲೇ ಅಯ್ಯನಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗ್ತಿದ್ದು, ಪ್ರವಾಸಿಗರಿಗೆ ಮತ್ತಷ್ಟು ಕಿಕ್ ಕೊಡ್ತಿದೆ.
ಅಯ್ಯನಕೆರೆಯ ನೀರಿನೊಂದಿಗೆ ಮಗುವಿನ ಆಟ
ಇದನ್ನೂ ಓದಿ: ದಶಕದ ಬಳಿಕ ಜೋಗ ಜಲಪಾತದಂತೆ ತುಂಬಿ ಹರಿದ ಉಚ್ಚಂಗಿದುರ್ಗದ ಹೊನ್ನಮ್ಮನ ಝರಿ -ಮನ ಸೋತ ಪ್ರವಾಸಿಗರು