ದಶಕದ ಬಳಿಕ ಜೋಗ ಜಲಪಾತದಂತೆ ತುಂಬಿ ಹರಿದ ಉಚ್ಚಂಗಿದುರ್ಗದ ಹೊನ್ನಮ್ಮನ ಝರಿ -ಮನ ಸೋತ ಪ್ರವಾಸಿಗರು
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಇಲ್ಲೊಂದು ಭವ್ಯ ಮನೋಹರ ಸಾಮ್ರಾಜ್ಯ ಹುಟ್ಟುಕೊಂಡಿದೆ. ಗುಡ್ಡದ ಮೇಲಿಂದ ಭೂಮಿಗೆ ಒಂದೇ ಸಮನೆ ನೀರು ಜೋಗ ಜಲಪಾತದಂತೆ ಬೀಳುತ್ತಿದೆ. ಇದಕ್ಕೆ ಹೊನ್ನಮ್ಮನ ಝರಿ ಎಂದು ಹೆಸರು. ನೂರ ಅಡಿಗೂ ಹೆಚ್ಚು ಎತ್ತರದಿಂದ ನೀರು ಭೂಮಿಗೆ ಬಂದು ಹೊಂಡ ಸೇರುತ್ತದೆ.
ದಾವಣಗೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಐತಿಹಾಸಿಕ ಪ್ರಸಿದ್ದ ಸ್ಥಳ. ಮೇಲಾಗಿ ಇಲ್ಲಿನ ಗುಡ್ಡದ ಮೇಲೆ ಇರುವ ಉಚ್ಚಂಗೆಮ್ಮನ ಪುಣ್ಯಕ್ಷೇತ್ರಕ್ಕೆ ವರ್ಷವಿಡೀ ಲಕ್ಷಾಂತರ ಜನ ಬರುತ್ತಾರೆ. ಕರ್ನಾಟಕವಷ್ಟೆ ಅಲ್ಲದೇ ಪಕ್ಕದ ಆಂಧ್ರಪ್ರದೇಶದ ತೆಲಂಗಾಣ ಸೇರಿದಂತೆ ಬಹುತೇಕ ಕಡೆಯಿಂದ ಜನ ಬರುತ್ತಾರೆ.
ಇದು ಪುಣ್ಯಕ್ಷೇತ್ರದ ಕಥೆಯಾದ್ರೆ ಮತ್ತೊಂದೆಡೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಇಲ್ಲೊಂದು ಭವ್ಯ ಮನೋಹರ ಸಾಮ್ರಾಜ್ಯ ಹುಟ್ಟುಕೊಂಡಿದೆ. ಗುಡ್ಡದ ಮೇಲಿಂದ ಭೂಮಿಗೆ ಒಂದೇ ಸಮನೆ ನೀರು ಜೋಗ ಜಲಪಾತದಂತೆ ಬೀಳುತ್ತಿದೆ. ಇದಕ್ಕೆ ಹೊನ್ನಮ್ಮನ ಝರಿ ಎಂದು ಹೆಸರು. ನೂರ ಅಡಿಗೂ ಹೆಚ್ಚು ಎತ್ತರದಿಂದ ನೀರು ಭೂಮಿಗೆ ಬಂದು ಹೊಂಡ ಸೇರುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ಮಾತ್ರ ಇಂತಹ ದೃಶ್ಯಗಳನ್ನ ನೋಡಲು ಸಾದ್ಯ. ಕಾರಣ ಇದು ಮಳೆಯಾಶ್ರಿತ ಪ್ರದೇಶ. ಮೇಲಾಗಿ ಬರದ ನಾಡು. ಕಳೆದ ಹತ್ತುವರ್ಷದ ಬಳಿಕ ಇಂತಹ ಮನಮೋಹಕ ಪ್ರಕೃತಿ ಸೌಂದರ್ಯದ ಸವಿಯುವ ಭಾಗ್ಯ ಸುತ್ತಲಿನ ಜನರಿಗೆ ಪ್ರಾಪ್ತಿ ಆಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಳೆದ ನಾಲ್ಕು ದಿನಗಳ ಹಿಂದೆ ಈ ಪ್ರದೇಶದಲ್ಲಿ ಸುರಿದ ಭರ್ಜರಿ ಮಳೆ.
ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಹೊಬಳಯಲ್ಲಿ ಒಂದೇ ದಿನ 308 ಮಿಲಿಮೀಟರ್ ಮಳೆ ದಾಖಲಾಗಿತ್ತು. ಇದನ್ನ ರಾಜ್ಯ ಹವಾಮಾನ ಇಲಾಖೆಯೇ ಸ್ಪಷ್ಟ ಪಡಿಸಿತ್ತು. ಈ ರೀತಿ ಸುರಿದ ಮಳೆಗೆ ಪಣಿಯಾಪುರ ಕರಡಿದುರ್ಗ ಸೇರಿದಂತೆ ಬಹುತೇಕ ಕೆರೆಗಳು ಭರ್ತಿಯಾಗಿ ಕೆಲ ಕೆರೆಗಳು ಒಡೆದು ಹೋಗಿದ್ದವು. ಈ ವೇಳೆ ಉಚ್ಚಂಗಿದುರ್ಗದ ಗುಡ್ಡದ ಮೇಲೆ ನೀರು ಸಂಗ್ರಹವಾಗಿದೆ. ಹೀಗೆ ಸಂಗ್ರಹವಾದ ನೀರು ಹೊನ್ನಮ್ಮನ ಝರಿ ಮೂಲಕ ಗುಡ್ಡದ ಮೇಲಿಂದ ಭೂಮಿಗೆ ಬೀಳುತ್ತಿದೆ. ಇದಕ್ಕೆ ಜನ ಜೋಗ ಜಲಪಾತ ಎನ್ನುತ್ತಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಹೊನ್ನಮ್ಮನ ಝರಿಗೆ ನೀರು ಬರುವಷ್ಟು ಮಳೆ ಬಂದಿರಲಿಲ್ಲ. ಈ ಝರಿಗೆ ನೀರು ಬಂದರೆ ಭರ್ಜರಿ ಮಳೆ ಆಗಿದೆ ಎಂಬುದು ಜನರ ನಂಬಿಕೆ. ಈ ವರ್ಷ ಭರ್ಜರಿ ಮಳೆ ಆಗಿದೆ ಹೀಗಾಗಿ ಝರಿ ಹರಿದಿದೆ ಎಂದು ಜನ ಸಂತೋಷದಿಂದ ಪ್ರಕೃತಿ ಸೊಬಗನ್ನು ಸವಿಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ; ವಾಘವಾಡೆ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ
Published On - 2:08 pm, Fri, 23 July 21