AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಟ್ನೆಸ್‌ ಕಾಪಾಡಿಕೊಳ್ಳಲು ಊಟ ಬಿಡುತ್ತಿದ್ದೀರಾ? ಹಾಗಿದ್ರೆ ನೀವು ಈ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು

ನಾವು ನಿಯಮಿತವಾಗಿ ಊಟ ಬಿಡಲು ಆರಂಭಿಸಿದಾಗ, ದೇಹ ಶಕ್ತಿಯನ್ನು ಬಳಸುವ ಬದಲು ಅದನ್ನು ಸಂಗ್ರಹಿಸಲು ಆರಂಭಿಸುತ್ತದೆ. ಇದರಿಂದ ಮೆಟಾಬಾಲಿಸಂ ನಿಧಾನಗೊಳ್ಳುತ್ತದೆ ಮತ್ತು ವರ್ಕೌಟ್ ಮಾಡುವುದು ಹೆಚ್ಚು ಕಷ್ಟವಾಗುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಊಟ ಬಿಡುವುದು ಪರಿಹಾರವಲ್ಲ. ಬದಲಾಗಿ ಆರೋಗ್ಯಕರವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಂಡು ಆ ರೀತಿಯಾಗಿ ದಿನಚರಿಯನ್ನು ಅಳವಡಿಸಿಕೊಳ್ಳುವುದು ಉತ್ತಮ.

ಫಿಟ್ನೆಸ್‌ ಕಾಪಾಡಿಕೊಳ್ಳಲು ಊಟ ಬಿಡುತ್ತಿದ್ದೀರಾ? ಹಾಗಿದ್ರೆ ನೀವು ಈ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು
Fitness MistakesImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: Jun 03, 2026 | 8:28 PM

Share

ಇತ್ತೀಚಿನ ದಿನಗಳಲ್ಲಿ ಬೇಗನೆ ತೂಕ ಇಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಹಲವರು ಊಟವನ್ನೇ ಬಿಟ್ಟು ಫಿಟ್ನೆಸ್ ಪ್ರಯಾಣ ಆರಂಭಿಸುತ್ತಿದ್ದಾರೆ. ಬೆಳಗಿನ ಉಪಹಾರ ಬಿಡುವುದು, ಮಧ್ಯಾಹ್ನದ ಊಟ ತಡಮಾಡುವುದು ಅಥವಾ ಕೇವಲ ಕಾಫಿ, ಟೀ ಅಥವಾ ಹಣ್ಣಿನ ಜ್ಯೂಸ್ ಕುಡಿದು ದಿನ ಕಳೆಯುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕರ ವಿಧಾನ ಅಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ತೂಕ ಇಳಿಕೆ ಎಂದರೆ ಕೇವಲ ಜಿಮ್‌ನಲ್ಲಿ ವ್ಯಾಯಾಮ ಮಾಡುವುದಲ್ಲ. ಸರಿಯಾದ ಆಹಾರ ಪದ್ಧತಿ, ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಮತ್ತು ದೇಹಕ್ಕೆ ಬೇಕಾದ ವಿಶ್ರಾಂತಿ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹಾಗಾದರೆ ತೂಕ ಇಳಿಸಿಕೊಳ್ಳಲು (Weight Loss) ಊಟ ಬಿಟ್ಟರೆ ಏನಾಗುತ್ತದೆ, ಆರೋಗ್ಯಕರವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಊಟ ಬಿಡುವುದರಿಂದ ಏನಾಗಬಹುದು?

ಹಗಲಿನಲ್ಲಿ ಸರಿಯಾಗಿ ಊಟ ಮಾಡದವರು ಸಂಜೆ ವೇಳೆಗೆ ಹೆಚ್ಚು ಹಸಿವಿನಿಂದ ಬಳಲುತ್ತಾರೆ. ಇದರಿಂದ ರಾತ್ರಿ ಸಮಯದಲ್ಲಿ ಅತಿಯಾಗಿ ತಿನ್ನುವುದು ಅಥವಾ ಜಂಕ್ ಫುಡ್‌ಗಳಿಗೆ ಮೊರೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ರೀತಿಯ ಅಸಮರ್ಪಕ ಆಹಾರ ಪದ್ಧತಿ ಜೀರ್ಣಕ್ರಿಯೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ತಜ್ಞರ ಅಭಿಪ್ರಾಯದಂತೆ, ಫಿಟ್ನೆಸ್ ಗೆ ಉಪವಾಸ ಮಾಡುವುದು ಪರಿಹಾರವಲ್ಲ. ಬದಲಿಗೆ ನಿಯಮಿತ ಮತ್ತು ಸಮತೋಲನಯುತ ಜೀವನಶೈಲಿಯೇ ಉತ್ತಮ ಮಾರ್ಗವಾಗಿದೆ.

ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಏನು ಮಾಡಬೇಕು?

ತಜ್ಞರ ಸಲಹೆ ಪ್ರಕಾರ, ಊಟ ಬಿಡುವ ಬದಲು ಸಮತೋಲನಯುತ ಆಹಾರ ಸೇವನೆ ಮಾಡುವುದು ಬಹಳ ಉತ್ತಮ. ಅದರ ಜೊತೆಗೆ ಆಹಾರದಲ್ಲಿ ಪ್ರೋಟೀನ್, ಫೈಬರ್ (ನಾರು ಪದಾರ್ಥ), ಆರೋಗ್ಯಕರ ಕೊಬ್ಬು, ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಇರಬೇಕು. ಇವು ದೇಹಕ್ಕೆ ದಿನಪೂರ್ತಿ ಶಕ್ತಿಯನ್ನು ನೀಡುತ್ತವೆ ಮತ್ತು ವ್ಯಾಯಾಮದ ಸಾಮರ್ಥ್ಯವನ್ನೂ ಹೆಚ್ಚಿಸುತ್ತವೆ.

ಕ್ರ್ಯಾಶ್ ಡೈಟ್‌ಗಳಿಗೆ ಹೇಳಿ ಬೈ!

ತಾತ್ಕಾಲಿಕವಾಗಿ ತೂಕ ಇಳಿಸುವ ಕ್ರ್ಯಾಶ್ ಡೈಟ್‌, ಡಿಟಾಕ್ಸ್ ಟೀ ಮುಂತಾದ ವಿಧಾನಗಳು ದೀರ್ಘಕಾಲದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ನೀಡುವ ಆಹಾರವೇ ನಿಜವಾದ ಫಿಟ್ನೆಸ್‌ಗೆ ದಾರಿಯಾಗಿದೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು, ನಿಯಮಿತ ವ್ಯಾಯಾಮ, ಸಾಕಷ್ಟು ನೀರು ಕುಡಿಯುವುದು ಮತ್ತು ಉತ್ತಮ ನಿದ್ರೆ ಆರೋಗ್ಯಕರ ಜೀವನಶೈಲಿಗೆ ಮುಖ್ಯ. ಹಸಿವು ನಿಯಂತ್ರಿಸುವುದು ಎಂದರೆ ಊಟ ಮಾಡದಿರುವುದಲ್ಲ, ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸರಿಯಾದ ಸಮಯದಲ್ಲಿ ನೀಡುವುದಾಗಿದೆ. ಹಾಗಾಗಿ ಬೇಗನೆ ತೂಕ ಇಳಿಸಿಕೊಳ್ಳುವ ಆತುರದಲ್ಲಿ ಊಟ ಬಿಟ್ಟು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ದೀರ್ಘಕಾಲದ ಆರೋಗ್ಯ ಮತ್ತು ಫಿಟ್ನೆಸ್‌ಗಾಗಿ ಸಮತೋಲನಯುತ ಆಹಾರ ಹಾಗೂ ನಿಯಮಿತ ಜೀವನಶೈಲಿಯನ್ನೇ ಅನುಸರಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ