ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ B.S.ಯಡಿಯೂರಪ್ಪ ಅವರು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿಸುದ್ದಿಗೋಷ್ಠಿ ನಡೆಸಿದ್ದಾರೆ. ಮಾಧ್ಯಮದವರೊಂದಿಗೆ ನಡೆಯುತ್ತಿರುವ ಈ ಸಂವಾದಲ್ಲಿ B.S.ಯಡಿಯೂರಪ್ಪ ಅವರು ಮಹತ್ವದ ಅಂಶಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸಿಎಂ ಸುದ್ದಿಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದ ತಾಜಾ ಸುದ್ದಿಗಾಗಿ ಕೆಳಗಿನ ಟಿವಿ9 ಕನ್ನಡ ಲೈವ್ ಅಪ್ಡೇಟ್ಸ್ ನೋಡುತ್ತಿರಿ
Karnataka Chief Minister B.S.Yediyurappa meet the press Live Updates:
ಸಿಎಂ ಯಡಿಯೂರಪ್ಪ ಮತ್ತು ಗಣ್ಯರಿಂದ ಮಿಷನ್ ಬೆಂಗಳೂರು 2022 ಬುಕ್ಲೆಟ್ (ಕೈಪಿಡಿ) ಬಿಡುಗಡೆ ಮಾಡಲಾಯಿತು. ಮುಖ್ಯಮಂತ್ರಿಗಳಿಗೆ ಇತರೆ ಗಣ್ಯರು ಸಾಥ್ ಕೊಟ್ಟರು. ಬಿಡುಗಡೆ ನಂತರ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಮಿಷನ್ ಬೆಂಗಳೂರು ಅಡಿಯಲ್ಲಿ ರೂಪಿಸಲಾಗಿರುವ ಯೋಜನೆಗಳ ಬಗ್ಗೆ ಕಿರು ಪರಿಚಯ ನೀಡಿದರು.
ಈಗಾಗಲೇ ಆಸ್ತಿ ನೋಂದಣಿಗೆ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ವಲಸಿಗರೇ ಹೆಚ್ಚಾಗಿರುವ ಹಿನ್ನೆಲೆ ನಮ್ಮ ಸಂಸ್ಕೃತಿ ಪರಿಚಿಸಲು ಕೆಲಸ ಮಾಡಲಾಗುವುದು. ಜೊತೆಗೆ, ಬೆಂಗಳೂರು ಒನ್ ಕೇಂದ್ರಗಳ ವ್ಯಾಪ್ತಿ ವಿಸ್ತರಣೆ ಮಾಡಲಾಗುವುದು. ಈ ಕಾರ್ಯಕ್ರಮಳೆಲ್ಲಾ ಎರಡು ವರ್ಷಗಳಲ್ಲಿ ಪೂರ್ತಿ ಆಗಬೇಕು ಎಂದು ಸಿಎಂ BSY ಹೇಳಿದರು. ಯಾವುದೇ ಕಾರಣಕ್ಕೂ ಹಣಕಾಸಿನ ತೊಂದರೆ ಆಗಬಾರದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಸಂಚಾರ ದಟ್ಟಣೆ ವಾಯುವಾಲಿನ್ಯಕ್ಕೂ ಕಾರಣವಾಗಿದೆ. ಸದ್ಯ, ನಮ್ಮ ಮೆಟ್ರೋ 7 ಲಕ್ಷ ಪ್ರಯಾಣಿಕರನ್ನ ಹೊತ್ತೊಯ್ಯುತ್ತಿದೆ. ಮುಂದಿನ ಎರಡು ವರ್ಷದಲ್ಲಿ ಹತ್ತು ಲಕ್ಷ ಪ್ರಯಾಣಿಕರಿಗೆ ಅನುಕೂಲ ಮಾಡಲಾಗುವುದು. ಸ್ವಚ್ಛ ಬೆಂಗಳೂರು ಅಡಿಯಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮಾಡಲಾಗ್ತಿದೆ. ನನ್ನ ಕಸ ನನ್ನ ಜವಾಬ್ದಾರಿ ಅನ್ನೋ ಅರಿವು ಮೂಡಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಇದಲ್ಲದೆ, ಎರಡು ಬೃಹತ್ ವೃಕ್ಷೋಧ್ಯಾನಗಳ ನಿರ್ಮಾಣ ಮತ್ತು ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಸಹ ಹೇಳಿದರು.
ನಗರದ ಸೌಂದರ್ಯಕ್ಕೆ ಪೂರಕವಾಗಿ ರಾಜಕಾಲುವೆ ನಿರ್ಮಾಣವಾಗುತ್ತೆ. ತ್ಯಾಜ್ಯ ನೀರು ಮರುಬಳಕೆಗೆ ಯೋಜನೆ ಸಿದ್ಧಗೊಳಿಸಲಾಗುತ್ತಿದೆ. ಹಸಿರು ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಬೆಂಗಳೂರು ಮತ್ತೆ ಹಸಿರು ನಗರಿಯಾಗಿ ಪರಿವರ್ತಿಸಬೇಕು ಎಂದು BSY ಹೇಳಿದರು.
ಬಿಬಿಎಂಪಿ ಆಡಳಿತದಲ್ಲಿ ಪಾರದರ್ಶಕತೆ ತರಲು ಕ್ರಮ ಜರುಗಿಸಲಾಗುವುದು. ಹೊರವರ್ತುಲ ರಸ್ತೆಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. 2 ವರ್ಷಗಳಲ್ಲಿ ಎಲ್ಲಾ ಕಾರ್ಯಕ್ರಮ ಜಾರಿಗೆ ಶ್ರಮಿಸುತ್ತೇವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ವಿಶ್ವಮಾನ್ಯತೆ ಪಡೆದ ಮಹಾನಗರಗಳಲ್ಲಿ ಒಂದಾಗಿದೆ. ಸಮಸ್ಯೆಗಳನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಿ ಯೋಜನೆ ರೂಪಿಸುತ್ತೇವೆ. ಬೆಂಗಳೂರನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿಪಡಿಸಬೇಕು. ಬೆಂಗಳೂರಿನಲ್ಲಿ ವಾಹನ ದಟ್ಟಣೆ, ವಾಯುಮಾಲಿನ್ಯ ನಿಯಂತ್ರಣೆ ಹಾಗೂ ಸಂಚಾರ ಸುಗಮಗೊಳಿಸಲು ಸರ್ಕಾರದಿಂದ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಸಂಚಾರ ದಟ್ಟಣೆಯಿರುವ ರಸ್ತೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸುತ್ತೇವೆ. ಕೆಆರ್ಡಿಸಿಎಲ್ ವತಿಯಿಂದ ರಸ್ತೆಗಳ ಅಭಿವೃದ್ಧಿಗೆ ಕ್ರಮ ಜರುಗುತ್ತದೆ. ಬೆಂಗಳೂರು ನಗರದಲ್ಲಿ 1.25 ಕೋಟಿ ಜನರು ನೆಲೆಸಿದ್ದಾರೆ. ಕೆಪಿಸಿಯಿಂದ ಬಿಡದಿ ಬಳಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎಂದು ಹೇಳಿದರು. ಹಸಿರು ಬೆಂಗಳೂರು ಮರುನಿರ್ಮಾಣಕ್ಕೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಹೇಳಿದರು.
ಪ್ರಗತಿ ಪಥದಲ್ಲಿ ಮುಂದಿರುವ ಬೆಂಗಳೂರು ಮಹಾನಗರ ಯಾವಾಗಲೂ ಎಲ್ಲಾ ವಿಚಾರದಲ್ಲೂ ಮುಂದಿದೆ. 2022ರಲ್ಲಿ ಬೆಂಗಳೂರು ಹೇಗಿರಬೇಕೆಂದು ಯೋಜನೆ ರೂಪಿಸಿದ್ದೇವೆ. ಬೆಂಗಳೂರು ವೈಶಿಷ್ಟ್ಯದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ ಎಂದು ಬೆಂಗಳೂರು ಮಿಷನ್-2022 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆ ಸಾಧಿಸಬೇಕು.ಪ್ರಧಾನಿ ಉತ್ತೇಜನಕಾರಿ ಮಾತುಗಳಿಂದ ಪ್ರಭಾವಿತನಾದೆ. ವಿಜ್ಞಾನದ ರಾಜಧಾನಿ, ಐಟಿ-ಬಿಟಿ, ಸಿಲಿಕಾನ್ ಸಿಟಿಯಾಗಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಯೋಜನೆ ರೂಪಿಸುತ್ತೇವೆ. ಇದು ರಾಜ್ಯದ ರಾಜಧಾನಿಯಷ್ಟೇ ಅಲ್ಲ ಉದ್ಯಮ, ವಾಣಿಜ್ಯ, ಉದ್ಯೋಗದ ರಾಜಧಾನಿಯಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
Published On - 12:51 pm, Thu, 17 December 20