ಐಸಿಸಿ ವಿಶ್ವ ಟೆಸ್ಟ್ ಚಾಂಒಇಯನ್ಶಿಪ್ನ ಮೂರನೇ ದಿನದ ಆಟದಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್, ಎರಡೂ ತಂಡಗಳ ವಿಕೆಟ್ಗಳು ಉದುರಿದವು. ಭಾರತ ತನ್ನ ಪ್ರಮುಖ ವಿಕೆಟ್ ಸಹಿತ ಆಲ್ಔಟ್ ಆದರೆ, ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರರು ಇಬ್ಬರ ವಿಕೆಟ್ ಕಳೆದುಕೊಂಡಿತು. ಆ ಕ್ಷಣಗಳನ್ನು ಐಸಿಸಿ ಟ್ವಿಟರ್ ಖಾತೆ ಹಂಚಿಕೊಂಡಿದೆ. ಇಲ್ಲಿದೆ ನೋಡಿ.
Plenty of wickets on the third day of the ICC World Test Championship Final, but in between all that was some gorgeous batting, and a few emotions.
Your @OPPOIndia Batting Highlights for the day ? pic.twitter.com/5eoR8pky0x
— ICC (@ICC) June 20, 2021
ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇಕಡಾ 5ರಷ್ಟು ಕಡಿಮೆಯಾದರೆ ಲಾಕ್ಡೌನ್ ತೆರವುಗೊಳಿಸಲು ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಕುರಿತು ಸಿಎಂ ಯಡಿಯೂರಪ್ಪೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂನ್ 14ರವರೆಗೆ ಲಾಕ್ಡೌನ್ ನಿಯಮಗಳಲ್ಲಿ ಬದಲಾವಣೆ ಇಲ್ಲ. ಹೋಟೆಲ್ಗಳು ಸಂಜೆಯವರೆಗೂ ತೆರೆಯಬಹುದು. ಆದರೆ ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.
ಎರಡನೇ ಹಂತದಲ್ಲಿ ಸುಮಾರು ₹500 ಕೋಟಿ ಪ್ಯಾಕೇಜ್, ತಲಾ 3000 ದಂತೆ ಮಗ್ಗಗಳ ಕಾರ್ಮಿಕರಿಗೆ ಪರಿಹಾರ, ಚಲನಚಿತ್ರ, ದೂರದರ್ಶನ ಕಲಾವಿದರಿಗೆ ತಲಾ ₹3000, ಮೀನುಗಾರರಿಗೆ ತಲಾ 3000 ರೂ, ಅರ್ಚಕರು, ಅಡುಗೆ ಕೆಲಸಗಾರರಿಗೆ ತಲಾ ₹3000, ಆಶಾ ಕಾರ್ಯಕರ್ತೆಯರಿಗೂ ತಲಾ ತಲಾ ₹3000, ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೆ ತಲಾ ₹2000,ಪ್ರಾಥಮಿಕ ಅನುದಾನರಹಿತ ಶಿಕ್ಷಕರಿಗೆ ತಲಾ 5000 ರೂ ಪ್ಯಾಕೇಜ್ನ್ನು ಸಿಎಂ ಯಡಿಯೂರಪ್ಪ ಘೋಷಿಸಿದರು.
ರಾಜ್ಯದಲ್ಲಿ 1 ವಾರ ಲಾಕ್ಡೌನ್ ಮುಂದುವರೆಸಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದು, ಜೂನ್ 14ರವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ. ಅಲ್ಲದೇ 500 ಕೋಟಿ ರೂಪಾಯಿಗಳ ಲಾಕ್ಡೌನ್ ಪ್ಯಾಕೇಜ್ನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಮೀನುಗಾರರಿಕೆ, ಮುಜರಾಯಿ ಇಲಾಖೆ ನೋಂದಾಯಿತ ಅರ್ಚಕರು, ಮಸೀದಿಗಳ ಧಾರ್ಮಿಕ ಪೂಜಾರಿಗಳು, ಚಲನಚಿತ್ರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಪ್ಯಾಕೇಜ್ ಘೋಷಿಸಲಾಗಿದೆ.
ಸಿಎಂ ಯಡಿಯೂರಪ್ಪ ₹350 ಕೋಟಿ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಚಿವರ ಜೊತೆ ಚರ್ಚೆ ನಡೆಸಿರುವ ಸಿಎಂ ಯಡಿಯೂರಪ್ಪ ಈಗ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಲಾಕ್ ಡೌಬ್ ಮುಂದುವರಿಕೆ ವಿಚಾರವಾಗಿ ಬೇರೆ ಬೇರೆ ಜಿಲ್ಲೆಗಳಿಂದ ಬೇರೆ ಬೇರೆ ಅಭಿಪ್ರಾಯ ಸರ್ಕಾರವನ್ನು ತಲುಪಿದೆ. ಸಂಪೂರ್ಣ ರಾಜ್ಯಕ್ಕೆ ಲಾಕ್ ಡೌನ್ ವಿಧಿಸುವ ಬದಲು ಇನ್ನೂ ಕೊವಿಡ್ ಪೀಡಿತ ಜಿಲ್ಲೆಗಳನ್ನು ಗುರುತಿಸಿ ಆಯಾ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಕೆಗೆ ಸಿಎಂ ಯಡಿಯೂರಪ್ಪ ಓಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಆನ್ ಲಾಕ್ ಮಾದರಿಯ ವಿನಾಯಿತಿ ನೀಡುವ ಸಾಧ್ಯತೆಯೂ ಇದ್ದು, ಕಂದಾಯ ಇಲಾಖೆ, ಗೃಹ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಸಿಎಂ ಯಡಿಯೂರಪ್ಪ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದೆ. ಆಯಾ ಕಾಲೇಜುಗಳಲ್ಲೇ ಪರೀಕ್ಷೆ ನಡೆಸಿ ಫಲಿತಾಂಶ ನೀಡುವಂತೆ ಸಲಹೆ ನೀಡಿದ್ದು, ಹಿಂದಿನ ವರ್ಷ SSLC ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದ ಇಲಾಖೆ
ಈಗ ಮತ್ತಷ್ಟು ಸೂಕ್ತ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವಂತೆ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ ಸರ್ಕಾರಕ್ಕೆ ನೀಡಿರುವ ಮನವಿಯಲ್ಲಿ ತಿಳಿಸಿದೆ.
ವಿಕಲಚೇತನರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಜಯ ಕರ್ನಾಟಕ ವಿಕಲಚೇತನರ ವೇದಿಕೆ ಅಧ್ಯಕ್ಷ ರವಿ ಅವರು ಸರ್ಕಾರಕ್ಕೆ ಮನವಿ ನೀಡಿದ್ದಾರೆ. ಲಾಕ್ಡೌನ್ನಿಂದಾಗಿ ವಿಕಲಚೇತನರಿಗೆ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಮೂರು ತಿಂಗಳ ಮಾಸಾಶನ ನೀಡುವಂತೆ ಮನವಿ ನೀಡಲಾಗಿದೆ. ಸಿಎಂ ಮೊದಲ ಪ್ಯಾಕೇಜ್ ನಲ್ಲಿ ವಿಕಲಚೇತನರಿಗೆ ಯಾವುದೇ ಪರಿಹಾರ ನೀಡಿಲ್ಲ. ಹೀಗಾಗಿ ಎರಡನೇ ಕಂತಿನ ಪರಿಹಾರದಲ್ಲಿ ವಿಕಲಚೇತನರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಆಹಾರದ ಕಿಟ್ ನೀಡುವಂತೆ ಮನವಿ ಮಾಡಲಾಗಿದ್ದು, ವಿಕಲಚೇತನರ ಮನೆಗೆ ವ್ಯಾಕ್ಸಿನ್ ಸೌಲಭ್ಯ ನೀಡುವಂತೆಯೂ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಸುದ್ದಿಗೋಷ್ಠಿ ಆರಂಭಿಸಲಿದ್ದು, ಲಾಕ್ಡೌನ್ನಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ 2ನೇ ಬಾರಿ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆಯಿದೆ. ಖಾಸಗಿ ಶಾಲಾ ಶಿಕ್ಷಕರಿಗೆ ₹ 10,000 ಪರಿಹಾರ, ವಲಸೆ ಕಾರ್ಮಿಕರಿಗೆ ಕಿಟ್, ಮತ್ತಿತರ ವಲಯಗಳಿಗೂ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳಿಂದ ಸಿಎಂ ಯಡಿಯೂರಪ್ಪ ಮಾಹಿತಿ ಪಡೆದಿದ್ದಾರೆ. ಅಲ್ಲದೇ ವಿವಿಧ ವರ್ಗಗಳು ಸಹ ತಮಗೂ ಪ್ಯಾಕೇಜ್ ಘೋಷಿಸುವಂತೆ ಮನವಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವ ಸಾಧ್ಯತೆ ಇದೆ.
(Karnataka CM BS Yediyurappa PC live updates on sslc puc exam and lockdown extension covid curfew in Karnataka vaccination0