ಮಂಗಳೂರು: ನಿನ್ನೆ ನಡೆದ ಗೋಲಿಬಾರ್ನಲ್ಲಿ ಪ್ರತಿಭಟನೆ ನಿರತರಾಗಿದ್ದ ಇಬ್ಬರು ಮೃತಪಟ್ಟಿದ್ದರು. ಮೃತಪಟ್ಟ ಕುಟುಂಬಸ್ಥರನ್ನು ಭೇಟಿ ಮಾಡಲು ಇಂದು ಕಾಂಗ್ರೆಸ್ ನಿಯೋಗ ಮಂಗಳೂರಿಗೆ ತೆರಳಿತ್ತು. ಆದರೆ ಮಂಗಳೂರು ಪೊಲೀಸರು ಏರ್ಪೋರ್ಟ್ನಲ್ಲೇ ಕಾಂಗ್ರೆಸ್ ನಾಯಕರನ್ನು ತಡೆದಿದ್ದಾರೆ. ಬೆಂಗಳೂರಿಗೆ ವಾಪಸ್ ಹೋಗಲು ಪೊಲೀಸರು ಸೂಚಿಸಿದ್ದಾರೆ.
ಅದಕ್ಕೆ ನಾಯಕರು ಇಲ್ಲಿ ಆಗಿರುವ ಘಟನೆಯ ನೈಜತೆ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲ ನಾವು ಮೃತರ ಮನೆಗೆ ಭೇಟಿ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಬೆಂಗಳೂರಿಗೆ ವಾಪಸ್ ಹೋಗಲ್ಲ ಎಂದು ನಕಾರ ಮಾಡಿದ್ದಕ್ಕೆ ಪೊಲೀಸರು ನಾಯಕರನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರವಾಗಿ ಪೊಲೀಸರು, ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ನಡೆದಿದೆ.
Published On - 2:43 pm, Fri, 20 December 19