ಮೈಸೂರು ಮೃಗಾಲಯಕ್ಕೆ ಆಗಮಿಸಿದ ಹೊಸ ಅತಿಥಿಗಳು, ಪ್ರವಾಸಿಗರು ಫುಲ್ ಖುಷ್
ಮೈಸೂರು: ಏಷ್ಯಾ ಖಂಡದಲ್ಲೇ ಹೆಸರು ಗಳಿಸಿರೋ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಎಂಟ್ರಿ ಕೊಡ್ತಾರೆ. ಪ್ರಕೃತಿ ಸೌಂದರ್ಯ ಸವಿಯುತ್ತಾ ಹೊಸ ಹೊಸ ವನ್ಯಮೃಗಗಳನ್ನ ಕಣ್ತುಂಬಿಕೊಳ್ತಾರೆ. ಇದೀಗ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಪ್ರಾಣಿ ವಿನಿಮಯ ನಿಯಮದ ಪ್ರಕಾರ ಮೈಸೂರು ಮೃಗಾಲಯದಿಂದ ಜಿರಾಫೆ ಕೊಟ್ಟು ಒಂದು ಘೇಂಡಾಮೃಗ, ಒಂದು ಕಪ್ಪು ಚಿರತೆ, ಒಂದು ಜೊತೆ ಕೋತಿ ಜಾತಿಗೆ ಸೇರಿದ ಹೂಲಾಕ್ ಗಿಬ್ಬನ್ ಪ್ರಾಣಿ ತರಿಸಿಕೊಂಡಿದ್ದಾರೆ. ಹೊಸ ಇತಿಹಾಸ ಬರೆದ ಮೃಗಾಲಯ: ಸದ್ಯ ಶ್ರೀ ಚಾಮರಾಜೇಂದ್ರ […]
ಮೈಸೂರು: ಏಷ್ಯಾ ಖಂಡದಲ್ಲೇ ಹೆಸರು ಗಳಿಸಿರೋ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಎಂಟ್ರಿ ಕೊಡ್ತಾರೆ. ಪ್ರಕೃತಿ ಸೌಂದರ್ಯ ಸವಿಯುತ್ತಾ ಹೊಸ ಹೊಸ ವನ್ಯಮೃಗಗಳನ್ನ ಕಣ್ತುಂಬಿಕೊಳ್ತಾರೆ. ಇದೀಗ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಪ್ರಾಣಿ ವಿನಿಮಯ ನಿಯಮದ ಪ್ರಕಾರ ಮೈಸೂರು ಮೃಗಾಲಯದಿಂದ ಜಿರಾಫೆ ಕೊಟ್ಟು ಒಂದು ಘೇಂಡಾಮೃಗ, ಒಂದು ಕಪ್ಪು ಚಿರತೆ, ಒಂದು ಜೊತೆ ಕೋತಿ ಜಾತಿಗೆ ಸೇರಿದ ಹೂಲಾಕ್ ಗಿಬ್ಬನ್ ಪ್ರಾಣಿ ತರಿಸಿಕೊಂಡಿದ್ದಾರೆ.
ಹೊಸ ಇತಿಹಾಸ ಬರೆದ ಮೃಗಾಲಯ: ಸದ್ಯ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಹೊಸ ಅತಿಥಿಗಳ ಆಗಮನ ಖುಷಿ ತರಿಸಿದ್ರೆ ಹೊಸ ಇತಿಹಾಸ ಕೂಡ ಬರೆದಿದೆ. ಏನಂದ್ರೆ, ಮೈಸೂರು ಮೃಗಾಲಯದಿಂದ 3200ಕಿಲೋ ಮೀಟರ್ ದೂರದಲ್ಲಿರೋ ಅಸ್ಸಾಂ ಮೃಗಾಲಯಕ್ಕೆ ಜಿರಾಫೆಯನ್ನ ರಸ್ತೆ ಮೂಲಕ ರವಾನಿಸಿ ಇತಿಹಾಸ ಬರೆದಿದ್ದಾರೆ. ಜಿರಾಫೆಗೆ 6 ತಿಂಗಳು ವಾಹನದಲ್ಲಿ ಸಾಗೋ ಟ್ರೈನಿಂಗ್ ನೀಡಲಾಗಿತ್ತಂತೆ. ಅಲ್ಲದೇ 15 ಅಡಿ ಎತ್ತರದ ಬೋನಿನಲ್ಲಿ ರಸ್ತೆ ಮೂಲಕ ಜಿರಾಫೆಯನ್ನ ಕಳುಹಿಸಿ ಕೊಡಲಾಗಿದೆ.
ಒಟ್ನಲ್ಲಿ ದೇಶ-ವಿದೇಶದ ಪ್ರವಾಸಿಗರನ್ನ ತನ್ನತ್ತ ಸೆಳೆಯೋ ಮೈಸೂರು ಮೃಗಾಲಯದಲ್ಲಿ ಹೊಸ ಹೊಸ ಗೆಸ್ಟ್ಗಳು ಎಂಟ್ರಿ ಕೊಟ್ಟಿರೋದು ಸಂಭ್ರಮ ಮನೆ ಮಾಡಿದೆ. ವನ್ಯಪ್ರಾಣಿಗಳನ್ನ ಕಣ್ತುಂಬಿಕೊಳ್ಳೋಕೆ ಪ್ರವಾಸಿಗರ ದಂಡೇ ಆಗಮಿಸ್ತಿದೆ.