ಕಾಂಗ್ರೆಸ್​ನವರು ಪವಿತ್ರ ಹಸ್ತದವರು; ಕಾಂಗ್ರೆಸ್ ಹಗರಣವನ್ನ ಜನರ ಮುಂದೆ ಇಡಬೇಕಾಗುತ್ತೆ -ಸಿಎಂ ಬೊಮ್ಮಾಯಿ ಎಚ್ಚರಿಕೆಯ ಸಂದೇಶ

| Updated By: ಸಾಧು ಶ್ರೀನಾಥ್​

Updated on: Apr 16, 2022 | 1:51 PM

Basavaraj Bommai: ಕಾಂಗ್ರೆಸ್​ನವರು ಪವಿತ್ರ ಹಸ್ತದವರು ಅಂತಾ ಯಾತ್ರೆ ಹೋಗ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ಏನೆಂದು ಕರ್ನಾಟಕದ ಜನರಿಗೆ ಗೊತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಗರಣಗಳನ್ನ ಜನ ನೋಡಿದ್ದಾರೆ. ಇನ್ನೂ ಕಾಂಗ್ರೆಸ್ ಹಗರಣಗಳನ್ನ ಜನರ ಮುಂದೆ ಇಡಬೇಕಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಎಚ್ಚರಿಕೆಯ ಸಂದೇಶ ರವಾನಿಸಿದರು.

ಕಾಂಗ್ರೆಸ್​ನವರು ಪವಿತ್ರ ಹಸ್ತದವರು; ಕಾಂಗ್ರೆಸ್ ಹಗರಣವನ್ನ ಜನರ ಮುಂದೆ ಇಡಬೇಕಾಗುತ್ತೆ -ಸಿಎಂ ಬೊಮ್ಮಾಯಿ ಎಚ್ಚರಿಕೆಯ  ಸಂದೇಶ
ಈಶ್ವರಪ್ಪಗೆ ನಾನು ಯಾವುದೇ ಸರ್ಟಿಫಿಕೆಟ್ ಕೊಟ್ಟಿಲ್ಲ; ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡಿಲ್ಲ-ಸಿಎಂ ಬೊಮ್ಮಾಯಿ
Follow us on

ಬೆಂಗಳೂರು: ಎರಡು ದಿನಗಳ ಕಾಲ ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊಸಪೇಟೆಗೆ ತಲುಪಿದ್ದಾರೆ. ಅದಕ್ಕೂ ಮುನ್ನ ಸಂತೋಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಿಎಂ ಬೊಮ್ಮಾಯಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಸಂತೋಷ್ ಆತ್ಮಹತ್ಯೆ ಪ್ರಕರಣ ಕಾನೂನು ಬದ್ಧವಾಗಿ ತನಿಖೆಯಾಗುತ್ತಿದೆ. ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡಿಲ್ಲ. ನಮ್ಮ ವ್ಯವಸ್ಥೆ ಪ್ರಕಾರ ತನಿಖೆಯಾಗುತ್ತದೆ. ಈಶ್ವರಪ್ಪಗೆ ನಾನು ಯಾವುದೇ ಸರ್ಟಿಫಿಕೆಟ್ ಕೊಟ್ಟಿಲ್ಲ ಎಂದು ಸಿಎಂ ಬೊಮ್ಮಾಯಿ (CM Basavaraj Bommai) ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಗಳು ಈಶ್ವರಪ್ಪನನ್ನ ರಕ್ಷಣೆ ಮಾಡ್ತಾರೆ ಎಂದು ಸಿದ್ದರಾಮಯ್ಯ ವ್ಯಾಖ್ಯಾನ ಮಾಡ್ತಾರೆ. ಆದರೆ ಅವರು ಕೆಜೆ ಜಾರ್ಜ್ ಅವರನ್ನ ಅರೆಸ್ಟ್ ಮಾಡಿದ್ದರಾ? ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು ನೀಡಿದರು.

ಇದೇ ವೇಳೆ ಮಾಜಿ ಸಚಿವ ಕೆಜೆ ಜಾರ್ಜ್ ವಿರುದ್ಧದ ಪ್ರಕರಣದಲ್ಲಿ ವಿಡಿಯೋ ಇತ್ತು, ಡೆತ್ ನೋಟ್ ಇತ್ತು. ಕೋರ್ಟ್ ಹೇಳಿದ ಮೇಲೆ ಜಾರ್ಜ್ ಮೇಲೆ FIR ಹಾಕಲಾಯಿತು. ಸಂತೋಷ್ ಆತ್ಮಹತ್ಯೆ ಪ್ರಕರಣವನ್ನ ತನಿಖೆಯಾಗಲು ಬಿಡಿ. ಕಾಂಗ್ರೆಸ್​ನವರು ಅವರೇ ಲಾಯರ್ ಆಗಬೇಕು ಅಂತಾರೆ. ಅವರೇ ಪ್ರಾಸಿಕ್ಯೂಟರ್ ಸಹ ಆಗಬೇಕು ಅಂತಾರೆ! ಆದರೆ ಈ ಪ್ರಕರಣದಲ್ಲಿ ಎಲ್ಲವೂ ಕೂಡ ಕಾನೂನು ಬದ್ಧವಾಗಿ ನಡೆಯಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಸಿಬಿಐಗೆ ಸಂತೋಷ್ ಆತ್ಮಹತ್ಯೆ ಕೇಸ್ ವರ್ಗಾವಣೆ ವಿಚಾರ ಪ್ರಸ್ತಾಪಿಸಿದ ಸಿಎಂ ಬೊಮ್ಮಾಯಿ ಪ್ರಾಥಮಿಕ ತನಿಖೆ ನಂತರ ಸಿಬಿಐ ತನಿಖೆ ಬಗ್ಗೆ ನೋಡೋಣ ಎಂದು ಕ್ಲುಪ್ತವಾಗಿ ಹೇಳಿದರು.

ಕಾಂಗ್ರೆಸ್​ನವರು ಪವಿತ್ರ ಹಸ್ತದವರು ಅಂತಾ ಯಾತ್ರೆ ಹೋಗ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ಏನೆಂದು ಕರ್ನಾಟಕದ ಜನರಿಗೆ ಗೊತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಗರಣಗಳನ್ನ ಜನ ನೋಡಿದ್ದಾರೆ. ಇನ್ನೂ ಕಾಂಗ್ರೆಸ್ ಹಗರಣಗಳನ್ನ ಜನರ ಮುಂದೆ ಇಡಬೇಕಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಎಚ್ಚರಿಕೆಯ ಸಂದೇಶ ರವಾನಿಸಿದರು.

ಇನ್ನು ಸಿಎಂ ಬೊಮ್ಮಾಯಿ ಅವರು ಬೆಂಗಳೂರಿನಿಂದ ಹಂಪಿ ತಲುಪುತ್ತಿದ್ದಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದರು. ಆ ವೇಳೆ, ಹಂಪಿ ಕನ್ನಡ ವಿವಿಯಲ್ಲಿ ಸಂಪಾದಕ ಡಾ. ವೆಂಕಟೇಶ್ ಇಂದ್ವಾಡಿಯವರ ಪುಸ್ತಕ ಖರೀದಿಸಿದರು. ಉಚಿತವಾಗಿ ಬೇಡ ಎಂದು ಹೇಳಿ, ಹಣ ಕೊಟ್ಟು ಸಿಎಂ ಬಸವರಾಜ ಬೊಮ್ಮಾಯಿ ಪುಸ್ತಕ ಖರೀದಿಸಿದರು. ಡಿ ಆರ್ ನಾಗರಾಜ ಅವರ ಸಮಗ್ರ ಸಾಹಿತ್ಯ ಚಿಂತನೆ ಪುಸ್ತಕವನ್ನೂ ಸಿಎಂ ಬೊಮ್ಮಯಿ ಖರೀದಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಡಿರುವ ಪೋಸ್ಟ್​ ಇಲ್ಲಿದೆ:

Published On - 1:36 pm, Sat, 16 April 22