ಶಿವಮೊಗ್ಗ ಹರ್ಷ ಕೊಲೆಗೆ ಪ್ರತೀಕಾರವಾಗಿ ಕೊಲೆಗೆ ಸಂಚು; ಮತ್ತೊಂದು ಕೋಮುಗಲಭೆ ಸೃಷ್ಟಿಗೆ ಹೊಂಚು

Shivamogga Police: 13 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. FIR ದಾಖಲಿಸಿಕೊಂಡು ಬಹುತೇಕರನ್ನು ಬಂಧಿಸಲಾಗಿದೆ. ಇವರೆಲ್ಲಾ ರಾತ್ರೋರಾತ್ರಿ ಮುಸ್ಲಿಂ ಯುವಕನ ಕೊಲೆಗೆ ಸಂಚು ರೂಪಿಸಿದ್ದರು. ಆದರೆ ಶಿವಮೊಗ್ಗ SP ಲಕ್ಷ್ಮೀಪ್ರಸಾದ್‌ ಖಡಕ್ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಿ, ತಂಡವನ್ನು ಸೆರೆ ಹಿಡಿಯಲಾಗಿದೆ.

ಶಿವಮೊಗ್ಗ ಹರ್ಷ ಕೊಲೆಗೆ ಪ್ರತೀಕಾರವಾಗಿ ಕೊಲೆಗೆ ಸಂಚು;  ಮತ್ತೊಂದು ಕೋಮುಗಲಭೆ ಸೃಷ್ಟಿಗೆ ಹೊಂಚು
ಬಜರಂಗದಳ ಕಾರ್ಯಕರ್ತ ಹರ್ಷ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 16, 2022 | 4:58 PM

ಶಿವಮೊಗ್ಗ: ಬಜರಂಗದಳದ ಯುವ ಕಾರ್ಯಕರ್ತ ಹರ್ಷನ ಕೊಲೆಗೆ (Shivamogga Harsha murder) ಪ್ರತೀಕಾರವಾಗಿ ಮತ್ತೊಂದು ಕೊಲೆಗೆ ಸಂಚು ನಡೆದಿತ್ತು. ಮುಸ್ಲಿಂ ಯುವಕನ ಕೊಲೆಗೆ ಸಂಚು ರೂಪಿಸಿದ್ದ ಖತರ್ನಾಕ್‌ ಗ್ಯಾಂಗ್‌ನನ್ನು ಶಿವಮೊಗ್ಗ ಪೊಲೀಸರು (Shivamogga Police) ಬಂಧಿಸಿದ್ದಾರೆ. ಇದರೊಂದಿಗೆ ಮತ್ತೊಂದು ಕೋಮುಗಲಭೆ ಜರುಗುವುದನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ.

ಹರ್ಷನ ಕಗ್ಗೊಲೆ ಸಮಯದಲ್ಲಿ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆದಿತ್ತು. ಆ ವೇಳೆ ಆರೋಪಿ ಜೇಟ್ಲಿ ಎಂಬಾತನನ್ನು ಶಿವಮೊಗ್ಗ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಮುಸ್ಲಿಂ ಯುವಕನ ಹತ್ಯೆ ಸಂಚಿನ ಬಗ್ಗೆ ಆತ ಮಾಹಿತಿ ಬಹಿರಂಗಪಡಿಸಿದ್ದ. ಜೇಟ್ಲಿ ನೀಡಿದ ಮಾಹಿತಿಯ ಮೇರೆಗೆ 13 ಜನರ ವಿರುದ್ಧ FIR ದಾಖಲಿಸಿಕೊಳ್ಳಲಾಗಿದೆ. ರಾಖಿ, ವಿಶ್ವಾಸ್, ವಾಸನೆ, ಬೆಂಗಳೂರು, ಕಟ್ಟೆ, ಕೋಟಿ, ಕುಲ್ಡಾ, ಅಪ್ಪು, ಸಚಿನ್ ಸೇರಿದಂತೆ 13 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. FIR ದಾಖಲಿಸಿಕೊಂಡು ಬಹುತೇಕರನ್ನು ಬಂಧಿಸಲಾಗಿದೆ.

ಇವರೆಲ್ಲಾ ರಾತ್ರೋರಾತ್ರಿ ಮುಸ್ಲಿಂ ಯುವಕನ ಕೊಲೆಗೆ ಸಂಚು ರೂಪಿಸಿದ್ದರು. ಆದರೆ ಶಿವಮೊಗ್ಗ SP ಲಕ್ಷ್ಮೀಪ್ರಸಾದ್‌ ಖಡಕ್ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಿ, ತಂಡವನ್ನು ಸೆರೆ ಹಿಡಿಯಲಾಗಿದೆ.

ಹರ್ಷ ಮತ್ತು ಸಚ್ಚಿನ್ ಒಂದೇ ಬಡಾವಣೆ ನಿವಾಸಿಗಳು, ಬಾಲ್ಯ ಸ್ನೇಹಿತರು: ಬಜರಂಗದಳ ಕಾರ್ಯಕರ್ತರ ಹರ್ಷ ಕೊಲೆ ಪ್ರಕರಣದ ಬಳಿಕ ಹರ್ಷ ಕುಟುಂಬಸ್ಥರಿಂದ ಹರ್ಷ ಚಾರಿಟಬಲ್ ಟ್ರಸ್ಟ್ ಆರಂಭವಾಗಿದ್ದು ಟ್ರಸ್ಟ್ ಅಧ್ಯಕ್ಷರಾಗಿ ಸಹೋದರಿ ಅಶ್ವಿನಿ, ಕಾರ್ಯದರ್ಶಿಯಾಗಿ ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್ ಆಯ್ಕೆಗೊಂಡಿದ್ದಾರೆ. ಏಪ್ರಿಲ್​ 9ರಂದು ಟ್ರಸ್ಟ್​ ಆರಂಭ ಕುರಿತು ಸುದ್ದಿಗೋಷ್ಠಿ ನಡೆಸಿದ್ದರು. ಹರ್ಷ ಮತ್ತು ಸ್ನೇಹಿತ ಸಚ್ಚಿನ್ ಒಂದೇ ಬಡಾವಣೆ ನಿವಾಸಿಗಳು. ಬಾಲ್ಯ ಸ್ನೇಹಿತರು. ಇದೀಗ ಸಚ್ಚಿನ್​ ಮತ್ತು ರೌಡಿ ಶೀಟರ್ ಪ್ರವೀಣ್​​ ಅರೆಸ್ಟ್ ಆಗಿದ್ದಾರೆ. ಬಂಧಿತ ಪ್ರವೀಣ, 3 ವರ್ಷದ ಹಿಂದೆ ನಡೆದಿದ್ದ ರೌಡಿ ಶೀಟರ್ ಬಂಕ್​​ ಬಾಲು ಕೇಸ್​ ಕೊಲೆ ಪ್ರಕರಣದ ಆರೋಪಿ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ: ಹರ್ಷ ಕೊಲೆ ಬಳಿಕ ಷಡ್ಯಂತ್ರ ಮಾಡಿದ್ದಾರೆ. ಕೆಲವರು ಏನೇನೋ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದಾರೆ. ಒಂದು ಟ್ರಸ್ಟ್ ಇದೆ ಅದರಲ್ಲಿ ದೊಡ್ಡದೊಡ್ಡವರು ಇದಾರೆ. ಬೇಕಾದ ವಸ್ತುಗಳನ್ನ ಸಂಗ್ರಹ ಮಾಡಿದ್ದರು. ಆದರೆ ಶಿವಮೊಗ್ಗ ಪೊಲೀಸರು ಬುದ್ಧಿವಂತರಿದ್ದಾರೆ. ಅವರಿಗೆ ಅಭಿನಂದಿಸ್ತಾ ಇದೀನಿ. ಪೊಲೀಸರು ಅವರನ್ನ ಬಂಧಿಸಿಲ್ಲ ಅಂದಿದ್ದರೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡುವ ಹುನ್ನಾರ ಅಡಗಿತ್ತು. ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡುವ ಸಾಧ್ಯತೆ ಇತ್ತು. ಈಶ್ವರಪ್ಪ ಪ್ರಕರಣದಿಂದ ವಿಷಯ ಬೇರೆಡಗೆ ಗಮನ ಸೆಳೆಯುವ ಕೆಲಸ ಮಾಡ್ತಾ ಇದ್ದರು. ದೊಡ್ಡ್ ದೊಡ್ಡವರ ಹೆಸರಿದೆ, ಎಲ್ಲಾ ಆಚೆ ಬರುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಇದೂ ಓದಿ: ಕಾಂಗ್ರೆಸ್​ನವರು ಪವಿತ್ರ ಹಸ್ತದವರು; ಕಾಂಗ್ರೆಸ್ ಹಗರಣವನ್ನ ಜನರ ಮುಂದೆ ಇಡಬೇಕಾಗುತ್ತೆ -ಸಿಎಂ ಬೊಮ್ಮಾಯಿ ಎಚ್ಚರಿಕೆಯ ಸಂದೇಶ

ಇದೂ ಓದಿ: ಟ್ರಿನಿಟಿ ಸರ್ಕಲ್ ಬಳಿಯ ಎಸ್‌ಟಿ ವಿದ್ಯಾರ್ಥಿಗಳ ಹಾಸ್ಟೆಲ್ನಲ್ಲಿ ಅವ್ಯವಸ್ಥೆ; ಕಳಪೆ ಆಹಾರ ಸೇವಿಸಿ ಆರೋಗ್ಯದಲ್ಲಿ ಏರುಪೇರು

Published On - 2:08 pm, Sat, 16 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ