ಟ್ರಿನಿಟಿ ಸರ್ಕಲ್ ಬಳಿಯ ಎಸ್‌ಟಿ ವಿದ್ಯಾರ್ಥಿಗಳ ಹಾಸ್ಟೆಲ್ನಲ್ಲಿ ಅವ್ಯವಸ್ಥೆ; ಕಳಪೆ ಆಹಾರ ಸೇವಿಸಿ ಆರೋಗ್ಯದಲ್ಲಿ ಏರುಪೇರು

ಟ್ರಿನಿಟಿ ಸರ್ಕಲ್ ಬಳಿಯ ಸರ್ಕಾರಿ ಹಾಸ್ಟೆಲ್‌ನಲ್ಲಿ ಎಸ್‌ಟಿ ವಿದ್ಯಾರ್ಥಿಗಳ ಊಟದಲ್ಲಿ ತರಕಾರಿ, ಬೇಳೆ ಜೊತೆ ಹುಳು, ಕಲ್ಲುಗಳು ಪ್ರತ್ಯಕ್ಷವಾಗುತ್ತಿವೆ. ಕಳೆದ 1 ವಾರದಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ.

ಟ್ರಿನಿಟಿ ಸರ್ಕಲ್ ಬಳಿಯ ಎಸ್‌ಟಿ ವಿದ್ಯಾರ್ಥಿಗಳ ಹಾಸ್ಟೆಲ್ನಲ್ಲಿ ಅವ್ಯವಸ್ಥೆ; ಕಳಪೆ ಆಹಾರ ಸೇವಿಸಿ ಆರೋಗ್ಯದಲ್ಲಿ ಏರುಪೇರು
ಟ್ರಿನಿಟಿ ಸರ್ಕಲ್ ಬಳಿಯ ಎಸ್‌ಟಿ ವಿದ್ಯಾರ್ಥಿಗಳ ಹಾಸ್ಟೆಲ್ನಲ್ಲಿ ಅವ್ಯವಸ್ಥೆ; ಕಳಪೆ ಆಹಾರ ಸೇವಿಸಿ ಆರೋಗ್ಯದಲ್ಲಿ ಏರುಪೇರು
Follow us
TV9 Web
| Updated By: ಆಯೇಷಾ ಬಾನು

Updated on: Apr 16, 2022 | 1:08 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿಯ ಎಸ್‌ಟಿ ವಿದ್ಯಾರ್ಥಿಗಳ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ತಿಂಡಿ ಊಟ ತಿನ್ನುವಾಗಲೆಲ್ಲ ವಿದ್ಯಾರ್ಥಿಗಳಿಗೆ ಕಲ್ಲು, ಹುಳುಗಳು ಸಿಗುತ್ತಿದ್ದು ವಿದ್ಯಾರ್ಥಿಗಳ ಕಂಗಾಲಾಗಿದ್ದಾರೆ. ಗುಣ ಮಟ್ಟದ ಆಹಾರ ನೀಡಿ ಎಂದು ಒತ್ತಾಯಿಸಿದ್ದು ವಸತಿ ನಿಲಯದ ವಾರ್ಡನ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಟ್ರಿನಿಟಿ ಸರ್ಕಲ್ ಬಳಿಯ ಸರ್ಕಾರಿ ಹಾಸ್ಟೆಲ್‌ನಲ್ಲಿ ಎಸ್‌ಟಿ ವಿದ್ಯಾರ್ಥಿಗಳ ಊಟದಲ್ಲಿ ತರಕಾರಿ, ಬೇಳೆ ಜೊತೆ ಹುಳು, ಕಲ್ಲುಗಳು ಪ್ರತ್ಯಕ್ಷವಾಗುತ್ತಿವೆ. ಕಳೆದ 1 ವಾರದಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಆದ್ರೂ ಹಾಸ್ಟೆಲ್‌ ವಾರ್ಡನ್‌ ಕಳಪೆ ಆಹಾರ ಪೂರೈಸುತ್ತಿದ್ದಾರೆ ಎಂದು ವಸತಿ ನಿಲಯದ ವಾರ್ಡನ್‌ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕಲಾ ಕಾಲೇಜಿನ ಪರಿಶಿಷ್ಟ ಜಾತಿ ಬಾಲಕರ ಹಾಸ್ಟಲ್ನಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಈ ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಕ್ವಾಲಿಟಿ ಇಲ್ಲದ ಪದಾರ್ಥಗಳಿಂದ ವಿದ್ಯಾರ್ಥಿಗಳಿಗೆ ಉಪಹಾರ ತಯಾರಿಸಲಾಗುತ್ತಿದೆ. ದೂಳು ಹಿಡಿದು, ಮುಗ್ಗಿ ಹೋಗಿರುವ ಅಕ್ಕಿಂದಲೇ ಅನ್ನ ತಯಾರಿಸಲಾಗುತ್ತಿದೆ. ಅಡುಗೆ ತಯಾರಿಸುವ ಮೆಸ್ ದುರ್ವಾಸನೆಯಲ್ಲೇ ವಿದ್ಯಾರ್ಥಿಗಳು ಊಟ ಸೇವಿಸುವ ಪರಿಸ್ಥಿತಿ ಇದೆ. ಬೇಕಾಬಿಟ್ಟಿಯಾಗಿ ಅಡುಗೆ ತಯಾರು ಮಾಡಲಾಗುತ್ತಿದೆ. ಒಬ್ಬೊಬ್ಬರಾಗಿಯೇ ವಿದ್ಯಾರ್ಥಿಗಳು ಅಸ್ವಸ್ಥರಾಗ್ತಿದ್ದಾರೆ. ವಾಂತಿ- ಭೇದಿ ಕಾಯಿಲೆ ವಕ್ಕರಿಸುವ ಭೀತಿಯಲ್ಲಿ ವಿದ್ಯಾರ್ಥಿಗಳಿದ್ದು ಪರೀಕ್ಷೆ ಸಮಯದಲ್ಲಿ ಆರೋಗ್ಯ ಹಾಳಾದ್ರೆ ಗತಿ ಏನು ಎಂಬಂತಾಗಿದೆ. ಹೀಗಾಗಿ ಈ ಬಗ್ಗೆ ಪರಿಹಾರಕ್ಕಾಗಿ ವಿದ್ಯಾರ್ಥಿಗಳು ಅಂಗಲಾಚಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ನಷ್ಟ ಮಾಡಲು ರಾಹುಲ್ ಗಾಂಧಿ ಅಜ್ಜಿಯಿಂದಲೇ ಆಗಿಲ್ಲ, ಇನ್ನು ಮೊಮ್ಮಗನಿಂದ ಏನಾಗುತ್ತೆ: ಈಶ್ವರಪ್ಪ ವ್ಯಂಗ್ಯ

ದಿ ಕಾಶ್ಮೀರ್ ಫೈಲ್ಸ್ ವೀಕ್ಷಿಸಿದ ನಂತರ ಮುಸ್ಲಿಂ ಯುವಕನ ಮೇಲೆ ಕತ್ತಿಯಿಂದ ಹಲ್ಲೆ; ಪೊಲೀಸರು ಬಿಚ್ಚಿಟ್ಟರು ಘಟನೆಯ ಬೆಚ್ಚಿಬೀಳಿಸುವ ಸತ್ಯಾಂಶ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ