ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 41,664 ಜನರಿಗೆ ಕೊವಿಡ್ ಸೋಂಕು ಪತ್ತೆಯಾಗಿದೆ. 349 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 13,402 ಜನರಿಗೆ ಸೋಂಕು ಪತ್ತೆಯಾಗಿದ್ದು, 94 ಜನರು ನಿಧನರಾಗಿದ್ದಾರೆ. ಇವೆಲ್ಲವುಗಳ ಜತೆ ಕಳೆದ 24 ಗಂಟೆಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 34,422 ಜನರು ಕೊವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.
ಇಂದು ಪತ್ತೆಯಾದ ಕೊವಿಡ್ ಸೋಂಕಿತರನ್ನೂ ಸೇರಿಸಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21,71,931ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 15,44,982 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 21,434 ಜನರ ಸಾವನ್ನಪ್ಪಿದ್ದು, 6,05,494 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ
ಬಾಗಲಕೋಟೆ 584, ಬಳ್ಳಾರಿ 1,622, ಬೆಳಗಾವಿ 1,502, ಬೆಂಗಳೂರು ಗ್ರಾಮಾಂತರ 1,265, ಬೀದರ್ 185, ಬೆಂಗಳೂರು ನಗರ 13,402, ಚಾಮರಾಜನಗರ 535,
ಚಿಕ್ಕಬಳ್ಳಾಪುರ 595, ಚಿಕ್ಕಮಗಳೂರು 1093, ಚಿತ್ರದುರ್ಗ 454, ದಕ್ಷಿಣ ಕನ್ನಡ 1,787, ದಾವಣಗೆರೆ 292, ಧಾರವಾಡ 901, ಗದಗ 459, ಹಾಸನ 2443, ಹಾವೇರಿ 267, ಕಲಬುರಗಿ 832, ಕೊಡಗು 483, ಕೋಲಾರ 778, ಕೊಪ್ಪಳ 630, ಮಂಡ್ಯ 1,188, ಮೈಸೂರು 2,489, ರಾಯಚೂರು 467, ರಾಮನಗರ 524, ಶಿವಮೊಗ್ಗ 1081, ತುಮಕೂರು 2,302, ಉಡುಪಿ 1,146, ಉತ್ತರ ಕನ್ನಡ 1,226, ವಿಜಯಪುರ 789, ಯಾದಗಿರಿ ಜಿಲ್ಲೆಯಲ್ಲಿಂದು 343 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.
ಜಿಲ್ಲಾವಾರು ಮೃತರ ವಿವರ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 349 ಜನರ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ 94 ಜನರು ನಿಧನರಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ 28, ಕಲಬುರಗಿ ಜಿಲ್ಲೆ 21, ತುಮಕೂರು ಜಿಲ್ಲೆ 18, ಮೈಸೂರು, ಶಿವಮೊಗ್ಗ ಜಿಲ್ಲೆ 15, ಬಾಗಲಕೋಟೆ ಜಿಲ್ಲೆ 14, ಹಾಸನ ಜಿಲ್ಲೆ 11, ಮಂಡ್ಯ, ಕೊಪ್ಪಳ, ಬೆಂಗಳೂರು ಗ್ರಾಮಾಂತರ ಜಿಲ್ಲೆ 10, ವಿಜಯಪುರ 9, ಚಾಮರಾಜನಗರ, ಧಾರವಾಡ, ಯಾದಗಿರಿ ಜಿಲ್ಲೆ 8, ಉಡುಪಿ, ಬೆಳಗಾವಿ ಜಿಲ್ಲೆ 7, ಹಾವೇರಿ, ರಾಮನಗರ ಜಿಲ್ಲೆ 6, ಉತ್ತರ ಕನ್ನಡ, ಗದಗ, ಕೊಡಗು, ರಾಯಚೂರು ಜಿಲ್ಲೆ ನಾಲ್ವರು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಮೂವರು, ದಾವಣಗೆರೆ ಜಿಲ್ಲೆಯಲ್ಲಿ ಇಂದು ಕೊರೊನಾಗೆ ಇಬ್ಬರು ನಿಧನರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 21,434 ಜನರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮ್ತತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಕೊವಿಡ್ ಭೀತಿ; ಜೈಲಿನಲ್ಲಿರುವ ಎಲ್ಲಾ ರಾಜಕೀಯ ಹಿನ್ನೆಲೆಯ ವ್ಯಕ್ತಿಗಳಿಗೆ ಮಧ್ಯಂತರ ಜಾಮೀನು ನೀಡಲು ಒತ್ತಾಯ
ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಷ್ಟರಲ್ಲಿ ಕಣ್ಬಿಟ್ಟು, ದೊಡ್ಡದಾಗಿ ಅಳಲು ಶುರು ಮಾಡಿದ ಕೊರೊನಾ ಸೋಂಕಿತ ಮಹಿಳೆ..
(Karnataka Covid 19 Update 41664 new cases and 349 death today)
Published On - 7:48 pm, Sat, 15 May 21