ಕೊವಿಡ್ ಭೀತಿ; ಜೈಲಿನಲ್ಲಿರುವ ಎಲ್ಲಾ ರಾಜಕೀಯ ಹಿನ್ನೆಲೆಯ ವ್ಯಕ್ತಿಗಳಿಗೆ ಮಧ್ಯಂತರ ಜಾಮೀನು ನೀಡಲು ಒತ್ತಾಯ
ಹಿಂದಿನ ವರ್ಷ ಕೊವಿಡ್ ಉಲ್ಬಣಗೊಂಡಾಗ 45 ಸಾವಿರ ಖೈದಿಗಳನ್ನು ದೇಶದಾದ್ಯಂತ ಪೆರೋಲ್ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಜೈಲುಗಳಲ್ಲಿ ಸಾಮಾಜಿಕ ಅಂತರ ಮತ್ತು ಇನ್ನಿತರ ಕೊವಿಡ್ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗದು ಎಂಬ ಕಾರಣಕ್ಕೆ ಈ ಕ್ರಮ ಅನುಸರಿಸಲಾಗಿತ್ತು.
ದೇಶದಲ್ಲಿ ಕೊವಿಡ್ ಸೋಂಕು ತೀವ್ರವಾಗಿ ಹೆಚ್ಚಳವಾಗಿರುವ ಕಾರಣ ಜೈಲುವಾಸ ಅನುಭವಿಸುತ್ತಿರುವ ಎಲ್ಲಾ ರಾಜಕೀಯ ಹಿನ್ನೆಲೆಯ ವ್ಯಕ್ತಿಗಳನ್ನು ಮಧ್ಯಂತರ ಜಾಮೀನು ನೀಡು ಬಿಡುಗಡೆಗೊಳಿಸುವಂತೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟೀಸ್ ಆಗ್ರಹಿಸಿದೆ. ಕೊವಿಡ್ ಹೆಚ್ಚಲದ ಕುರಿತು ಸುಪ್ರೀಂಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ದೂರಿನ ವಿಚಾರಣೆಯ ವೇಳೆ ಉಲ್ಲೇಖಿಸಿದ ಅಂಶವನ್ನು ಆಧರಿಸಿ ಜೈಲುವಾಸ ಅನುಭವಿಸುತ್ತಿರುವ ಪ್ರಮುಖ ವ್ಯಕ್ತಿಗಳನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಈಗಾಗಲೇ ಹಲವು ಜೈಲುವಾಸಿಗಳು ಕೊವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಕಾರಾಗೃಹಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಆರೋಪಿಸಿರುವ ಸಂಘಟನೆ, ಹಿಂದಿನ ವರ್ಷ ಕೊವಿಡ್ ಉಲ್ಬಣಗೊಂಡಾಗ 45 ಸಾವಿರ ಖೈದಿಗಳನ್ನು ದೇಶದಾದ್ಯಂತ ಪೆರೋಲ್ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಜೈಲುಗಳಲ್ಲಿ ಸಾಮಾಜಿಕ ಅಂತರ ಮತ್ತು ಇನ್ನಿತರ ಕೊವಿಡ್ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗದು ಎಂಬ ಕಾರಣಕ್ಕೆ ಈ ಕ್ರಮ ಅನುಸರಿಸಲಾಗಿತ್ತು. ಈ ವರ್ಷ ಕೊವಿಡ್ ಇನ್ನಷ್ಟು ಉಲ್ಬಣಗೊಂಡಿದ್ದು ತಕ್ಷಣವೆ ಜೈಲುವಾಸ ಅನುಭವಿಸುತ್ತಿರುವ ಪ್ರಮುಖ ವ್ಯಕ್ತಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಸಂಘಟನೆ ಆಗ್ರಹಿಸಿದೆ.
ದೇಶದಲ್ಲಿ ಕಳೆದ 12 ದಿನಗಳಿಂದ ಸಕ್ರಿಯ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ದೇಶದಲ್ಲಿ ಕಳೆದ 12 ದಿನಗಳಿಂದ ಸಕ್ರಿಯ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಕೊವಿಡ್ನಿಂದ ನಿಧನರಾಗುವವರ ಸಂಖ್ಯೆಯೂ ಸ್ಥಿರವಾಗಿದೆ. ಇದು ಸದ್ಯ ಸಮಾಧಾನಕರ ವಿಷಯ. ಇತರ ಯಾವ ದೇಶದಲ್ಲೂ ನಡೆಸದಷ್ಟು ಕೊವಿಡ್ ಟೆಸ್ಟ್ಗಳನ್ನು ಭಾರತದಲ್ಲಿ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದರು.
ದೇಶದಲ್ಲಿ ಕೊವಿಡ್ ನಿಯಂತ್ರಣದ ವೈದ್ಯಕೀಯ ಸೇವೆ ಗ್ರಾಮ ಗ್ರಾಮಗಳನ್ನೂ ತಲುಪಿದೆ. ಅತ್ಯಂತ ಸಮರ್ಪಕವಾಗಿ ಅಂತರಾಷ್ಟ್ರೀಯ ಗೈಡ್ಲೈನ್ಸ್ಗಳ ಅನುಸಾರ ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಕೊವಿಡ್ ಲಸಿಕೆಯನ್ನು ಉತ್ಪಾದನೆ ಹೆಚ್ಚಿಸಲು ಸದ್ಯ 11 ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಕೇಸ್‌ಗಳಿವೆ. ಕರ್ನಾಟಕ, ಕೇರಳ, ರಾಜಸ್ಥಾನದಲ್ಲಿ ಕೊವಿಡ್ ಸೋಂಕು ಹೆಚ್ಚಾಗುತ್ತಿವೆ. ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ಕೊವಿಡ್ ಸೊಂಕು ಕಡಿಮೆಯಾಗುತ್ತಿದೆ. 24 ರಾಜ್ಯಗಳಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 15ರಷ್ಟಿದೆ. 10 ರಾಜ್ಯಗಳಲ್ಲಿ ಪಾಸಿಟಿವಿಟಿ ರೇಟ್ ಶೇ.5ರಿಂದ 15ರಷ್ಟಿದೆ. ಪುದುಚೆರಿಯಲ್ಲಿ ಅತಿ ಹೆಚ್ಚು, ಅಂದರೆ ಶೇಕಡಾ 43.3ರಷ್ಟು ಪಾಸಿಟಿವಿಟಿ ರೇಟ್ ಇದೆ. ಕರ್ನಾಟಕ ಪಾಸಿಟಿವಿಟಿ ರೇಟ್‌ನಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ: ಇಪ್ಪತ್ತು ವರ್ಷಗಳ ಕಾಲ ಬೀಗ ಹಾಕಿದ್ದ ಕೋಲಾರದ ಆಸ್ಪತ್ರೆ ಪುನರಾರಂಭಕ್ಕೆ ಸಮ್ಮತಿ; ಕೊವಿಡ್ ಸೆಂಟರ್ ಆಗಿ ಪರಿವರ್ತನೆ
(Fear of having Covid 19 Insist on interim bail for persons of all political backgrounds)