ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,245ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 204 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ ಯಾದಗಿರಿಯಲ್ಲಿ ಅತಿ ಹೆಚ್ಚು ಅಂದ್ರೆ 66 ಕೇಸ್ ಪತ್ತೆಯಾಗಿದೆ.
ಯಾದಗಿರಿಯಲ್ಲಿ 66, ಬೆಂಗಳೂರಲ್ಲಿ 17, ಕಲಬುರಗಿಯಲ್ಲಿ 16, ರಾಯಚೂರಿನಲ್ಲಿ 14, ಬೀದರ್ನಲ್ಲಿ 14, ಶಿವಮೊಗ್ಗದಲ್ಲಿ 10, ದಾವಣಗೆರೆಯಲ್ಲಿ 9 ಕೇಸ್ ಪತ್ತೆಯಾಗಿದ್ರೆ ಕೋಲಾರದಲ್ಲಿ 6, ಮೈಸೂರು ಮತ್ತು ರಾಮನಗರದಲ್ಲಿ ತಲಾ 5 ಪ್ರಕರಣ, ವಿಜಯಪುರದಲ್ಲಿ 4, ಬಾಗಲಕೋಟೆ ಹಾಗೂ ಉತ್ತರ ಕನ್ನಡದಲ್ಲಿ ತಲಾ 3 ಕೇಸ್ ಪತ್ತೆಯಾಗಿದೆ. ಜೊತೆಗೆ ದಕ್ಷಿಣ ಕನ್ನಡ, ಹಾಸನ, ಧಾರವಾಡ ತಲಾ 2 ಪ್ರಕರಣಗಳು ಪತ್ತೆಯಾಗಿದೆ. ಇದರೊಟ್ಟಿಗೆ ಬೆಂಗಳೂರು ಗ್ರಾಮಾಂತರ, ಕೊಪ್ಪಳ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 1 ಕೇಸ್ ವರದಿಯಾಗಿದೆ.
ಸೋಂಕಿನಿಂದ ಇವತ್ತು ಮೂವರು ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲೇ ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ. ರಾಜ್ಯದಲ್ಲಿ ಇದುವರೆಗೆ ಕೊರೊನಾ ಮಹಾಮಾರಿ 72 ಜನರ ಬಲಿಪಡೆದಿದೆ. ಜೊತೆಗೆ ಒಟ್ಟು 6,245 ಸೋಂಕಿತರ ಪೈಕಿ 2,976 ಜನರು ಗುಣಮುಖರಾಗಿದ್ದು ಡಿಸ್ಚಾರ್ಜ್ ಕೂಡ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Published On - 5:57 pm, Thu, 11 June 20