ಕೋಲಾರದಲ್ಲಿ ‘ದಾಖಲೆ’ಯ ಕಳ್ಳತನ..!?

ಕೋಲಾರ: ಸಾಮಾನ್ಯವಾಗಿ ಕಳ್ಳರು ಬ್ಯಾಂಕ್‌ಗೆ ಅಥವಾ ಚಿನ್ನದ ಅಂಗಡಿಗೆ ಕನ್ನ ಹಾಕ್ತಾರೆ. ಇದರ ಜೊತೆಗೆ ಮನೆಗಳ್ಳತನಕ್ಕೆ ಅಥವಾ ವಾಹನಗಳನ್ನು ಕದಿಯಲು ಮುಂದಾಗ್ತಾರೆ. ಆದರೆ ಇಲ್ಲೊಂದು ಕಳ್ಳತನ ನಡೆದಿರುವುದು ಹಣಕ್ಕಾಗಿ ಅಲ್ಲ ಅಥವಾ ಬಂಗಾರಕ್ಕಾಗಿ ಅಲ್ಲ ಬದಲಿಗೆ ದಾಖಲೆಗಳಿಗೆ; ಅದರಲ್ಲೂ ಭೂ ದಾಖಲೆಗಳಿಗೆ ಎಂದು ಜನರು ಆರೋಪಿಸುತ್ತಿದ್ದಾರೆ. ಕಚೇರಿಯಲ್ಲಿದ್ದ 35 ಸಾವಿರ ರೂಪಾಯಿಯನ್ನು ಮುಟ್ಟಲಿಲ್ಲ ಕಳ್ಳರು! ಹೌದು, ಕೋಲಾರ ನಗರದ ಹೃದಯ ಭಾಗದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ಕಚೇರಿಯ ಬಾಗಿಲು ಮುರಿದು ಹಲವು […]

ಕೋಲಾರದಲ್ಲಿ ‘ದಾಖಲೆ’ಯ ಕಳ್ಳತನ..!?
Follow us
ಸಾಧು ಶ್ರೀನಾಥ್​
|

Updated on:Jun 11, 2020 | 8:07 PM

ಕೋಲಾರ: ಸಾಮಾನ್ಯವಾಗಿ ಕಳ್ಳರು ಬ್ಯಾಂಕ್‌ಗೆ ಅಥವಾ ಚಿನ್ನದ ಅಂಗಡಿಗೆ ಕನ್ನ ಹಾಕ್ತಾರೆ. ಇದರ ಜೊತೆಗೆ ಮನೆಗಳ್ಳತನಕ್ಕೆ ಅಥವಾ ವಾಹನಗಳನ್ನು ಕದಿಯಲು ಮುಂದಾಗ್ತಾರೆ. ಆದರೆ ಇಲ್ಲೊಂದು ಕಳ್ಳತನ ನಡೆದಿರುವುದು ಹಣಕ್ಕಾಗಿ ಅಲ್ಲ ಅಥವಾ ಬಂಗಾರಕ್ಕಾಗಿ ಅಲ್ಲ ಬದಲಿಗೆ ದಾಖಲೆಗಳಿಗೆ; ಅದರಲ್ಲೂ ಭೂ ದಾಖಲೆಗಳಿಗೆ ಎಂದು ಜನರು ಆರೋಪಿಸುತ್ತಿದ್ದಾರೆ.

ಕಚೇರಿಯಲ್ಲಿದ್ದ 35 ಸಾವಿರ ರೂಪಾಯಿಯನ್ನು ಮುಟ್ಟಲಿಲ್ಲ ಕಳ್ಳರು! ಹೌದು, ಕೋಲಾರ ನಗರದ ಹೃದಯ ಭಾಗದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ಕಚೇರಿಯ ಬಾಗಿಲು ಮುರಿದು ಹಲವು ಮಹತ್ವದ ಭೂ ದಾಖಲೆಗಳನ್ನು ಕಳ್ಳತನ ಮಾಡಿದ್ದಾರೆ ಎಂಬ ಶಂಖೆ ವ್ಯಕ್ತವಾಗಿದೆ. ಅಚ್ಚರಿಯ ಸಂಗತಿಯೆಂದರೆ ಕಚೇರಿಯಲ್ಲಿ ಇದ್ದ ಸುಮಾರು 35 ಸಾವಿರ ರೂಪಾಯಿ ನಗದನ್ನು ಕಳ್ಳರ ಮುಟ್ಟೇಯಿಲ್ಲ. ಬದಲಿಗೆ ಕೇವಲ ಭೂ ದಾಖಲೆ ಕಡತಗಳಿರುವ ರೂಮ್​ನಲ್ಲಿ ಓಡಾಟ ನಡೆಸಿರುವುದಾಗಿ ಹಾಗೂ ಕಡತಗಳಿದ್ದ ಕಪಾಟುಗಳನ್ನು ತೆರೆದು ನೋಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಇವರು ಸಾಮಾನ್ಯ ಕಳ್ಳರೋ ಅಥವಾ ಭೂಗಳ್ಳರೋ? ಇನ್ನು ಕಳ್ಳರ ಈ ನಡೆ ಸಾಕಷ್ಟು ಅನುಮಾನಗಳನ್ನ ಹುಟ್ಟುಹಾಕಿದೆ. ಪ್ರಕರಣದ ಹಿಂದೆ ರಿಯಲ್ ಎಸ್ಟೇಟ್ ಕುಳಗಳ ಅಥವಾ ಭೂಗಳ್ಳರ ಕೈವಾಡ ಇರಬಹುದೆಂಬ ಗುಮಾನಿ ಕೂಡ ವ್ಯಕ್ತವಾಗಿದೆ. ಜೊತೆಗೆ ಇದರಲ್ಲಿ ಕಚೇರಿಯ ಕೆಲ ಸಿಬ್ಬಂದಿಗಳ ಪರೋಕ್ಷ ಕೈವಾಡವಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವು ಮಹತ್ತರ ದಾಖಲೆಗಳನ್ನು ತಿರುಚುವ ಅಥವಾ ತಿದ್ದುಪಡಿ ಮಾಡುವ ಪ್ರಯತ್ನ ನಡೆದಿರಬಹುದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಅಥವಾ ದಾಖಲೆಗಳನ್ನೇ ಕದ್ದಿರಬಹುದೆಂಬ ಸಂಶಯ ವ್ಯಕ್ತವಾಗಿದೆ.

ಕಚೇರಿಯಲ್ಲಿ ಇಲ್ಲ ಸಿಸಿಟಿವಿ ಕ್ಯಾಮರಾ ಇನ್ನು ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಜಾಹ್ನವಿ ಭೇಟಿ ನೀಡಿದ್ದು ಮಾಹಿತಿ ಕಲೆಹಾಕಿದ್ದಾರೆ. ಜೊತೆಗೆ ಶ್ವಾನದಳ, ಬೆರಳಚ್ಚು ತಜ್ಞರು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಚೇರಿಯಲ್ಲಿ ಸಿಸಿಟಿವಿ ಇಲ್ಲದ ಕಾರಣ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಮತ್ತಷ್ಟು ಕಠಿಣವಾಗಿದೆ. ಆದರೆ ಸದ್ಯಕ್ಕೆ ಕೋಲಾರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಈ ಪ್ರಕರಣದಿಂದ ಕೋಲಾರದ ಭೂ ಮಾಲೀಕರಿಗೆ ಮತ್ತು ನಿವೇಶನದಾರರಿಗೆ ನಿದ್ದೆಗೆಡುವಂತಾಗಿದೆ. ತಮ್ಮ ದಾಖಲೆಗಳು ಸುರಕ್ಷಿತವಾಗಿ ಇದೆಯಾ ಅಥವಾ ಯಾರಾದರು ಅವುಗಳನ್ನು ಮಾರ್ಪಾಡು ಮಾಡಿದ್ದಾರಾ ಎಂಬ ಆತಂಕದಲ್ಲಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದ ಕಳ್ಳತನಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು ಪೊಲೀಸರು ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Published On - 7:38 pm, Thu, 11 June 20

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ