Karnataka Covid Update: ಕರ್ನಾಟಕದಲ್ಲಿ ಇಂದು 2,082 ಜನರಿಗೆ ಕೊವಿಡ್ ದೃಢ, 86 ಜನರು ನಿಧನ

| Updated By: guruganesh bhat

Updated on: Jul 03, 2021 | 9:52 PM

ಇಂದು ಒಂದೇ ದಿನ ರಾಜ್ಯದಲ್ಲಿ 7,751 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದಿನ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿಸಿ ರಾಜ್ಯದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 28,52,079ಕ್ಕೆ ಏರಿಕೆಯಾಗಿದೆ.

Karnataka Covid Update: ಕರ್ನಾಟಕದಲ್ಲಿ ಇಂದು 2,082 ಜನರಿಗೆ ಕೊವಿಡ್ ದೃಢ, 86 ಜನರು ನಿಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ 2,082 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 86 ಜನರು ನಿಧನರಾಗಿದ್ದಾರೆ. ಬೆಂಗಳೂರಲ್ಲಿ ಇಂದು ಒಂದೇ ದಿನ 481 ಜನರಿಗೆ ಸೋಂಕು ಖಚಿತಪಟ್ಟಿದ್ದು, 10 ಜನರು ನಿಧನಾಗಿದ್ದಾರೆ. ಇಂದು ಒಂದೇ ದಿನ ರಾಜ್ಯದಲ್ಲಿ 7,751 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದಿನ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿಸಿ ರಾಜ್ಯದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 28,52,079ಕ್ಕೆ ಏರಿಕೆಯಾಗಿದೆ. ಈವರೆಗೆ ರಾಜ್ಯದಲ್ಲಿ ಸೋಂಕಿತರ ಪೈಕಿ 27,68,632 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 48,116 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಬಾಗಲಕೋಟೆ 5, ಬಳ್ಳಾರಿ 20, ಬೆಳಗಾವಿ 91, ಬೆಂಗಳೂರು ಗ್ರಾಮಾಂತರ 55, ಬೆಂಗಳೂರು ನಗರ 481, ಬೀದರ್ 7, ಚಾಮರಾಜನಗರ 36, ಚಿಕ್ಕಬಳ್ಳಾಪುರ 21, ಚಿಕ್ಕಮಗಳೂರು 79, ಚಿತ್ರದುರ್ಗ 18, ದಕ್ಷಿಣ ಕನ್ನಡ 214, ದಾವಣಗೆರೆ 48, ಧಾರವಾಡ 43, ಗದಗ 5, ಹಾಸನ 202, ಹಾವೇರಿ 10, ಕಲಬುರಗಿ 20, ಕೊಡಗು 25, ಕೋಲಾರ 47, ಕೊಪ್ಪಳ 9, ಮಂಡ್ಯ 72, ಮೈಸೂರು 227, ರಾಯಚೂರು 3, ರಾಮನಗರ 6, ಶಿವಮೊಗ್ಗ 108, ತುಮಕೂರು 89, ಉಡುಪಿ 102, ಉತ್ತರ ಕನ್ನಡ 28, ವಿಜಯಪುರ 5 , ಯಾದಗಿರಿ ಜಿಲ್ಲೆಯಲ್ಲಿ ಇಂದು 6 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 86 ಜನರ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ 13, ಬೆಂಗಳೂರು 10, ಬಳ್ಳಾರಿ ಜಿಲ್ಲೆ 9, ಬೆಳಗಾವಿ, ಮೈಸೂರು ಜಿಲ್ಲೆ 7, ಮಂಡ್ಯ, ಧಾರವಾಡ ಜಿಲ್ಲೆ 6, ಹಾಸನ ಜಿಲ್ಲೆ 4, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಶಿವಮೊಗ್ಗ ಜಿಲ್ಲೆ 3, ಉತ್ತರ ಕನ್ನಡ, ರಾಮನಗರ ಜಿಲ್ಲೆ 2, ಚಾಮರಾಜನಗರ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಗದಗ, ಕೋಲಾರ, ಕೊಪ್ಪಳ, ತುಮಕೂರು, ಉಡುಪಿ, ವಿಜಯಪುರ ಜಿಲ್ಲೆಗಳಲ್ಲಿ ತಲಾ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ:

 Karnataka Unlock 3.0 Guidelines: ಮಾಸ್ಕ್​ ಧರಿಸದಿದ್ದರೆ ನಗರಗಳಲ್ಲಿ 250 ರೂ, ಗ್ರಾಮೀಣ ಭಾಗಗಳಲ್ಲಿ 100 ರೂ.ದಂಡ

Explained: ಕೊವಿಡ್ ಆ್ಯಂಟಿಬಾಡಿ ಟೆಸ್ಟ್ ಎಂದರೇನು? ಆ್ಯಂಟಿಬಾಡಿ ಫಲಿತಾಂಶ ಪಾಸಿಟಿವ್, ನೆಗೆಟಿವ್ ಎಂದರೇನು? ಇಲ್ಲಿದೆ ವಿವರ

(Karnataka Covid Update 2082 people died in Karnataka today 86 died)