ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ 2,576 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 93 ಜನರು ನಿಧನರಾಗಿದ್ದಾರೆ. ಇಂದಿನ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,37,206ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ 97,592 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಒಂದೇ ದಿನ 5,933 ಜನರು ಕೊವಿಡ್ ಸೋಂಕಿನಿಂದ ಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಸೋಂಕಿತರ ಸಂಖ್ಯೆ 3 ಸಾವಿರಕ್ಕಿಂತ ಕಡಿಮೆಯಾಗಿರುವುದು ಮತ್ತು ಮೃತರ ಸಂಖ್ಯೆ 100ಕ್ಕಿಂತ ಕಡಿಮೆಯಾಗಿರುವುದು ಕೊವಿಡ್ ಸೋಂಕು ಕಡಿಮೆಯಾಗುತ್ತಿರುವ ಬಗ್ಗೆ ಗಮನಾರ್ಹ ಬೆಳವಣಿಗೆಯಾಗಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 563 ಜನರಿಗೆ ಸೋಂಕು ದೃಢಪಟ್ಟಿದ್ದು, 18 ಜನರು ನಿಧನರಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,11,993 ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 15,599 ಜನರು ಸಾವನ್ನಪ್ಪಿದ್ದು, ಸದ್ಯ 62,430 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಬೆಂಗಳೂರು ನಗರ ಜಿಲ್ಲೆ 563, ಮೈಸೂರು ಜಿಲ್ಲೆ 282, ದಕ್ಷಿಣ ಕನ್ನಡ 263, ಶಿವಮೊಗ್ಗ 194, ಕೊಡಗು 150, ಹಾಸನ 138, ತುಮಕೂರು 99, ಮಂಡ್ಯ ಜಿಲ್ಲೆ 95, ಚಿಕ್ಕಮಗಳೂರು 83, ದಾವಣಗೆರೆ 81, ಕೋಲಾರ 79, ಉಡುಪಿ 71, ಬೆಳಗಾವಿ 68, ಬೆಂಗಳೂರು ಗ್ರಾಮಾಂತರ 55, ಚಾಮರಾಜನಗರ 55, ಕೊಪ್ಪಳ 55, ಉತ್ತರ ಕನ್ನಡ 52 , ಚಿತ್ರದುರ್ಗ 45, ಧಾರವಾಡ 28, ಚಿಕ್ಕಬಳ್ಳಾಪುರ 27, ಬಳ್ಳಾರಿ 19, ಗದಗ 17, ರಾಮನಗರ 14, ಹಾವೇರಿ 13, ರಾಯಚೂರು 9, ಬಾಗಲಕೋಟೆ 8, ಕಲಬುರಗಿ 4 , ಯಾದಗಿರಿ 4, ಬೀದರ್ 3, ವಿಜಯಪುರ ಜಿಲ್ಲೆ 2ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು 18, ದಕ್ಷಿಣ ಕನ್ನಡ ಜಿಲ್ಲೆ 14, ಬಳ್ಳಾರಿ ಜಿಲ್ಲೆ 9, ಮೈಸೂರು ಜಿಲ್ಲೆ 8, ಧಾರವಾಡ, ಹಾಸನ ಜಿಲ್ಲೆ 5, ಬೆಳಗಾವಿ, ದಾವಣಗೆರೆ ಜಿಲ್ಲೆ 4, ಹಾವೇರಿ, ಮಂಡ್ಯ, ಶಿವಮೊಗ್ಗ ಜಿಲ್ಲೆ 3, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಗದಗ, ತುಮಕೂರು, ಉಡುಪಿ ಜಿಲ್ಲೆ 2, ಬೀದರ್, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ರಾಯಚೂರು, ರಾಮನಗರ, ಉತ್ತರ ಕನ್ನಡ ಜಿಲ್ಲೆ ತಲಾ 1 ಸಾವು ಸಂಭವಿಸಿದೆ.
ಇದನ್ನೂ ಓದಿ:
Big Update: ರಾಜ್ಯದಲ್ಲಿ ಕೊವಿಡ್ 3ನೇ ಅಲೆ ಎದುರಿಸಲು ಹೊಸ ಸಮಿತಿ ರಚನೆಗೆ ತೀರ್ಮಾನ
ಕೊವಿಡ್ ವ್ಯಾಕ್ಸಿನೇಶನ್ ಜಾಗೃತಿ ಮೂಡಿಸಲು ಹೊಸ ಪ್ರಯತ್ನ; ಕಲೆಗಾರನ ಕರಾಮತ್ತಿಗೆ ಪ್ರಶಂಸೆ
Karnataka Covid Update 2576 new cases and 93 deaths today
Published On - 8:21 pm, Mon, 28 June 21