Karnataka Covid Update: ಕರ್ನಾಟಕದಲ್ಲಿ ಇಂದು 31,183 ಜನರಿಗೆ ಕೊವಿಡ್ ದೃಢ, 451 ಜನರು ನಿಧನ
Bengaluru Covid Update: ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 8214 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು 200 ಜನರು ನಿಧನರಾಗಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು ಒಂದೇ ದಿನ 31,183 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 451 ಜನರು ಕೊವಿಡ್ನಿಂದ ಇಂದು ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 8214 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು 200 ಜನರು ನಿಧನರಾಗಿದ್ದಾರೆ. ಇಂದು ಪತ್ತೆಯಾದ ಸೋಂಕಿತರ ಮೂಲಕ ರಾಜ್ಯದಲ್ಲಿ ಈವರೆಗಿನ ಕೊರೊನಾ ಸೋಂಕಿತರ ಸಂಖ್ಯೆ 23,98,925 ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 18,91,042 ಜನರು ಕೊವಿಡ್ ಸೋಂಕುಮುಕ್ತರಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 24,658 ಜನರು ಸಾವನ್ನಪ್ಪಿದ್ದು ಸದ್ಯ 4,83,204 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಅತ್ಯಂತ ಪ್ರಮುಖವಾಗಿ ಇಂದು ಒಂದೇ ದಿನ 61,766 ಜನರು ಕೊವಿಡ್ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲಾವಾರು ಸೋಂಕಿತರ ಮಾಹಿತಿ ಬಾಗಲಕೋಟೆ 285, ಬಳ್ಳಾರಿ 2,157, ಬೆಳಗಾವಿ 1,026, ಬೆಂಗಳೂರು ಗ್ರಾಮಾಂತರ 716, ಬೆಂಗಳೂರು ನಗರ 8,214, ಬೀದರ್ 58, ಚಾಮರಾಜನಗರ 412, ಚಿಕ್ಕಬಳ್ಳಾಪುರ 720, ಚಿಕ್ಕಮಗಳೂರು 652, ಚಿತ್ರದುರ್ಗ 722, ದಕ್ಷಿಣ ಕನ್ನಡ 913, ದಾವಣಗೆರೆ 478, ಧಾರವಾಡ 973, ಗದಗ 443 ಪ್ರಕರಣ, ಹಾಸನ 1,641, ಹಾವೇರಿ 342, ಕಲಬುರಗಿ 277, ಕೊಡಗು 345, ಕೋಲಾರ 708, ಕೊಪ್ಪಳ 377, ಮಂಡ್ಯ 798, ಮೈಸೂರು 2526, ರಾಯಚೂರು 584, ರಾಮನಗರ 335, ಶಿವಮೊಗ್ಗ 971, ತುಮಕೂರು 1,545, ಉಡುಪಿ 849, ಉತ್ತರ ಕನ್ನಡ 1,357, ವಿಜಯಪುರ 437, ಯಾದಗಿರಿ ಜಿಲ್ಲೆಯಲ್ಲಿ ಇಂದು 322 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಜಿಲ್ಲಾವಾರು ಮೃತರ ವಿವರ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 451 ಜನ ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 200 ಜನರು ನಿಧನರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ 35, ಉತ್ತರ ಕನ್ನಡ ಜಿಲ್ಲೆ 20, ಬಳ್ಳಾರಿ 19, ತುಮಕೂರು 18, ಶಿವಮೊಗ್ಗ, ಬೆಳಗಾವಿ ಜಿಲ್ಲೆ 14, ಹಾಸನ ಜಿಲ್ಲೆ 13, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಧಾರವಾಡ, ಮೈಸೂರು ಜಿಲ್ಲೆ 9, ಮಂಡ್ಯ, ಕಲಬುರಗಿ ಜಿಲ್ಲೆ 7, ಹಾವೇರಿ, ಕೋಲಾರ ಜಿಲ್ಲೆ 6, ಬಾಗಲಕೋಟೆ, ಚಿಕ್ಕಮಗಳೂರು ಜಿಲ್ಲೆ 5, ಉಡುಪಿ, ರಾಯಚೂರುಗದಗ, ಬೀದರ್, ದಾವಣಗೆರೆ ಜಿಲ್ಲೆ 4, ಕೊಡಗು, ರಾಮನಗರ, ಜಯಪುರ, ಯಾದಗಿರಿ ಜಿಲ್ಲೆ 3, ಚಿತ್ರದುರ್ಗ ಜಿಲ್ಲೆ 1 ನಿಧನರಾಗಿದ್ದಾರೆ.
ಇದನ್ನೂ ಓದಿ: ಕೊರೊನಾ ವಿರುದ್ಧ ಗೆಲುವು ಸಾಧಿಸಿರುವ ಅಮೇರಿಕ ಕೊವಿಡ್-ಮುನ್ನಿನ ದಿನಗಳಿಗೆ ವಾಪಸ್ಸಾಗುತ್ತಿದೆ!
ಕೊವಿಡ್ ಕಾರಣದಿಂದ ಅರ್ಧಕ್ಕೆ ನಿಂತ ಖ್ಯಾತ ಧಾರಾವಾಹಿ; ವೀಕ್ಷಕರಿಗೆ ಬೇಸರ
(Karnataka Covid Update 31183 new cases and 451 death today)
Published On - 8:36 pm, Sat, 22 May 21