Karnataka Covid Update: ಕರ್ನಾಟಕದಲ್ಲಿ ಇಂದು 3,604 ಜನರಿಗೆ ಕೊವಿಡ್ ದೃಢ, 89 ಜನರು ನಿಧನ

| Updated By: guruganesh bhat

Updated on: Jun 27, 2021 | 7:49 PM

ಈವರೆಗೆ ರಾಜ್ಯದಲ್ಲಿ 26,98,822 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 7,699 ಜನರು ಕೊವಿಡ್​ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಇಂದಿನ ರಾಜ್ಯದ ಕೊವಿಡ್ ಪಾಸಿಟಿವಿಟಿ ದರ ಶೇ 2.18ರಷ್ಟಿದೆ.

Karnataka Covid Update: ಕರ್ನಾಟಕದಲ್ಲಿ ಇಂದು 3,604 ಜನರಿಗೆ ಕೊವಿಡ್ ದೃಢ, 89 ಜನರು ನಿಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಇಂದು 3,604 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 89 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 788 ಜನರಿಗೆ ಇಂದು ಸೋಂಕು ದೃಢಪಟ್ಟಿದ್ದು, 11 ಜನರು ನಿಧನರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇಂದು ರಾಜ್ಯದಲ್ಲಿ ಖಚಿತಪಟ್ಟ ಕೊರೊನಾ ಸೋಂಕಿತರ ಸಂಖ್ಯೆಯನ್ನೂ ಸೇರಿಸಿ ರಾಜ್ಯದ ಈವರೆಗಿನ ಕೊವಿಡ್ ಸೋಂಕಿತ ಸಂಖ್ಯೆ 28,34,630ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 1,01,042 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಈವರೆಗೆ ರಾಜ್ಯದಲ್ಲಿ 26,98,822 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 7,699 ಜನರು ಕೊವಿಡ್​ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಇಂದಿನ ರಾಜ್ಯದ ಕೊವಿಡ್ ಪಾಸಿಟಿವಿಟಿ ದರ ಶೇ 2.18ರಷ್ಟಿದೆ.

ಬೆಂಗಳೂರು ನಗರ ಜಿಲ್ಲೆ 788, ಮೈಸೂರು ಜಿಲ್ಲೆ 478, ದಕ್ಷಿಣ ಕನ್ನಡ 454, ಹಾಸನ 322, ಶಿವಮೊಗ್ಗ 177, ​ಬೆಳಗಾವಿ 143, ಚಿಕ್ಕಮಗಳೂರು 126, ದಾವಣಗೆರೆ 118, ತುಮಕೂರು 116, ಕೊಡಗು 115, ಮಂಡ್ಯ 109, ಕೋಲಾರ 101, ಉಡುಪಿ 97, ಬೆಂಗಳೂರು ಗ್ರಾಮಾಂತರ 77, ಉತ್ತರ ಕನ್ನಡ 57, ಚಾಮರಾಜನಗರ 54, ಧಾರವಾಡ 46, ಚಿಕ್ಕಬಳ್ಳಾಪುರ 40, ಕಲಬುರಗಿ 36, ಬಳ್ಳಾರಿ 26 , ಚಿತ್ರದುರ್ಗ 22, ರಾಯಚೂರು 19, ಗದಗ 18 , ರಾಮನಗರ 15, ಹಾವೇರಿ 13, ವಿಜಯಪುರ 9, ಕೊಪ್ಪಳ 9, ಬೀದರ್ 8, ಬಾಗಲಕೋಟೆ 7, ಯಾದಗಿರಿ 4 ಕೊವಿಡ್ ಸೋಂಕಿತರು ಖಚಿತಪಟ್ಟಿದ್ದಾರೆ.

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 89 ಜನರ ಸಾವನ್ನಪ್ಪಿದ್ದು, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆ 15, ಬೆಂಗಳೂರು 11, ಬಳ್ಳಾರಿ ಜಿಲ್ಲೆ 8, ಬೆಳಗಾವಿ, ಧಾರವಾಡ ಜಿಲ್ಲೆ 6, ಶಿವಮೊಗ್ಗ ಜಿಲ್ಲೆ 5, ಹಾಸನ, ಕೋಲಾರ ಜಿಲ್ಲೆ 4, ದಾವಣಗೆರೆ, ಗದಗ, ಹಾವೇರಿ, ಕೊಡಗು, ಮಂಡ್ಯ ಜಿಲ್ಲೆ 2, ಚಾಮರಾಜನಗರ, ಕೊಪ್ಪಳ, ರಾಯಚೂರು, ತುಮಕೂರು, ಉಡುಪಿ ಜಿಲ್ಲೆ ತಲಾ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಈವರೆಗೆ ರಾಜ್ಯದಲ್ಲಿ ಕೊವಿಡ್​ನಿಂದ ನಿಧನರಾದವರ ಸಂಖ್ಯೆ 34,743 ತಲುಪಿದೆ.

ಇದನ್ನೂ ಓದಿ: ಪ್ರವಾಸಿಗರಿಗಾಗಿ ಹೊನ್ನಾವರ-ಗೇರಸೊಪ್ಪಾ ಜಲಯಾನ ಯೋಜನೆ; ಇತಿಹಾಸದ ಕಾಲಗರ್ಭದಿಂದ ಇಲ್ಲಿಯವರೆಗೆ..

ವಿಯೆಟ್ನಾಂ ಯೋಗ: ಬುದ್ಧನ ನಾಡಲ್ಲಿ ಯೋಗ ಕಲಿಸುವ ಕರ್ನಾಟಕದ ಯೋಗ ಶಿಕ್ಷಕರು ಬರೆಯುತ್ತಾರೆ..

(Karnataka Covid Update 3604 new cases and 89 deaths today in state)

Published On - 7:35 pm, Sun, 27 June 21