ಮಡಿಕೇರಿ: ಮಣಜೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವೃದ್ಧೆ ಶವ ಪತ್ತೆಯಾದ ಕೇಸ್ಗೆ ಸಂಬಂಧಿಸಿ ವೃದ್ಧೆ ನಿಗೂಢ ಸಾವಿನ ಕಾರಣ ಬಯಲಾಗಿದೆ. ಮೊಮ್ಮಗನೇ ಅಜ್ಜಿಯನ್ನು ಕೊಂದಿದ್ದು ವೃದ್ಧೆ ಹತ್ಯೆಗೈದಿದ್ದ ಮೊಮ್ಮಗ ಮಂಜುನಾಥ್(40) ಅರೆಸ್ಟ್ ಆಗಿದ್ದಾರೆ. ಕೊಡಗಿನ ಕುಶಾಲನಗರ ತಾಲ್ಲೂಕಿನ ಮಣಜೂರಿನಲ್ಲಿ ಈ ಘಟನೆ ನಡೆದಿದೆ.
ಹಣಕಾಸು ವಿಚಾರವಾಗಿ ವೃದ್ಧೆ ಗೌರಮ್ಮ ಜತೆ ಮೊಮ್ಮಗ ಮಂಜುನಾಥ್ನಿಗೆ ಭಿನ್ನಾಭಿಪ್ರಾಯವಾಗಿತ್ತು. ಮಂಜುನಾಥ್ ಕತ್ತು ಹಿಸುಕಿ ಗೌರಮ್ಮ(77) ಕೊಲೆ ಮಾಡಿದ್ದಾನೆ. ಮಣಜೂರಿನಲ್ಲಿ ಜು.3ರಂದು ಗೌರಮ್ಮ ಶವ ಪತ್ತೆಯಾಗಿತ್ತು. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸ್ ತನಿಖೆಯಲ್ಲಿ ಕೊಲೆ ಬಹಿರಂಗವಾಗಿದೆ. ಸದ್ಯ ಆರೋಪಿ ಮಂಜುನಾಥ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹಳೇ ವೈಷಮ್ಯಕ್ಕೆ ಕೊಲೆ
ಇನ್ನು ಹುಬ್ಬಳ್ಳಿಯಲ್ಲಿ ಚಾಕು ಇರಿದು ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ಗೋಪನಕೊಪ್ಪ ಅಮರ ಕಾಲೋನಿ ಕ್ರಾಸ್ ಬಳಿ ತಡ ರಾತ್ರಿ ಹಳೇ ವೈಷಮ್ಯ ಹಿನ್ನೆಲೆ ಅಭಿಷೇಕ್ ಗೌಡ ಪಾಟೀಲ್(22) ಹತ್ಯೆ ಮಾಡಲಾಗಿದೆ. ಅಭಿಷೇಕ್, ಬಿಜೆಪಿ ಮುಖಂಡ ಈಶ್ವರ ಗೌಡ ಅಣ್ಣನ ಮಗ. ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರೈಲಿಗೆ ಸಿಲುಕಿ ಸಾವು
ತುಮಕೂರಿನ ಕ್ಯಾತ್ಸಂದ್ರ ರೈಲ್ವೆ ನಿಲ್ದಾಣದ ಬಳಿ ದುರ್ಘಟನೆಯೊಂದು ಸಂಭವಿಸಿದೆ. ರೈಲಿಗೆ ಸಿಲುಕಿ ಸುಮಾರು 25 ವರ್ಷದ ಯುವಕ ಮೃತಪಟ್ಟಿದ್ದಾನೆ. ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
(Karnataka Crime man killed her granny and miscreants murdered youth )
ಇದನ್ನೂ ಓದಿ: ಪತ್ನಿ ಶೀಲ ಶಂಕಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪತಿ; ಎರಡು ಮುಗ್ಧ ಕಂದಮ್ಮಗಳು ಅನಾಥ