ಪತ್ನಿ ಶೀಲ ಶಂಕಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪತಿ; ಎರಡು ಮುಗ್ಧ ಕಂದಮ್ಮಗಳು ಅನಾಥ

ಅವರಿಬ್ಬರು ಕೂಲಿ ನಾಲಿ ಮಾಡಿಕೊಂಡು ಬದಕು ಸಾಗಿಸಲು ಊರು ಬಿಟ್ಟು ಊರಿಗೆ ಬಂದಿದ್ದರು‌. ಆದ್ರೆ ಹಾಗೇ ಬಂದ ದಂಪತಿಗಳು ಸುಖವಾಗಿ ಜೀವನ ಸಾಗಿಸುತ್ತಿದ್ದರು. ಹೀಗಿರುವಾಗ ಆ ಪಾಪಿ ಪತಿಗೆ ಪತ್ನಿಯ ನಡತೆಯ ಮೇಲೆ ಅನುಮಾನ ಶುರುವಾಗಿತ್ತು. ಪ್ರತಿ ದಿನವೂ ಜಗಳ ತೆಗೆಯುತ್ತಿದ್ದ ಕಿರಾತಕ ಆಕೆಯನ್ನೇ ಬಲಿ ಪಡೆದಿದ್ದಾನೆ.

ಪತ್ನಿ ಶೀಲ ಶಂಕಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪತಿ; ಎರಡು ಮುಗ್ಧ ಕಂದಮ್ಮಗಳು ಅನಾಥ
ಶವಾಗಾರ
Follow us
TV9 Web
| Updated By: ಆಯೇಷಾ ಬಾನು

Updated on: Jul 12, 2021 | 7:53 AM

ಹುಬ್ಬಳ್ಳಿ: ಗದಗ ಮೂಲದ ಸೈಫ್ ಅಲಿ ಈಟಿ ಎಂಬಾತ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಇವರು ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮದಲ್ಲಿ ವಾಸವಾಗಿದ್ದರು. ಆದ್ರೆ ಸೈಫ್ ತನ್ನ ಹೆಂಡತಿಯ ನೆತ್ತರು ಹರಿಸಿದ್ದಾನೆ. ಈತ ತನ್ನ ಪತ್ನಿ ಮೆಹರುನ್ನಿಸಾ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ದಿನ ಜಗಳ ತೆಗೆಯುತ್ತಿದ್ದನಂತೆ. ಹೀಗೆ ಮೊನ್ನೆ ಕೂಡ ಜಗಳ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಅಲ್ಲೇ ಇದ್ದ ಕಲ್ಲನ್ನ ಪತ್ನಿಯ‌ ಮೇಲೆ ಎತ್ತಿ ಹಾಕಿದ್ದಾನೆ.

ಇವರು ಮದುವೆಯಾಗಿ ಹತ್ತು ವರ್ಷವಾಗಿದ್ದು, ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಗದಗನಲ್ಲೂ ಪ್ರತಿ ದಿನ ಜಗಳ‌ ಮಾಡಿ ಪೊಲೀಸ್ ಠಾಣೆ‌ ಮೆಟ್ಟಿಲೆರುತ್ತಿದ್ದ ಇವರನ್ನ ಸಂಬಂಧಿಕರು ಹುಬ್ಬಳ್ಳಿಯ ಕುಸುಗಲ್‌ಗೆ ಕಳುಹಿಸಿದ್ರು. ಇಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಸೈಫ್ ಅಲಿ ಬಾಡಿಗೆ ಮನೆ ಮಾಡಿ ಜೀವನ ಸಾಗಿಸುತ್ತಿದ್ದ. ಆದ್ರೆ ಅದ್ಯಾಕೋ ಏನೋ ಪತ್ನಿಯ ನಡತೆಯ ಮೇಲೆ ಅನುಮಾನ ಪಡಲು ಶುರು ಮಾಡಿದ್ದ. ಹೀಗಾಗಿ ಪ್ರತಿದಿನವೂ ಜಗಳ ತೆಗೆಯುತ್ತಿದ್ದ. ನಿನ್ನೆ ಜಗಳ ಮಾಡಿ ಸಿಟ್ಟಿನಲ್ಲಿ ಹೆಂಡತಿ ಮೇಲೆ ಕಲ್ಲು ಹಾಕಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಹೆಂಡತಿಯನ್ನ ಕಾಲು ಜಾರಿ ಬಿದ್ದಿದ್ದಾಳೆ ಎಂದು ಕಿಮ್ಸ್‌ಗೆ ಅಡ್ಮಿಟ್ ಮಾಡಿದ್ದಾನೆ. ಆದ್ರೆ ಆಕೆಯ ಜೀವ ಹೋದಾಗ ಸಂಬಂಧಿಕರಿಗೆ ಕೊಲೆಯ ರಹಸ್ಯ ಗೊತ್ತಾಗಿದೆ.

ಸಧ್ಯ ಪ್ರಕರಣ ದಾಖಲಿಸಿಕೊಂಡಿರೋ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಆದ್ರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೇ ಇಲ್ಲಿ ಎರಡೂ ಮುಗ್ಧ ಕಂದಮ್ಮಗಳು ಅನಾಥವಾಗಿದ್ದು ನಿಜಕ್ಕೂ ದುರಂತವೇ ಸರಿ.

(Husband kills wife in doubt of having illegal relationship with others in hubli)

ಇದನ್ನೂ ಓದಿ: Love Failure: ಪ್ರೀತಿಸಿ ಕೈಕೊಟ್ಟ ಮಾಜಿ ಪ್ರೇಯಸಿಯನ್ನು ಕೊಲೆ ಮಾಡಿ ಭಗ್ನಪ್ರೇಮಿಯೂ ಹೆಣವಾದ!

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್