Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 1,978 ಕೊರೊನಾ ಪ್ರಕರಣ ದೃಢ; 56 ಮಂದಿ ಸಾವು
ಬೆಂಗಳೂರಲ್ಲಿ ಇಂದು ಒಂದೇ ದಿನ 433 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,19,378 ಕ್ಕೆ ಏರಿಕೆಯಾಗಿದೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜುಲೈ 11) ಹೊಸದಾಗಿ 1,978 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,71,298 ಕ್ಕೆ ಏರಿಕೆ ಆಗಿದೆ. ಸೋಂಕಿತರ ಪೈಕಿ 27,98,703 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 56 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 35,835 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 36,737 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಲ್ಲಿ ಇಂದು ಒಂದೇ ದಿನ 433 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,19,378 ಕ್ಕೆ ಏರಿಕೆಯಾಗಿದೆ. 12,19,378 ಸೋಂಕಿತರ ಪೈಕಿ 11,90,182 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿಗೆ 8 ಜನರ ಬಲಿಯಾಗಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 15,736 ಜನ ಸಾವನ್ನಪ್ಪಿದ್ದಾರೆ. ನಗರದಲ್ಲಿ 13,459 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ ಬಳ್ಳಾರಿ 6, ಬೆಳಗಾವಿ 112, ಬೆಂಗಳೂರು ಗ್ರಾಮಾಂತರ 64, ಬೆಂಗಳೂರು ನಗರ 433, ಬೀದರ್ 3, ಚಾಮರಾಜನಗರ 40, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 45, ಚಿತ್ರದುರ್ಗ 31, ದಕ್ಷಿಣ ಕನ್ನಡ 195, ದಾವಣಗೆರೆ 22, ಧಾರವಾಡ 30, ಗದಗ 4, ಹಾಸನ 132, ಹಾವೇರಿ 3, ಕಲಬುರಗಿ 16, ಕೊಡಗು 85, ಕೋಲಾರ 38, ಕೊಪ್ಪಳ 6, ಮಂಡ್ಯ 56, ಮೈಸೂರು 261, ರಾಯಚೂರು 3, ರಾಮನಗರ 11, ಶಿವಮೊಗ್ಗ 124, ತುಮಕೂರು 100, ಉಡುಪಿ 92, ಉತ್ತರ ಕನ್ನಡ 45, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ 1 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.
ಜಿಲ್ಲಾವಾರು ಮೃತರ ವಿವರ ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 8 ಜನರು ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7, ಬೆಳಗಾವಿ ಜಿಲ್ಲೆಯಲ್ಲಿ 6, ಹಾಸನ, ಕೋಲಾರ ಜಿಲ್ಲೆಯಲ್ಲಿ ತಲಾ 5, ಧಾರವಾಡ ಜಿಲ್ಲೆಯಲ್ಲಿ 4, ಶಿವಮೊಗ್ಗ ಜಿಲ್ಲೆಯಲ್ಲಿ 3, ತುಮಕೂರು, ಮೈಸೂರು ಜಿಲ್ಲೆಯಲ್ಲಿ ತಲಾ 2, ಉತ್ತರ ಕನ್ನಡ, ಹಾವೇರಿ ಜಿಲ್ಲೆಯಲ್ಲಿ ತಲಾ 2, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2, ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ತಲಾ 1, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1, ಚಾಮರಾಜನಗರ, ದಾವಣಗೆರೆ ಜಿಲ್ಲೆ, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಯಲ್ಲಿ, ರಾಮನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 35,835 ಜನರ ಸಾವು ಸಂಭವಿಸಿದೆ.
ಇದನ್ನೂ ಓದಿ: ವಿಶ್ವದ ನಾನಾ ಪ್ರಾಂತ್ಯಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಈಗಲೂ ಹೆಚ್ಚುತ್ತಿವೆ, ದಯವಿಟ್ಟು ಯಾಮಾರಬೇಡಿ: ಸೌಮ್ಯ ಸ್ವಾಮಿನಾಥನ್
Sabarimala Temple: ಜು.17ರಿಂದ 5 ದಿನ ಬಾಗಿಲು ತೆರೆಯಲಿರುವ ಶಬರಿಮಲೆ ದೇಗುಲ; ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ
Published On - 7:52 pm, Sun, 11 July 21