Crime News: ದಸರಾ ಬನ್ನಿ ಕೊಡುವ ನೆಪದಲ್ಲಿ ಕರೆದು ಪಿಡಿಒ ಬರ್ಬರ ಕೊಲೆ

| Updated By: ಆಯೇಷಾ ಬಾನು

Updated on: Oct 06, 2022 | 3:16 PM

ಹಳೆ ವೈಷಮ್ಯ ಹಿನ್ನೆಲೆ ಪಿಡಿಒ ಗಜದಂಡಯ್ಯ ಅವರನ್ನು ಬನ್ನಿ ಕೊಡುವ ನೆಪದಲ್ಲಿ ಕರೆದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Crime News: ದಸರಾ ಬನ್ನಿ ಕೊಡುವ ನೆಪದಲ್ಲಿ ಕರೆದು ಪಿಡಿಒ ಬರ್ಬರ ಕೊಲೆ
ಸಾಂದರ್ಭಿಕ ಚಿತ್ರ
Image Credit source: India.com
Follow us on

ರಾಯಚೂರು: ದಸರಾ ಬನ್ನಿ ಕೊಡುವ ನೆಪದಲ್ಲಿ ಕರೆದು ಪಿಡಿಒ ಬರ್ಬರ ಕೊಲೆ ಮಾಡಲಾಗಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಸೀಮೆ ಈರಣ್ಣ ದೇಗುಲದ ಬಳಿ ಕೋಠಾ ಗ್ರಾಮ ಪಂಚಾಯಿತಿ ಪಿಡಿಒ ಗಜದಂಡಯ್ಯ ಅವರ ಕೊಲೆ ಮಾಡಲಾಗಿದೆ. ಹಳೆ ವೈಷಮ್ಯ ಹಿನ್ನೆಲೆ ಪಿಡಿಒ ಗಜದಂಡಯ್ಯ ಅವರನ್ನು ಬನ್ನಿ ಕೊಡುವ ನೆಪದಲ್ಲಿ ಕರೆದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾತ್ರಿ ಮಲಗಿದ್ದ ವೇಳೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

ರಾಯಚೂರಿನಲ್ಲಿ ಮತ್ತೊಂದು ಕೊಲೆ ನಡೆದಿದೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ರಾತ್ರಿ ಮಲಗಿದ್ದ ವೇಳೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. ಬಸವರಾಜ ಹೊನ್ನಪ್ಪ(37) ಕೊಲೆಯಾದ ವ್ಯಕ್ತಿ. ಹಂತಕರು ಚಾಕುವಿನಿಂದ ಹೊಟ್ಟೆ, ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ

ಕಲಬುರಗಿ ಬಸಂತನಗರದಲ್ಲಿ ಹಣದ ವಿಚಾರಕ್ಕೆ ಸಂಬಂಧಿಗಳಿಂದಲೇ ಲಕ್ಷ್ಮೀಪುತ್ರ(45) ಎಂಬ ವ್ಯಕ್ತಿಯ ಕೊಲೆ ಮಾಡಲಾಗಿದೆ. ಹಣದ ವಿಚಾರಕ್ಕೆ ಲಕ್ಷ್ಮೀಪುತ್ರ ಪತ್ನಿಯ ಸಹೋದರ ಶಿವಕಾಂತ್ ಮತ್ತು ಪ್ರಶಾಂತ್ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಲಕ್ಷ್ಮೀಪುತ್ರ ತನ್ನ ಪತ್ನಿಯ ಸಹೋದರರಿಗೆ 8 ಲಕ್ಷ ಹಣ ನೀಡಿದ್ದರು. ಕೊಟ್ಟ ಹಣವನ್ನು ವಾಪಾಸ್ ಕೇಳಿದಕ್ಕೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ಥಗಿತಗೊಂಡಿಲ್ಲ ಒತ್ತುವರಿ ತೆರವು ಕಾರ್ಯ, ಮತ್ತೆ ಯಾವಾಗ ಶುರು?

ಗಾಳಿಪಟ ಹಾರಿಸುವಾಗ ಟೆಸರ್​ ಮೇಲಿಂದ ಬಿದ್ದು ಬಾಲಕ ಸಾವು

ಬೆಳಗಾವಿ ನಗರದ ಉಜ್ವಲ್ ನಗರದಲ್ಲಿ ಗಾಳಿಪಟ ಹಾರಿಸುವಾಗ ಟೆಸರ್​ ಮೇಲಿಂದ ಬಿದ್ದು 11 ವರ್ಷದ ಅರ್ಮಾನ್ ದಫೇದಾರ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದವರು ಅರೆಸ್ಟ್

ಬೆಂಗಳೂರು: ಶಿವಮೊಗ್ಗದಿಂದ ಬಂದು ಗಂಧದ ಮರದ ತುಂಡುಗಳನ್ನ ಕದ್ದು ಸಾಗಿಸುತ್ತಿದ್ದ ಗ್ಯಾಂಗನ್ನು ಬೆಂಗಳೂರು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಮೂವರು ಶ್ರೀಗಂಧ ಕಳ್ಳರನ್ನ ಬಂಧಿಸಿ 150 ಕೆಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ನಂದಿನಿಲೇಔಟ್, ಆರ್.ಎಂ.ಸಿ ಯಾರ್ಡ್​ನಲ್ಲಿ ಶ್ರೀಗಂಧ ಮರ ಕಡಿದು ಮಾರುತಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:16 pm, Thu, 6 October 22