AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಪಾದಯಾತ್ರೆ ನಿಲ್ಲಿಸಲು ಬಿಜೆಪಿ ನಾನಾ ಪ್ರಯತ್ನ ಮಾಡುತ್ತಿದೆ: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಆರೋಪ

ಮಾಧ್ಯಮದವರ ಮೇಲೂ ಪೊಲೀಸರು ಹಲ್ಲೆ ಮಾಡಿದ್ದಾರೆ. ಮಾಧ್ಯಮದವರು ನಮ್ಮ ವಿರುದ್ಧ ತಿರುಗಿಬೀಳುವಂತೆ ಪ್ರಚೋದಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಆರೋಪ ಮಾಡಿದರು.

ನಮ್ಮ ಪಾದಯಾತ್ರೆ ನಿಲ್ಲಿಸಲು ಬಿಜೆಪಿ ನಾನಾ ಪ್ರಯತ್ನ ಮಾಡುತ್ತಿದೆ: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಆರೋಪ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 06, 2022 | 4:44 PM

Share

ಮಂಡ್ಯ: ಬಿಜೆಪಿ ನಮ್ಮ ಪಾದಯಾತ್ರೆ ನಿಲ್ಲಿಸಲು ನಾನಾ ಪ್ರಯತ್ನ ‌ಮಾಡುತ್ತಿದೆ. ಇಂದು ಮಾಧ್ಯಮದವರ ಮೇಲೂ ಪೊಲೀಸರು ಹಲ್ಲೆ ಮಾಡಿದ್ದಾರೆ. ಮಾಧ್ಯಮದವರು ನಮ್ಮ ವಿರುದ್ಧ ತಿರುಗಿಬೀಳುವಂತೆ ಪ್ರಚೋದಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಆರೋಪ ಮಾಡಿದರು. ಮಂಡ್ಯದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪತ್ರಿಕಾಗೋಷ್ಟಿಯಲ್ಲಿ  ಅವರು ಮಾತನಾಡಿದರು. ಅಲ್ಲದೇ ಡಿ.ಕೆ ಶಿವಕುಮಾರ್ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಅವರಿಗೆ ಕಿರುಕುಳ ಕೊಡುತ್ತಿದ್ದಾರೆ. ಇದರಿಂದ ನಾವು ಭಯ ಪಟ್ಟು ಪಾದಯಾತ್ರೆ ನಿಲ್ಲಿಸುತ್ತೇವೆ ಅನ್ನೋದಾದರೆ ಅದು ಸುಳ್ಳು. ಬಿಜೆಪಿ ಈ ನಡೆಯಿಂದ ಅವರ ಯೋಗ್ಯತೆ ಏನು ಅನ್ನೋದು ಈಗ ಜನರ ಗಮನಕ್ಕೆ ಬರುತ್ತಿದೆ. ಜಸ್ಟಿಸ್ ನಾಗಮೋಹನ್ ದಾಸ್ ಕಮಿಷನ್ ಬಗ್ಗೆ ಇಷ್ಟು ದಿನ ತಲೆ ಕೆಡಿಸಿಕೊಳ್ಳದ ಬಿಜೆಪಿ, ಈಗ ಚುನಾವಣೆ ಮುಂದಿರುವ ಕಾರಣ, ಮೀಟಿಂಗ ಮೇಲೆ ಮೀಟಿಂಗ್ ಮಾಡುತ್ತಿದೆ. 15 ದಿನದ ಒಳಗಾಗಿ %3‌ರಿಂದ 7%ಮೀಸಲಾತಿಯನ್ನು ಮೋದಿ ಸರ್ಕಾರ ಘೋಷಿಸಬೇಕು. ಹತ್ತು ಕಿ.ಮೀಟರ್​ಗಿಂತಲೂ ಹೆಚ್ಚು ಇವತ್ತು ನಡಿಗೆ ಆಗಿದೆ. ಸ್ವತಃ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ಕಾರ್ಯಕರ್ತರಿಗೆ ಉತ್ಸಾಹ ಬಂದಿದೆ ಎಂದು ಹೇಳಿದರು.

ಬಿಜೆಪಿಯವರಿಗೆ ಮೊಸಳೆ ಕಣ್ಣೀರು ಇದೆ ಹೊರತು, ನಿಜವಾದ ಕಾಳಜಿ ಇಲ್ಲ: ಮಾಜಿ ಸಿಎಂ ಸಿದ್ಧರಾಮಯ್ಯ 

ಸಮ್ಮಿಶ್ರ ಸರಕಾರ ಇದ್ದಾಗ ಪ.ಜಾತಿ ಪಂ 2-07-2020 ಕ್ಕೆ ವರಿದಿ ಕೊಡಲಾಗಿದೆ. ನಾಗಮೋಹನ್ ಆಯೋಗ ವರದಿ ನೀಡಿದೆ. ಆ ವರದಿಯನ್ನು ಜಾರಿ ಮಾಡಿಯೇ ಇಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ಅದಕ್ಕಾಗಿ ಎಸ್​ಸಿಎಸ್​ಟಿಯವರು ಹೋರಾಟ ಮಾಡುತ್ತಿದ್ದಾರೆ. ಎಸ್​ಟಿ ಜನಾಂಗದವರಿಗೆ %3 ರಿಂದ‌ 7% ಹೆಚ್ಚು ಮಾಡಬೇಕು. ಜನಸಂಖ್ಯೆ ಅನುಗುಣವಾಗಿ ಒಟ್ಟು 6% ಹೆಚ್ಚು ಮಾಡಬೇಕು ಅಂತಿದೆ ಎಂದು ಹೇಳಿದರು. ಬಿಜೆಪಿಯವರಿಗೆ ಮೊಸಳೆ ಕಣ್ಣೀರು ಇದೆ ಹೊರತು ನಿಜವಾದ ಕಾಳಜಿ ಇಲ್ಲ. ಒತ್ತಾಯ ಜಾಸ್ತಿ ಆದ ಮೇಲೆ ಈಗ ಸಿಎಂ ಮೀಟಿಂಗ್ ಕರೆದಿದ್ದಾರೆ. ದಲಿತರು, ಸ್ವಾಮಿಜಿಗಳು, ಸತತ ಧರಣಿ ಮಾಡುತ್ತಿದ್ದಾರೆ. ಹೀಗಾಗಿ ನಾಳೆ ಸಿಎಂ ಸರ್ವಪಕ್ಷ ಸಭೆ ಕರೆದಿದ್ದಾರೆ. ನಮ್ಮ ಪಕ್ಷದ ನಿಲುವು ಏನಿರಬೇಕು ಅನ್ನೋದನ್ನು ಸುರ್ಜೇವಾಲ‌ ತಿಳಿಸಿದ್ದಾರೆ. ನಾವು ರಿಸರ್ವೇಷನ್ ಬಗ್ಗೆ ಸ್ಪಷ್ಟವಾಗಿ ಇದೇವೆ. ನಾಗಮೋಹನ್ ದಾಸ್ ವರದಿಯಂತೆ ರಿಸರ್ವೇಷನ್ ಆಗುವ ನಿಲುವು ನಮ್ಮದಿದೆ. ಅದನ್ನೇ ನಾವು ನಾಳೆ ಸರ್ವಪಕ್ಷ ಸಭೆಯಲ್ಲಿ ತಿಳಿಸಲಿದ್ದೇವೆ

SC ಮತ್ತು STಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇಲ್ಲ. ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡಲಾಗಿದೆ. 2011ರ ಜನಗಣತಿ ಪ್ರಕಾರ SCಗಳು ಶೇ.17.15ರಷ್ಟಿದ್ದಾರೆ. STಗಳು ಶೇ.6.95 ಇದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ 2019ರಲ್ಲಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದೇವು. 2020ರಲ್ಲಿ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ. ವರದಿ ಕೊಟ್ಟು 2 ವರ್ಷ ಆದರೂ ಅದನ್ನ ಸರ್ಕಾರ ಒಪ್ಪಿಲ್ಲ. ವಾಲ್ಮೀಕಿ ಸ್ವಾಮೀಜಿ ಧರಣಿ ಮಾಡ್ತಿದ್ದಾರೆ. ನಾಗಮೋಹನ್ ದಾಸ್ ಕಮಿಟಿ ವರದಿ ಜಾರಿ ಮಾಡಬೇಕು. ST ಜನಾಂಗಕ್ಕೆ ಶೇ. 3ರಿಂದ 7ಕ್ಕೆ ಹೆಚ್ಚಿಸಬೇಕು. SC ಜನಾಂಗಕ್ಕೆ ಶೇ.15ರಿಂದ 17 ಹೆಚ್ಚಳಕ್ಕೆ ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ. ಈ ವರದಿಯನ್ನ 2 ವರ್ಷಗಳಿಂದ ಜಾರಿ ಮಾಡಲು ಸರ್ಕಾರ ಮೀನಾಮೇಷ ಮಾಡುತ್ತಿದೆ. ಮೀಸಲಾತಿಗೆ ವಿರುದ್ಧವಾದ ಸರ್ಕಾರ ಇದು. ಬಿಜೆಪಿಯವರಿಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ಹೇಳಿದರು.

ಮಂಡ್ಯದಲ್ಲೇ 150 ಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆಯಾಗಿದೆ: ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಅಂತ ಹೇಳಿ ಕಷ್ಟ ದ್ವಿಗುಣ ಮಾಡಿದ್ದಾರೆ. ಮಂಡ್ಯದಲ್ಲೇ 150 ಕ್ಕೂ ಹೆಚ್ಚು ಜನ ರೈತರ ಆತ್ಮಹತ್ಯೆ ಆಗಿದೆ. ಸಾಲಬಾಧೆಯಿಂದಾಗಿಯೇ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೊಂದು ಡಬಲ್ ಇಂಜಿನ್ ಸರ್ಕಾರವಾಗಿದೆ. ರೈತರ ಪರ ಕೆಲಸ ಕಾರ್ಯಗಳನ್ನ ಮಾಡುತ್ತೇವೆಂದು ಭರವಸೆ ಕೊಟ್ಟಿದ್ದರು ಅದು ಸುಳ್ಳಾಗಿದೆ. ಫೇರ್ ಟ್ರೇಡ್ ಮಾಡ್ಕೊಡಿ ಎಂದು ರೈತರು ಕೇಳಿ ಕೊಂಡಿದ್ದಾರೆ. ಸರ್ಕಾರ ಭೂಮಿಯನ್ನ ಒತ್ತುವರಿಯನ್ನ ಮಾಡಿ ಕೊಂಡಿದೆ ಆದರೆ ಅದರ ಪರಿಹಾರ ಹಣ ಕೊಟ್ಟಿಲ್ಲ. 100 ಕೋಟಿಗೂ ಅಧಿಕ ಹಣವನ್ನ ಸರ್ಕಾರ ಉಳಿಸಿ ಕೊಂಡಿದೆ. ಮಂಡ್ಯದ ಶುಗರ್ ಫ್ಯಾಕ್ಟರಿಗಳಲ್ಲಿ ಸರಿಯಾದಂತ ಹಣ ರೈತರ ಕೈ ಸೇರಿಲ್ಲ. ಜನಸಾಮಾನ್ಯರು ಸಾಕಷ್ಟು ಕಷ್ಟದಲ್ಲಿದ್ದಾರೆ ರಾಹುಲ್ ಗಾಂಧಿ ಬಳಿ ಜನ ತಮ್ಮ ಅಳಲನ್ನ ತೋಡಿ ಕೊಂಡಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.