Bharat Jodo Yatre: ನೆಲಕ್ಕೆ ಬಿದ್ದ ಬಾಲಕಿಯನ್ನು ಮೇಲೆತ್ತಿ ಬೆನ್ನು ಸವರಿದ ಸೋನಿಯಾ ಗಾಂಧಿ
ಭಾರತ್ ಜೋಡೋ ಯಾತ್ರೆ ವೇಳೆ ನೂಕಾಟ ತಳ್ಳಾಟದಿಂದ ಬಾಲಕಿ ನೆಲಕ್ಕೆ ಬಿದ್ಲು. ಈ ವೇಳ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಾಲಕಿಯನ್ನು ಮೇಲಕ್ಕೆ ಎತ್ತಿ ಸಂತೈಸಿದ್ದಾರೆ.
ಸಕ್ಕರೆ ನಾಡು ಮಂಡ್ಯದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ(Bharat Jodo Yatra) ಆರಂಭವಾಗಿದ್ದು ಎಲ್ಲಾ ಕೈ ನಾಯಕರು ಭಾರೀ ಉತ್ಸಾಹದಿಂದಲೇ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನ್ಯಾಮನಹಳ್ಳಿ ಬಳಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಸೇರಿಕೊಂಡಿದ್ದಾರೆ. ಸೋನಿಯಾ(Sonia Gandhi), ರಾಹುಲ್(Rahul Gandhi) ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಇದು ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ. ಇನ್ನು ಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ಕೆ.ಹೆಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಚಲುವರಾಯಸ್ವಾಮಿ, ಅಂಜಲಿ ನಿಂಬಾಳ್ಕರ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವರು ಭಾಗಿಯಾಗಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ನೂಕಾಟ ತಳ್ಳಾಟದಿಂದ ಬಾಲಕಿ ನೆಲಕ್ಕೆ ಬಿದ್ಲು. ಈ ವೇಳ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಾಲಕಿಯನ್ನು ಮೇಲಕ್ಕೆ ಎತ್ತಿ ಸಂತೈಸಿದ್ದಾರೆ. ಬಾಲಕಿಯ ಬೆನ್ನು ಸವರಿ ಏನಾದ್ರೂ ಪೆಟ್ಟಾಯ್ತಾ ಅಂತ ಕಾಳಜಿ ತೋರಿದ್ದಾರೆ.