ಬೆಂಗಳೂರಿನಲ್ಲಿ ಸ್ಥಗಿತಗೊಂಡಿಲ್ಲ ಒತ್ತುವರಿ ತೆರವು ಕಾರ್ಯ, ಮತ್ತೆ ಯಾವಾಗ ಶುರು?
ಪೂರ್ವ ಪಾರ್ಕ್ರಿಡ್ಜ್ ನ ಮೂರು ವಿಲ್ಲಾಗಳು, ರೈನ್ ಬೋ ಲೇಔಟ್ ನ 30 ವಿಲ್ಲಾಗಳು ಡೆಮಾಲಿಷನ್ ಗೆ ಫಿಕ್ಸ್ ಆಗಿ ನಿಂತಿವೆ. ಇಂದು ಮತ್ತು ನಾಳೆ ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಡೆಯಲಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯ ಸ್ಥಗಿತಗೊಂಡಿದೆಯಾ ಎಂಬ ಅನುಮಾನಗಳ ಮಧ್ಯೆ ಬಿಬಿಎಂಪಿ (BBMP) ಸೋಮವಾರದಿಂದ ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯವನ್ನು ಮತ್ತೆ ಕೈಗೆತ್ತಿಕೊಳ್ಳಲಿದೆ. ಈ ಮಧ್ಯೆ, ಇಂದು ಮತ್ತು ನಾಳೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೆ ನಡೆಯಲಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಇಕೋಸ್ಪೇಸ್ ಕಂಪನಿಯ (ecospace company) ಒತ್ತುವರಿ ಜಾಗ ತೆರವು ಮಾಡಲು ಅಧಿಕಾರಿಗಳಿಗೆ ಫ್ರೀಹ್ಯಾಂಡ್ ನೀಡಲಾಗಿದೆ. ಇದರೊಂದಿಗೆ ಇಕೋಸ್ಪೇಸ್ ಒಳಗಿರುವ 12 ಅಂತಸ್ತಿನ 2 ಕಟ್ಟಡ ತೆರವು ನಿಶ್ಚಿತವಾಗಿದೆ. ಇಂದು ಅಥವಾ ನಾಳೆ ಇಕೋಸ್ಪೇಸ್ಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ. ಸಾವಳಕೆರೆಯಿಂದ ಬೆಳ್ಳಂದೂರು ಕೆರೆಗೆ ಸಂಪರ್ಕ ಸಲ್ಲಿಸುವ ರಾಜಕಾಲುವೆ ಮಾರ್ಗದಲ್ಲಿ (Rajakaluve Encroachment clearance) 500 ಮೀಟರ್ ಉದ್ದ, 40-50 ಅಡಿ ಅಗಲದ ಜಾಗ ಒತ್ತುವರಿಯಾಗಿದೆ.
ಇದರ ಹೊರತಾಗಿ ಪೂರ್ವ ಪಾರ್ಕ್ರಿಡ್ಜ್ ನ ಮೂರು ವಿಲ್ಲಾಗಳು, ರೈನ್ ಬೋ ಲೇಔಟ್ ನ 30 ವಿಲ್ಲಾಗಳು ಡೆಮಾಲಿಷನ್ ಗೆ ಫಿಕ್ಸ್ ಆಗಿ ನಿಂತಿವೆ. ಇಂದು ಮತ್ತು ನಾಳೆ ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಡೆಯಲಿದೆ. ಸೋಮವಾರದಿಂದ ತೆರವು ಕಾರ್ಯಾಚರಣೆ ಶುರುವಾಗುವುದು ಪಕ್ಕಾ ಆಗಿದೆ.