Crime News: ಅನಾರೋಗ್ಯದಿಂದ ಬೇಸತ್ತು ಕೃಷ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

| Updated By: ಆಯೇಷಾ ಬಾನು

Updated on: Nov 16, 2022 | 10:44 AM

ರಾಜ್ಯದಲ್ಲಿಂದು ನಡೆದ ಪ್ರಮುಖ ಅಪರಾಧ ಸುದ್ದಿಗಳ ರೌಂಡಪ್. ಅನಾರೋಗ್ಯದಿಂದ ಬೇಸತ್ತು ಕೃಷ್ಣ ನದಿಗೆ ಹಾರಿ 35 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Crime News: ಅನಾರೋಗ್ಯದಿಂದ ಬೇಸತ್ತು ಕೃಷ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಸಾಂದರ್ಭಿಕ ಚಿತ್ರ
Follow us on

ವಿಜಯಪುರ: ಕೊಲ್ಹಾರ ತಾಲೂಕಿನ ಮಟ್ಟಿಹಾಳದಲ್ಲಿ ಕೃಷ್ಣ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅನಾರೋಗ್ಯದಿಂದ ಬೇಸತ್ತು ಶಾಂತವ್ವ ಬಸಪ್ಪ ಜಂಬಗಿ(35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಡಿಕೆ ತೋಟದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. 30 ರಿಂದ 35 ವರ್ಷದ ವ್ಯಕ್ತಿ ಶವ ಇದು ಎಂದು ಗುರುತಿಸಲಾಗಿದ್ದು ಅಡಿಕೆ ತೋಟದ ಮಾಲೀಕ ಶೇಖರಪ್ಪ ಆತಂಕಕ್ಕೊಳಗಾಗಿದ್ದಾರೆ. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತರ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಕಳ್ಳತನ ಆರೋಪಿ ಅರೆಸ್ಟ್, ಜಿಂಕೆ ಕೊಂಬು ವಶ

ದಾವಣಗೆರೆ ಜಿಲ್ಲೆಯ ಚನ್ನಗಿರಿ ನಿವಾಸಿ ಸಂತೋಷ ಎಚ್ ಬಿ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದ ಚಾಂದ್ ಪೀರ್ (27) ಎಂಬ ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮನೆಯಲ್ಲಿ 132 ಗ್ರಾಂ ಚಿನ್ನದ ಜೊತೆಗೆ ಮೂರು ಜಿಂಕೆ ಕೊಂಬುಗಳು ಪತ್ತೆಯಾಗಿವೆ. 3.52 ಲಕ್ಷ ರೂಪಾಯಿ ಮೌಲ್ಯದ 132 ಗ್ರಾಂ ಚಿನ್ನ ಹಾಗೂ ಮೂರು ಜಿಂಕೆಯ ಕೊಂಬುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ಮತ್ತೊಂದೆಡೆ ದಾವಣಗೆರೆ ಜಿಲ್ಲೆಯ ಜಗಳೂರು ಕೆನರಾ ಬ್ಯಾಂಕ್ ಬಳಿ ಸವಾರನ ಗಮನ ಬೇರೆಡೆ ಸೆಳೆದು ಬೈಕ್, ಬ್ಯಾಗ್ ನಲ್ಲಿ ಇಟ್ಟ 4.5 ಲಕ್ಷ ರೂಪಾಯಿ ಕಳವು ಮಾಡಲಾಗಿದೆ. ಜಗಳೂರು ತಾಲೂಕಿನ ಹನಮಂತಾಪುರದ ಕೊಟ್ರೇಶ್ ಹಣ ಕಳೆದುಕೊಂಡ ರೈತ. ಬ್ಯಾಂಕ್ ಸಾಲ ತುಂಬಲು ಡಿಸಿಸಿ ಬ್ಯಾಂಕ್ ನಲ್ಲಿ ಚಿನ್ನದ ಒಡವೆ ಅಡವಿಟ್ಟು ಹಣ ತಂದಿದ್ದ ರೈತನನ್ನು ಯಾಮಾರಿಸಿ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬುರ್ಖಾಧಾರಿ ಯುವಕನನ್ನು ಥಳಿಸಿದ ಜನ

ದಾವಣಗೆರೆ ನಗರದ ಆಜಾದ್ ನಗರ ಭಾಷಾ ನಗರದಲ್ಲಿ ಬುರ್ಖಾ ಧರಿಸಿ ಮಕ್ಕಳ ಕೈ ಹಿಡಿದು ಎಳೆಯುತ್ತಿದ್ದ ಯುವಕನನ್ನು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಯುವಕ ದಾವಣಗೆರೆ ನಗರದ ಹೊರವಲಯದ ಕಲ್ಪನಹಳ್ಳ ನಿವಾಸಿ ಎನ್ನಲಾಗಿದ್ದು ನಿಖರ ಹೆಸರು ಗೊತ್ತಾಗಿಲ್ಲ. ನಿರಂತರವಾಗಿ ಬುರ್ಖಾ ಹಾಕಿಕೊಂಡು ಸುತ್ತಾಡುತ್ತಿದ್ದ ಯುವಕನ ಚಲನವಲನ ಬಗ್ಗೆ ಸ್ಥಳೀಯರಿಗೆ ಸಂಶಯ ಉಂಟಾಗಿದೆ. ಈ ವೇಳೆ ಕ್ಷಣದಲ್ಲಿ ಸೇರಿದ ಹತ್ತಾರು ಜನ ಸ್ಥಳೀಯರು ಯುವಕ‌ನಿಗೆ ಧರ್ಮದೇಟು. ನೀಡಿ ಆಜಾದ್ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇದು ಮಕ್ಕಳ ಕೇಸ್ ಆದ ಹಿನ್ನೆಲೆ ಮಹಿಳಾ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ. ಸದ್ಯ ಆರೋಪಿ ಯುವಕ ಮಹಿಳಾ ಠಾಣೆ ಪೊಲೀಸರ ವಶದಲ್ಲಿದ್ದಾನೆ.

ತುಮಕೂರಿನ ಸಿದ್ಧಗಂಗಾ ಮಠದ ವಿದ್ಯಾರ್ಥಿ ನಾಪತ್ತೆ

ಸಿದ್ದಗಂಗಾ ಮಠದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸಂದೀಪ್ ರಮೇಶ್ ರಾಥೋಡ್(16) ನಾಪತ್ತೆಯಾಗಿದ್ದಾನೆ. ಮುದ್ದೇಬಿಹಾಳ ತಾಲೂಕಿನ ಕೋಳೂರು ತಾಂಡಾ ನಿವಾಸಿ ಆಗಿರುವ ಸಂದೀಪ್ ಅಕ್ಟೋಬರ್​​​ 30ರಂದು ನಾಪತ್ತೆಯಾಗಿದ್ದು ಈ ಬಗ್ಗೆ ಸಂದೀಪ್​​​ ತಂದೆ ರಮೇಶ್ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Published On - 10:49 am, Tue, 15 November 22