ಜನ ಕಲ್ಯಾಣಕ್ಕಾಗಿ 200 ಕಿ.ಮೀ ಉರುಳು ಸೇವೆ ಮಾಡುತ್ತಿರುವ ಶಶಿಕಲಾ ಮಾತೆ ದರ್ಶನಕ್ಕೆ ಮುಗಿಬೀಳುತ್ತಿರುವ ಜನ
ಜನ ನಮ್ಮಂದಿಯಿಂದ ಬದುಕುವಂತಾದರೆ ಉರುಳು ಸೇವೆ ಮಾಡುವುದಾಗಿ ಭಾಗ್ಯವಂತಿ ದೇವಿಗೆ ಬೇಡಿಕೊಂಡಿದ್ದರು. ತಮ್ಮ ಬೇಡಿಕೆ ಫಲಿಸಿದ ಹಿನ್ನೆಲೆ ಶಶಿಕಲಾ ಮಾತೆ ತೆಂಲಂಗಾಣದಿಂದ ಕಲಬುರಗಿಯ ಭಾಗ್ಯವಂತಿ ದೇವಿ ದೇವಾಲಯಕ್ಕೆ ಉರುಳು ಸೇವೆ ಮಾಡುತ್ತಿದ್ದಾರೆ.
ಬೀದರ್: ದೇಶದಲ್ಲಿ ಕೊರೋನಾ ಮರಣ ಮೃದಂಗದಿಂದ ಜನ ತತ್ತರಿಸಿ ಹೋಗುತ್ತಿದ್ದಾಗ ಸಾಂಕ್ರಮಿಕ ರೋಗದಿಂದ ಮುಕ್ತಿ ಸಿಗಲಿ ಮತ್ತು ಜನ ನಮ್ಮಂದಿಯಿಂದ ಬದುಕುವಂತಾದರೆ ಉರುಳು ಸೇವೆ ಮಾಡುವುದಾಗಿ ತೆಲಂಗಾಣ ರಾಜ್ಯದ ಜಹೀರಾಬಾದ ತಾಲೂಕಿನ ಧನಶ್ರೀ ಗ್ರಾಮದ ಶಶಿಕಲಾ ಮಾತೆ ಎಂಬವರು ಕಲಬುರಗಿ ಜಿಲ್ಲೆಯಲ್ಲಿರುವ ಭಾಗ್ಯವಂತಿ ದೇವಿಗೆ ಹರಕೆ ಇಟ್ಟಿದ್ದರು. ಬೇಡಿಕೆ ಫಲಿಸಿದ ಹಿನ್ನೆಲೆ ಸೋಮವಾರದಿಂದ (ನ.14) ಶಶಿಕಲಾ ಮಾತೆ ಅವರು ತೆಲಾಂಗಣ ರಾಜ್ಯದಿಂದ ಭಾಗ್ಯವಂತಿ ದೇವಿ ದೇವಸ್ಥಾನದವರೆಗೂ ಉರುಳು ಸೇವೆ ಮಾಡುತ್ತಿದ್ದಾರೆ. ಜನ ಕಲ್ಯಾಣಕ್ಕಾಗಿ ಬರೊಬ್ಬರಿ ಇನ್ನೂರು ಕಿ.ಮೀ ಉರುಳು ಸೇವೆ ಮಾಡುತ್ತಿರುವ ಶಶಿಕಲಾ ಮಾತೆ ಬೀದರ್ಗೆ ತಲುಪಿದ್ದು, ದರ್ಶನ ಪಡೆಯಲು ಜನರು ಮುಗಿ ಬಿಳುತ್ತಿದ್ದಾರೆ.
ಬೀದರ್ ತಾಲೂಕಿನ ಮನ್ನಾಖೇಳಿ ಗ್ರಾಮದ ರಾಷ್ಟ್ರೀಯ ಹೇದ್ದಾರಿಯಲ್ಲಿ ತೆಲಾಂಗಣ ರಾಜ್ಯದ ಜಹೀರಾಬಾದ ತಾಲೂಕಿನ ಧನಶ್ರೀ ಗ್ರಾಮದ ಶಶಿಕಲಾ ಮಾತೆ ಅವರು ಜನ ಕಲ್ಯಾಣಕ್ಕಾಗಿ ಉರುಳು ಸೇವೆ ಮಾಡುತ್ತಿದ್ದಾರೆ. ದೇಶದಲ್ಲಿ ಇತ್ತಿಚೆಗೆ ಭಯಾನಕ ಕೊರೋನಾ ಸೋಂಕು ಅನೇಕ ಜನರನ್ನು ಬಲಿ ಪಡೆದುಕೊಂಡಿದ್ದಲ್ಲದೆ ಆರ್ಥಿಕ ಸ್ಥಿತಿಗತಿಯನ್ನು ಬಿಡಮೇಲು ಮಾಡಿ ಜನರ ನೆಮ್ಮದಿಯ ಬದುಕನ್ನು ಕಸಿದುಕೊಂಡಿತ್ತು. ಹೀಗಾಗಿ ಅಂದು ದೇಶದಲ್ಲಿ ತಾಂಡವಾಡುತ್ತಿರುವ ಕೊರೋನಾ ರೋಗಕ್ಕೆ ಮುಕ್ತಿ ಸಿಗಲಿ ಎಂದು ಶಶಿಕಲಾ ಅವರು ಶಪಥ ಮಾಡಿದ್ದರಂತೆ.
ಈ ಇಳಿ ವಯಸ್ಸಿನ ಶಶಿಕಲಾ ಮಾತೆ ಅವರು ಈ ಹಿಂದೆ ತಮ್ಮ ಧನಶ್ರೀ ಗ್ರಾಮದಿಂದ ಮಾಹಾರಷ್ಟ್ರದ ಅಂಭಾ ಭವಾನಿ ಮಂದಿರದವರಿಗೂ ಮೂರು ಬಾರಿ ಉರುಳು ಸೇವೆ ಮಾಡಿದ್ದಾರೆ. ಅದರಂತೆ ಕೊರೋನಾ ರೋಗದಿಂದ ಮುಕ್ತಿ ಸಿಗಲಿ ಮತ್ತೆ ದೇಶದಲ್ಲಿ ಶಾಂತಿ ನೆಲಸಲಿ ಅಂತ ಘತ್ತರಗಿ ಭಾಗ್ಯಂತಿ ದೇವಿ ಮಂದಿರದವರೆಗೆ ಉರುಳು ಸೆವೆ ಮಾಡಿದ್ದಾರೆ. ಅಲ್ಲದೆ ತೆಲಾಂಗಣ ರಾಜ್ಯದಿಂದ ಕಲಬುರಗಿ ಜಿಲ್ಲೆ ಅಫ್ಜಲಪೂರ ತಾಲೂಕಿನ ಘತ್ತರಗಿ ಭಾಗ್ಯವಂತಿ ದೇವಿ ಮಂದಿರದವರೆಗೆ ಸರಿ ಸೂಮಾರು 200 ಕಿ.ಮೀ ದೂರದವರೆಗೆ ಉರುಳು ಸೇವೆ ಮಾಡುತ್ತಿದ್ದಾರೆ. ರಸ್ತೆ ಉದ್ದಕ್ಕೂ ಶಶಿಕಲಾ ಮಾತೆ ಅವರ ದರ್ಶನ ಪಡೆಯಲು ಜನರು ಮೂಗಿ ಬಿಳುತ್ತಿದ್ದಾರೆ. ಈ ಬಗ್ಗೆ ಶಶಿಕಲಾ ಅವರನ್ನು ಕೇಳಿದಾಗ, ಜನರ ಕಲ್ಯಾಣಕ್ಕಾಗಿ ಮತ್ತು ಶಾಂತಿಗಾಗಿ ಉರುಳು ಸೇವೆ ಮಾಡುತ್ತಿದ್ದೆನೆ ಎಂದು ಹೇಳುತ್ತಾರೆ.
ಇನ್ನು ಜನ ಕಲ್ಯಾಣಕ್ಕಾಗಿ ಶಶಿಕಲಾ ಮಾತೇ ಅವರು ತೆಲಾಂಗಣ ರಾಜ್ಯದ ಜಹೀರಾಬಾದ ತಾಲೂಕಿನ ಧನಶ್ರೀ ಗ್ರಾಮದಿಂದ ಉರುಳು ಸೇವೆ ಆರಂಭಿಸಿದ್ದಾರೆ. ಜನ ಶಾಂತಿಗಾಗಿ ಉರುಳು ಸೇವೆ ಆರಂಭಿಸಿದ ಶಶಿಕಲಾ ಮಾತೆ ಅವರ ಉರುಳು ಸೇವೆ ಸದ್ಯ ಬೀದರ್ ತಾಲೂಕಿನ ಮನ್ನಾಖೇಳಿ ಗ್ರಾಮಕ್ಕೆ ಬಂದು ತಲುಪಿದೆ. ಅದರಂತೆ ದಾರಿಯುದ್ದಕ್ಕೂ ಜನ ಕಾದುನಿಂತು ಉರುಳು ಸೇವೆಯಲ್ಲಿ ಪಾಲಗೊಂಡು ಮಾತೆಯ ದರ್ಶನ ಪಡೆದು ಮರುಳುತ್ತಿದ್ದಾರೆ.
ಇನ್ನು ಇನ್ನೂರು ಕಿ.ಮೀ ಉರುಳು ಸೇವೆ ಆರಂಭಿಸಿದ ಶಶಿಕಲಾ ಅವರು ಪ್ರತಿ ದಿನ 5 ಕಿ.ಮೀ ಉರುಳು ಸೇವೆ ಮಾಡಲಿದ್ದಾರೆ. ಶಶಿಕಲಾ ಮಾತೆ ಅವರ ಉರುಳು ಸೇವೆ ಮೂವತ್ತನೇ ದಿನಕ್ಕೆ ಘತ್ತರಗಿ ಭಾಗ್ಯವಂತಿ ದೇವಿ ಮಂದಿರಕ್ಕೆ ತಲುಪಲಿದೆ ಎಂದು ಭಕ್ತರು ಹೇಳಿದ್ದಾರೆ. ಶಶಿಕಲಾ ಮಾತೆ ಅವರ ಜೊತೆಯಲ್ಲಿ ಒಂದಷ್ಟು ಮಹೀಳೆಯರು ಭಜನೆ ಮಾಡುತ್ತಾ ದಾರಿ ಉದ್ದಕ್ಕೂ ಜನ ಉರುಳು ಸೇವೆಯಲ್ಲಿ ಹೇಜ್ಜೆ ಹಾಕುತ್ತಿದ್ದಾರೆ.
ವರದಿ: ಸುರೇಶ್ ನಾಯಕ್, ಟಿವಿ9 ಬೀದರ್
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:50 am, Tue, 15 November 22