Karnataka Dam Water Level: ಸೆ.30ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ

|

Updated on: Sep 30, 2023 | 7:16 AM

ಕರ್ನಾಟಕದ ಜಲಾಶಯಗಳ ಸೆಪ್ಟೆಂಬರ್​​​ 30ರ ನೀರಿನ ಮಟ್ಟ: ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಒಳ ಹರಿವು ಎಷ್ಟಿದೆ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dam Water Level: ಸೆ.30ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ
ಹಾರಂಗಿ ಡ್ಯಾಂ
Follow us on

ರಾಜ್ಯದಾದ್ಯಂತ ಮುಂದಿನ ಎರಡು ವಾರಗಳ ಕಾಲ ಸಂಚಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಾದ್ಯಂತ ಇಂದು (ಸೆ.30) ಅಲ್ಲಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಹಾಗೂ ಅಲ್ಲಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗಲಿದೆ. ಹಾಗಾದರೆ ಸೆಪ್ಟೆಂಬರ್​​​ 29 ರಂದು ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್​​) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.6 123.08 108.19 123.08 18533 9483
ತುಂಗಭದ್ರಾ ಜಲಾಶಯ (Tungabhadra Dam) 497.71 105.79 57.25 105.78 1307 9905
ಮಲಪ್ರಭಾ ಜಲಾಶಯ (Malaprabha Dam) 633.80 37.73 20.80 37.73 0 944
ಕೆ.ಆರ್.ಎಸ್ (KRS Dam) 38.04 49.45 20.96 48.01 4835 2348
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 67.81 141.08 4708 4713
ಕಬಿನಿ ಜಲಾಶಯ (Kabini Dam) 696.13 19.52 13.38 18.69 860 1500
ಭದ್ರಾ ಜಲಾಶಯ (Bhadra Dam) 657.73 71.54 42.91 70.17 380 3070
ಘಟಪ್ರಭಾ ಜಲಾಶಯ (Ghataprabha Dam) 662.91 51.00 44.42 51.00 2675 177
ಹೇಮಾವತಿ ಜಲಾಶಯ (Hemavathi Dam) 890.58 37.10 18.53 36.89 1727 1300
ವರಾಹಿ ಜಲಾಶಯ (Varahi Dam) 594.36 31.10 10.89 23.28 1422 691
ಹಾರಂಗಿ ಜಲಾಶಯ (Harangi Dam)​​ 871.38 8.50 6.78 7.68 1636 2200
ಸೂಫಾ (Supa Dam) 564.00 145.33 76.93 105.00 3159 3501

ಉತ್ತರ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಹಾಗೂ ಅಲ್ಲಲ್ಲಿ ಭಾರಿ ಮಳೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಶುಕ್ರವಾರ ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ