ಕೋಲಾರ ಈದ್ ಮಿಲಾದ್ ಕತ್ತಿ ಪ್ರಕರಣ; ಕುದುರೆ ಮೇಲೆ ಕೂತು ಕತ್ತಿ ಜಳಪಿಸಿದ್ದ ವ್ಯಕ್ತಿ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲು

ಕೋಲಾರದಲ್ಲಿ ಆಚರಿಸಲಾದ ಈದ್ ಮಿಲಾದ್ ಮೆರವಣಿಗೆ ವೇಳೆ ಕುದುರೆ ಮೇಲೆ ಕುಳಿತು ಕತ್ತಿ ಜಳಪಿಸಿದ್ದ ಸಗೀರ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಸಂಸದ ಮುನಿಸ್ವಾಮಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದರು, ಕೂಡಲೇ 200 ಕೆಜಿ ತೂಕದ ಕತ್ತಿಯ ದ್ವಾರಬಾಗಿಲು ತೆರವು ಮಾಡಲಾಗಿತ್ತು.

ಕೋಲಾರ ಈದ್ ಮಿಲಾದ್ ಕತ್ತಿ ಪ್ರಕರಣ; ಕುದುರೆ ಮೇಲೆ ಕೂತು ಕತ್ತಿ ಜಳಪಿಸಿದ್ದ ವ್ಯಕ್ತಿ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲು
ಕೋಲಾರ ಈದ್ ಮಿಲಾದ್ ಕತ್ತಿ ಪ್ರಕರಣ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಆಯೇಷಾ ಬಾನು

Updated on:Sep 30, 2023 | 7:02 AM

ಕೋಲಾರ, ಸೆ.30: ಜಿಲ್ಲೆಯಲ್ಲಿ ಈದ್ ಮಿಲಾದ್ (Eid Milad Un Nabi) ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಘಟನೆ ಕುರಿತು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕೋಲಾರ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ಆರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹಬ್ಬದ ಪ್ರಯುಕ್ತ ಕತ್ತಿಯಿಂದ (Sword) ಸ್ವಾಗತ ಕಮಾನು ಮಾಡಿ ಹಾಕಿದ್ದ ಐವರ ವಿರುದ್ದ ದೂರು ದಾಖಲಾಗಿದೆ. ಅಸ್ಲಾಂ ಪಾಷಾ, ಚಾಂದ್ ಪಾಷಾ, ಮನ್ಸೂರ್ ಆಲಿ, ಮೊಹಮದ್ ಬಿಲಾಲ್, ಸಾಧಿಕ್ ಪಾಷಾ ಎಂಬುವರ ಮೇಲೆ‌ ಪ್ರಕರಣ ದಾಖಲಾಗಿದೆ.

ಇನ್ನು ಈದ್ ಮಿಲಾದ್ ಮೆರವಣಿಗೆ ವೇಳೆ ಕುದುರೆ ಮೇಲೆ ಕುಳಿತು ಕತ್ತಿ ಜಳಪಿಸಿದ್ದ ಸಗೀರ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಸಂಸದ ಮುನಿಸ್ವಾಮಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದರು, ಕೂಡಲೇ 200 ಕೆಜಿ ತೂಕದ ಕತ್ತಿಯ ದ್ವಾರಬಾಗಿಲು ತೆರವು ಮಾಡಲಾಗಿತ್ತು.

ಇದನ್ನೂ ಓದಿ: ಕೋಲಾರ: ಈದ್ ಮಿಲಾದ್ ಪ್ರಯುಕ್ತ ಕ್ಲಾಕ್ ಟವರ್​ನಲ್ಲಿ ಅಳವಡಿಸಿದ್ದ ವಿವಾದಿತ ಕತ್ತಿ ಸಂದೇಶ ತೆರವು

ಘಟನೆ ಹಿನ್ನೆಲೆ

ಈದ್ ಮಿಲಾದ್ ನಿಮಿತ್ತ ಕೋಲಾರದ ಕ್ಲಾಕ್ ಟವರ್ ಬಳಿ ದೇವರ ಆಶೀರ್ವಚನ ಪದಗಳನ್ನು ಬರೆಯಲಾಗಿದ್ದ ಬೃಹತ್ ಕತ್ತಿಯ ಆಕೃತಿಯನ್ನು ಅಳವಡಿಸಲಾಗಿತ್ತು. ದ್ವಾರ ಬಾಗಿಲಲ್ಲಿ ನಿರ್ಮಿಸಿದ್ದ ಬೃಹದಾಕಾರದ ಈ ಕತ್ತಿ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕತ್ತಿ ತೆರವುಗೊಳಿಸದಿದ್ದರೆ ನಾವು ಗಣೇಶ ಹಬ್ಬಕ್ಕೆ ತ್ರಿಶೂಲ ಹಾಕ್ತೀವಿ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಸಂಸದರರು ಪ್ರಶ್ನೆ ಮಾಡಿದ್ದರು. ಸಂಸದರ ವಿರೋಧದ ಬೆನ್ನಲ್ಲೇ ಪೊಲೀಸರು ವಿವಾದಕ್ಕೆ ಕಾರಣವಾಗಿದ್ದ ಕತ್ತಿಯ ಅಕೃತಿಗಳನ್ನು ತೆರವುಗೊಳಿಸಿದರು.

ಜಿಲ್ಲಾಧಿಕಾರಿ ಹಾಗೂ ಎಸ್​ಪಿ, ಅರ್ಧ ಗಂಟೆಗೂ ಹೆಚ್ಚು ಕಾಲ ಕ್ಲಾಕ್ ಟವರ್ ವೃತ್ತ ಬಂದ್ ಮಾಡಿಸಿ ತೆರವು ಮಾಡಿದರು. ಪೊಲೀಸರ ಸೂಚನೆ ಮೇರೆಗೆ ಮುಸ್ಲಿಂ ಯುವಕರು ಕ್ರೇನ್ ಮೂಲಕ ಕತ್ತಿ ತೆರವು ಮಾಡಿದರು.

ಇಸ್ಲಾಂ ಸಂಸ್ಥಾಪಕ ಪ್ರವಾದಿ ಮೊಹಮ್ಮದ್​ರ ಹುಟ್ಟುಹಬ್ಬ ಹಿನ್ನಲೆ ಆಚರಿಸುವ ಈದ್ ಮಿಲಾದ್ ಹಬ್ಬದ ಆಚರಣೆ ಹಿನ್ನಲೆ ನಗರದ ಕ್ಲಾಕ್ ಟವರ್ ಮುಖ್ಯ ದ್ವಾರದಲ್ಲಿ ಬೃಹತ್ ಗಾತ್ರದ ಕತ್ತಿ ಆಕೃತಿಯನ್ನು ನಿರ್ಮಿಸಿ ಅಳವಡಿಸಲಾಗಿತ್ತು. ಕತ್ತಿ ನಿರ್ಮಿಸಿ, ಕತ್ತಿಯ ಮೇಲೆ ದೇವರ ಆಶೀರ್ವಚನ ಪದಗಳನ್ನ ಬರೆಯಲಾಗಿತ್ತು.

ಕೋಲಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:59 am, Sat, 30 September 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್