ಕೋಲಾರ: ಈದ್ ಮಿಲಾದ್ ಪ್ರಯುಕ್ತ ಕ್ಲಾಕ್ ಟವರ್​ನಲ್ಲಿ ಅಳವಡಿಸಿದ್ದ ವಿವಾದಿತ ಕತ್ತಿ ಸಂದೇಶ ತೆರವು

ಈದ್ ಮಿಲಾದ್ ಪ್ರಯುಕ್ತ ದೇವರ ಆಶೀರ್ವಚನ ಪದಗಳನ್ನು ಬರೆಯಲಾಗಿರುವ ಬೃಹತ್ ಕತ್ತಿಯನ್ನು ಕೋಲಾರದ ಕ್ಲಾಕ್ ಟವರ್​ನಲ್ಲಿ ಅಳವಡಿಸಲಾಗಿತ್ತು. ದ್ವಾರ ಬಾಗಿಲಲ್ಲಿ ನಿರ್ಮಿಸಿದ್ದ ಬೃಹದಾಕಾರದ ಈ ಕತ್ತಿ ವಿವಾದಕ್ಕೆ ಕಾರಣವಾಗಿದ್ದು, ಇದನ್ನು ತೆರವು ಗೊಳಿಸದಿದ್ದರೆ ತ್ರಿಶೂಲ ಹಾಕುವುದಾಗಿ ಬಿಜೆಪಿ ಸಂಸದ ಮುನಿಸ್ವಾಮಿ ಎಚ್ಚರಿಕೆ ನೀಡಿದರು. ಇದರ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಧಿಕಾರಿ, ಎಸ್​ಪಿ ವಿವಾದಿತ ಕತ್ತಿಯನ್ನು ತೆರವುಗೊಳಿಸಿದರು.

ಕೋಲಾರ: ಈದ್ ಮಿಲಾದ್ ಪ್ರಯುಕ್ತ ಕ್ಲಾಕ್ ಟವರ್​ನಲ್ಲಿ ಅಳವಡಿಸಿದ್ದ ವಿವಾದಿತ ಕತ್ತಿ ಸಂದೇಶ ತೆರವು
ಕೋಲಾರದ ಕ್ಲಾಕ್ ಟವರ್​ನಲ್ಲಿ ಅಳವಡಿಸಿದ್ದ ವಿವಾದಿತ ಕತ್ತಿ ಸಂದೇಶ ತೆರವುಗೊಳಿಸಿದ ಪೊಲೀಸರು
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: Rakesh Nayak Manchi

Updated on: Sep 28, 2023 | 5:59 PM

ಕೋಲಾರ, ಸೆ.28: ಈದ್ ಮಿಲಾದ್ (Eid Milad) ಪ್ರಯುಕ್ತ ದೇವರ ಆಶೀರ್ವಚನ ಪದಗಳನ್ನು ಬರೆಯಲಾಗಿರುವ ಬೃಹತ್ ಕತ್ತಿಯನ್ನು ಕೋಲಾರದ (Kolar) ಕ್ಲಾಕ್ ಟವರ್​ನಲ್ಲಿ ಅಳವಡಿಸಲಾಗಿತ್ತು. ದ್ವಾರ ಬಾಗಿಲಲ್ಲಿ ನಿರ್ಮಿಸಿದ್ದ ಬೃಹದಾಕಾರದ ಈ ಕತ್ತಿ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಸಂಸದ ಎಸ್. ಮುನಿಸ್ವಾಮಿ (S.Muniswamy) ಅವರು ತೀವ್ರವಾಗಿ ವಿರೋಧಿಸಿದ್ದರು.

ಕತ್ತಿ ತೆರವುಗೊಳಿಸದಿದ್ದರೆ ತ್ರೀಶೂಲ ಹಾಕುವುದಾಗಿ ಕೋಲಾರ ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಜಿಲ್ಲಾಧಿಕಾರಿ ಹಾಗೂ ಎಸ್​ಪಿ, ಅರ್ಧ ಗಂಟೆಗೂ ಹೆಚ್ಚು ಕಾಲ ಕ್ಲಾಕ್ ಟವರ್ ವೃತ್ತ ಬಂದ್ ಮಾಡಿಸಿ ತೆರವುಗೊಳಿಸಿದರು. ಪೊಲೀಸರ ಸೂಚನೆ ಮೇರೆಗೆ ಮುಸ್ಲಿಂ ಯುವಕರು ಕ್ರೇನ್ ಮೂಲಕ ಕತ್ತಿ ತೆರವು ಮಾಡಿದರು.

ಇದನ್ನೂ ಓದಿ: ವಿಜಯಪುರ: ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಯುವಕರಿಂದ ಶಾಂತಿ ಸೌಹಾರ್ದತೆ ಕದಡಲು ಯತ್ನ

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕೋಲಾರ ಸಂಸದ ಎಸ್. ಮುನಿಸ್ವಾಮಿ, ಪುಂಡರ ಒತ್ತಾಯಕ್ಕೆ ಮಣಿದು ನಗರಸಭೆ ದ್ವಾರ ಬಾಗಿಲು ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದರು. ಜಿಲ್ಲಾ ಎಸ್​ಪಿ ನಾರಾಯಣ ಅವರನ್ನು ಕೇಳಿದಾಗ ನಾವು ಅನುಮತಿ ಕೊಟ್ಟಿಲ್ಲ ಅಂತ ಹೇಳಿದ್ದರು. ಹೀಗಾಗಿ ಬೆಳಗ್ಗೆ ಮಾಧ್ಯಮದ ಮೂಲಕ ನಾವು ತ್ರಿಶೂಲ ಹಾಕುತ್ತೇವೆ ಅಂತ ಹೇಳಿದ್ದೆ. ಅದಕ್ಕೆ ಎಚ್ಚೆತ್ತುಕೊಂಡ ಡಿಸಿ ಅಕ್ರಮ್ ಪಾಷಾ ಮತ್ತು ಎಸ್​ಪಿ ನಾರಾಯಣ ಸೇರಿ ತಲವಾರು ದ್ವಾರ ಬಾಗಿಲು ತೆರವು ಮಾಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಹಾಗೂ ನಗರಸಭೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಶಾಂತಿಯುತವಾದ ಕ್ಲಾಕ್ ಟವರ್​ನಲ್ಲಿ ದ್ವಾರ ಬಾಗಿಲು ನಿರ್ಮಾಣ ಮಾಡಿದ್ದು ಎಷ್ಟು ಸರಿ? ಇವರಿಗೆ ದ್ವಾರ ಬಾಗಿಲು ಹಾಕಲು ಹೇಳಿದ್ಯಾರು?ನಾವು ಗಣೇಶ ಹಬ್ಬ ಮಾಡಬೇಕು ಅಂದರೆ ಅನುಮತಿ ಕೊಡಬೇಕು ಅಂತಾರೆ. ಇದಕ್ಕೆ ಯಾವ ರೀತಿಯಲ್ಲಿ ಅವಕಾಶ ಕೊಟ್ಟರು? ಕಾಂಗ್ರೆಸ್ ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್