AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಆಲಮಟ್ಟಿ, ತುಂಗಭದ್ರಾ, ಹೇಮಾವತಿ ಡ್ಯಾಂಗಳ ಇಂದಿನ ಹರಿವಿನ ಸಂಪೂರ್ಣ ವರದಿ ಇಲ್ಲಿದೆ

ರಾಜ್ಯದ ಪ್ರಮುಖ ಜಲಾಶಯಗಳಾದ ಕಬಿನಿ, ಆಲಮಟ್ಟಿ, ಹೇಮಾವತಿ, ತುಂಗಭದ್ರಾ ಮತ್ತು ಬಸವಸಾಗರ ಜಲಾಶಯಗಳ ಇಂದಿನ (ಸೆಪ್ಟೆಂಬರ್ 21, 2026) ನೀರಿನ ಮಟ್ಟದ ವಿವರಗಳು ಲಭ್ಯ. ಮುಂಗಾರು ಮಳೆಯ ವ್ಯತ್ಯಾಸದಿಂದಾಗಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಒಳಹರಿವು ಮತ್ತು ಹೊರಹರಿವಿನ ಬಗ್ಗೆ ತಾಜಾ ಅಂಕಿ-ಅಂಶಗಳನ್ನು ನೀಡಲಾಗಿದೆ. ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಸಂಗ್ರಹವಿದ್ದು, ಆಲಮಟ್ಟಿ ಮತ್ತು ತುಂಗಭದ್ರಾ ಉತ್ತಮ ಮಟ್ಟದಲ್ಲಿವೆ.

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಆಲಮಟ್ಟಿ, ತುಂಗಭದ್ರಾ, ಹೇಮಾವತಿ ಡ್ಯಾಂಗಳ ಇಂದಿನ ಹರಿವಿನ ಸಂಪೂರ್ಣ ವರದಿ ಇಲ್ಲಿದೆ
ಸಾಂದರ್ಭಿಕ ಚಿತ್ರ Image Credit source: Twitter
ಅಕ್ಷಯ್​ ಪಲ್ಲಮಜಲು​​
|

Updated on:Sep 21, 2026 | 11:08 AM

Share

ಬೆಂಗಳೂರು, ಸೆ,21: ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಕೆಆರ್‌ಎಸ್, ಕಬಿನಿ, ಹೇಮಾವತಿ ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಹಾಗೂ ಒಳ-ಹೊರಹರಿವಿನ ತಾಜಾ ಅಂಕಿ-ಅಂಶಗಳು ಲಭ್ಯವಾಗಿವೆ. ರಾಜ್ಯದ ಪ್ರಮುಖ ಜಲಾಶಯಗಳಾದ ಕಬಿನಿ, ಆಲಮಟ್ಟಿ, ಹೇಮಾವತಿ, ತುಂಗಭದ್ರಾ ಹಾಗೂ ಬಸವಸಾಗರ (ನಾರಾಯಣಪುರ) ಜಲಾಶಯಗಳ ಇಂದಿನ (ಸೆಪ್ಟೆಂಬರ್ 21, 2026) ನೀರಿನ ಮಟ್ಟ ಮತ್ತು ಹರಿವಿನ ವರದಿ ಇಲ್ಲಿದೆ.

1. ಕಬಿನಿ ಜಲಾಶಯ (ಮೈಸೂರು ಜಿಲ್ಲೆ)

ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದಲ್ಲಿ ಪ್ರಸ್ತುತ ಸಾಧಾರಣ ಒಳಹರಿವು ದಾಖಲಾಗಿದೆ.

ಗರಿಷ್ಠ ಮಟ್ಟ: 84.00 ಅಡಿ

ಇಂದಿನ ನೀರಿನ ಮಟ್ಟ: 68.60 ಅಡಿ

ಒಟ್ಟು ಸಾಮರ್ಥ್ಯ: 19.52 TMC

ಇಂದಿನ ಸಂಗ್ರಹ: 11.01 TMC (ಲೈವ್ ಸಂಗ್ರಹ: 1.20 TMC)

ಒಳಹರಿವು: 991 ಕ್ಯೂಸೆಕ್

ಒಟ್ಟು ಹೊರಹರಿವು: 900 ಕ್ಯೂಸೆಕ್ (ನದಿಗೆ: 900 ಕ್ಯೂಸೆಕ್, ಕಾಲುವೆಗಳಿಗೆ: 0 ಕ್ಯೂಸೆಕ್)

ಮಳೆ: 1 ಮಿ.ಮೀ

2. ಆಲಮಟ್ಟಿ ಡ್ಯಾಂ – ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ವಿಜಯಪುರ ಜಿಲ್ಲೆ)

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಆಲಮಟ್ಟಿ ಜಲಾಶಯವು ಬಹುತೇಕ ಭರ್ತಿಯಾಗಿದ್ದು, ವಿದ್ಯುತ್ ಉತ್ಪಾದನೆ ಹಾಗೂ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ.

ಗರಿಷ್ಠ ಮಟ್ಟ: 519.60 ಮೀಟರ್

ಇಂದಿನ ನೀರಿನ ಮಟ್ಟ: 519.16 ಮೀಟರ್

ಒಳಹರಿವು: ಇಲ್ಲ (Nil)

ಹೊರಹರಿವು: 12,175 ಕ್ಯೂಸೆಕ್

3. ಹೇಮಾವತಿ ಜಲಾಶಯ (ಹಾಸನ ಜಿಲ್ಲೆ)

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಡ್ಯಾಂ ಆದ ಹೇಮಾವತಿ ಜಲಾಶಯದ ನೀರಿನ ಸಂಗ್ರಹವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಕಡಿಮೆಯಾಗಿದೆ.

ಗರಿಷ್ಠ ಮಟ್ಟ: 2922.00 ಅಡಿ

ಇಂದಿನ ನೀರಿನ ಮಟ್ಟ: 2893.65 ಅಡಿ (ಕಳೆದ ವರ್ಷ: 2919.75 ಅಡಿ)

ಒಟ್ಟು ಸಾಮರ್ಥ್ಯ: 37.103 TMC

ಇಂದಿನ ಸಂಗ್ರಹ: 16.106 TMC (ಕಳೆದ ವರ್ಷ: 34.498 TMC)

ಲೈವ್ ಸಾಮರ್ಥ್ಯ: 11.734 TMC

ಒಳಹರಿವು: 950 ಕ್ಯೂಸೆಕ್ (ಕಳೆದ ವರ್ಷ: 4,668 ಕ್ಯೂಸೆಕ್)

ಒಟ್ಟು ಹೊರಹರಿವು: 9,050 ಕ್ಯೂಸೆಕ್ (ಮುಖ್ಯ ನದಿಗೆ: 3,800 ಕ್ಯೂಸೆಕ್ | ಎಡದಂಡೆ ಕಾಲುವೆಗೆ: 4,000 ಕ್ಯೂಸೆಕ್ | ಬಲದಂಡೆ ಕಾಲುವೆಗೆ: 400 ಕ್ಯೂಸೆಕ್ | ಎಚ್.ಆರ್.ಬಿ.ಎಚ್.ಎಲ್.ಸಿ: 850 ಕ್ಯೂಸೆಕ್)

ತುಂಗಭದ್ರಾ ಜಲಾಶಯ (ವಿಜಯನಗರ / ಹೊಸಪೇಟೆ)

ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಉತ್ತಮ ನೀರಿನ ಸಂಗ್ರಹವಿದ್ದು, ರೈತರ ಬೆಳೆಗಳಿಗೆ ಕಾಲುವೆಗಳ ಮೂಲಕ ನೀರನ್ನು ಹರಿಸಲಾಗುತ್ತಿದೆ.

ಗರಿಷ್ಠ ಮಟ್ಟ: 1633.00 ಅಡಿ

ಇಂದಿನ ನೀರಿನ ಮಟ್ಟ: 1625.889 ಅಡಿ

ಒಟ್ಟು ಸಾಮರ್ಥ್ಯ: 105.788 TMC

ಇಂದಿನ ಸಂಗ್ರಹ: 79.430 TMC

ಒಳಹರಿವು: ಇಲ್ಲ (Nil)

ಸರಾಸರಿ ಹೊರಹರಿವು (ಕಳೆದ 24 ಗಂಟೆ): 12,747 ಕ್ಯೂಸೆಕ್ (ಕಾಲುವೆಗಳಿಗೆ: 10,538 ಕ್ಯೂಸೆಕ್ | ನದಿಗೆ: 2,209 ಕ್ಯೂಸೆಕ್)

ಇದನ್ನೂ ಓದಿ: ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಬಿಗ್ ಬೂಸ್ಟ್: 11 ದೋಣಿ ನಿಲ್ದಾಣಗಳು ಅಂತಿಮ; ಕರಾವಳಿಯಲ್ಲಿ ಶುರುವಾಗಲಿದೆ ಜಲಸಾರಿಗೆ ಕ್ರಾಂತಿ

5. ಬಸವಸಾಗರ ಜಲಾಶಯ – ನಾರಾಯಣಪುರ (ಯಾದಗಿರಿ ಜಿಲ್ಲೆ)

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿ ಇರುವ ಬಸವಸಾಗರ ಜಲಾಶಯಕ್ಕೆ ಕೃಷ್ಣಾ ನದಿಯಿಂದ ಉತ್ತಮ ಹರಿವು ಮುಂದುವರಿದಿದೆ.

ಗರಿಷ್ಠ ಮಟ್ಟ: 492.25 ಮೀಟರ್

ಇಂದಿನ ನೀರಿನ ಮಟ್ಟ: 490.92 ಮೀಟರ್

ಒಳಹರಿವು: 12,000 ಕ್ಯೂಸೆಕ್

ಹೊರಹರಿವು: 13,000 ಕ್ಯೂಸೆಕ್

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಅಡಿ

Published On - 10:50 am, Mon, 21 September 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಹುಟ್ಟುಹಬ್ಬದಂದು ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ವಸಿಷ್ಠ ಸಿಂಹ
ಹುಟ್ಟುಹಬ್ಬದಂದು ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ವಸಿಷ್ಠ ಸಿಂಹ
ಕಾವ್ಯಾಗೆ ಹಾಡಲು ಬರ್ತಿಲ್ಲ, ಸುದೀಪ್ ಬಿಡ್ತಿಲ್ಲ: ವಿಡಿಯೋ ನೋಡಿ
ಕಾವ್ಯಾಗೆ ಹಾಡಲು ಬರ್ತಿಲ್ಲ, ಸುದೀಪ್ ಬಿಡ್ತಿಲ್ಲ: ವಿಡಿಯೋ ನೋಡಿ
ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಸಂಚಲನ: ರಾಜಕಾರಣಿಗಳಿಗೆ ಜೋಶಿ ಕಿವಿಮಾತು
ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಸಂಚಲನ: ರಾಜಕಾರಣಿಗಳಿಗೆ ಜೋಶಿ ಕಿವಿಮಾತು
ಮೆಜೆಸ್ಟಿಕ್ ಸಮೀಪದ ಹೋಟೆಲ್​​​ನಲ್ಲಿ ಬೆಂಕಿ ಅವಘಡ
ಮೆಜೆಸ್ಟಿಕ್ ಸಮೀಪದ ಹೋಟೆಲ್​​​ನಲ್ಲಿ ಬೆಂಕಿ ಅವಘಡ
ಮಾಜಿ ಪ್ರಧಾನಿ ದೇವೇಗೌಡ್ರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ
ಮಾಜಿ ಪ್ರಧಾನಿ ದೇವೇಗೌಡ್ರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ
ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್
ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್
ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ!
ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ!