Karnataka Dams Water Level: ಮಳೆಯಿಂದ ಉತ್ತರ ಕರ್ನಾಟಕದ ಡ್ಯಾಂಗಳೂ ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
Karnataka Reservoir Water Level Today: ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ, ಕಲಬುರ್ಗಿ, ವಿಜಯಪುರ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಯಲ್ಲಿ ಇಂದು ಮಳೆಯಾಗಲಿದೆ.
Karnataka Rain: ಇಂದು ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ, ಕಲಬುರ್ಗಿ, ವಿಜಯಪುರ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಯಲ್ಲಿ ಮಳೆಯಾಗಲಿದೆ. ಮಳೆಯಿಂದ ಈಗಾಗಲೇ ತುಂಗಾಭದ್ರಾ, ಭದ್ರಾ, ಕೆಆರ್ಎಸ್ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. ಭರ್ತಿಯಾಗಿದ್ದ ಕಬಿನಿ ಜಲಾಶಯದ ನೀರಿನ ಮಟ್ಟ ಕೊಂಚ ತಗ್ಗಿದೆ. ಕಬಿನಿ ಜಲಾಶಯದಲ್ಲಿ ಶೇ. 99, ಮಲಪ್ರಭಾ ಶೇ. 91, ಘಟಪ್ರಭಾ ಶೇ. 86, ಲಿಂಗನಮಕ್ಕಿ ಶೇ. 86, ಹಾರಂಗಿ ಶೇ. 93, ಆಲಮಟ್ಟಿ ಡ್ಯಾಂ ಶೇ. 86ರಷ್ಟು ಭರ್ತಿಯಾಗಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ ಬಗ್ಗೆ ಮಾಹಿತಿ ಇಲ್ಲಿದೆ.
ಕೆಆರ್ಎಸ್ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ- 124.80 ಅಡಿ ಇಂದಿನ ನೀರಿನ ಮಟ್ಟ- 124.80 ಅಡಿ ಗರಿಷ್ಠ ಸಾಮರ್ಥ್ಯ- 49.31 ಟಿಎಂಸಿ ಇಂದಿನ ಒಳಹರಿವು- 5421 ಕ್ಯೂಸೆಕ್ಸ್ ಇಂದಿನ ಹೊರಹರಿವು- 6181 ಕ್ಯೂಸೆಕ್ಸ್
ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್ ಒಟ್ಟು ಸಾಮರ್ಥ್ಯ – 31.10 ಟಿಎಂಸಿ ಇಂದಿನ ನೀರಿನ ಮಟ್ಟ- 17.67 ಟಿಎಂಸಿ ಇಂದಿನ ಒಳಹರಿವು- 112 ಕ್ಯೂಸೆಕ್ಸ್ ಇಂದಿನ ಹೊರಹರಿವು- 771 ಕ್ಯೂಸೆಕ್ಸ್
ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್ ಒಟ್ಟು ಸಾಮರ್ಥ್ಯ – 8.50 ಟಿಎಂಸಿ ಇಂದಿನ ನೀರಿನ ಮಟ್ಟ- 7.78 ಟಿಎಂಸಿ ಇಂದಿನ ಒಳಹರಿವು- 44 ಕ್ಯೂಸೆಕ್ಸ್ ಇಂದಿನ ಹೊರಹರಿವು- 1150 ಕ್ಯೂಸೆಕ್ಸ್
ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್ ಒಟ್ಟು ಸಾಮರ್ಥ್ಯ – 37.10 ಟಿಎಂಸಿ ಇಂದಿನ ನೀರಿನ ಮಟ್ಟ- 29.75 ಟಿಎಂಸಿ ಇಂದಿನ ಒಳಹರಿವು- 1410 ಕ್ಯೂಸೆಕ್ಸ್ ಇಂದಿನ ಹೊರಹರಿವು- 1510 ಕ್ಯೂಸೆಕ್ಸ್
ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್ ಒಟ್ಟು ಸಾಮರ್ಥ್ಯ – 19.52 ಟಿಎಂಸಿ ಇಂದಿನ ನೀರಿನ ಮಟ್ಟ- 19.28 ಟಿಎಂಸಿ ಇಂದಿನ ಒಳಹರಿವು- 1707 ಕ್ಯೂಸೆಕ್ಸ್ ಇಂದಿನ ಹೊರಹರಿವು- 1400 ಕ್ಯೂಸೆಕ್ಸ್
ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್ ಒಟ್ಟು ಸಾಮರ್ಥ್ಯ – 151.75 ಟಿಎಂಸಿ ಇಂದಿನ ನೀರಿನ ಮಟ್ಟ- 130.16 ಟಿಎಂಸಿ ಇಂದಿನ ಒಳಹರಿವು- 2293 ಕ್ಯೂಸೆಕ್ಸ್ ಇಂದಿನ ಹೊರಹರಿವು- 5623 ಕ್ಯೂಸೆಕ್ಸ್
ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್ ಒಟ್ಟು ಸಾಮರ್ಥ್ಯ- 145.33 ಟಿಎಂಸಿ ಇಂದಿನ ನೀರಿನ ಮಟ್ಟ- 108.57 ಟಿಎಂಸಿ ಇಂದಿನ ಒಳಹರಿವು- 554 ಕ್ಯೂಸೆಕ್ಸ್ ಇಂದಿನ ಹೊರಹರಿವು- 2279 ಕ್ಯೂಸೆಕ್ಸ್
ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ- 497.71 ಮೀಟರ್ ಒಟ್ಟು ಸಾಮರ್ಥ್ಯ- 100.86 ಟಿಎಂಸಿ ಇಂದಿನ ನೀರಿನ ಮಟ್ಟ- 100.86 ಟಿಎಂಸಿ ಇಂದಿನ ಒಳಹರಿವು- 11,103 ಕ್ಯೂಸೆಕ್ಸ್ ಇಂದಿನ ಹೊರಹರಿವು- 11,103 ಕ್ಯೂಸೆಕ್ಸ್
ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್ ಒಟ್ಟು ಸಾಮರ್ಥ್ಯ – 71.54 ಟಿಎಂಸಿ ಇಂದಿನ ನೀರಿನ ಮಟ್ಟ- 71.48 ಟಿಎಂಸಿ ಇಂದಿನ ಒಳಹರಿವು- 1207 ಕ್ಯೂಸೆಕ್ಸ್ ಇಂದಿನ ಹೊರಹರಿವು- 1207 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್ ಒಟ್ಟು ಸಾಮರ್ಥ್ಯ – 37.73 ಟಿಎಂಸಿ ಇಂದಿನ ನೀರಿನ ಮಟ್ಟ- 34.51 ಟಿಎಂಸಿ ಇಂದಿನ ಒಳಹರಿವು- 569 ಕ್ಯೂಸೆಕ್ಸ್ ಇಂದಿನ ಹೊರಹರಿವು- 569 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್ ಒಟ್ಟು ಸಾಮರ್ಥ್ಯ – 51.00 ಟಿಎಂಸಿ ಇಂದಿನ ನೀರಿನ ಮಟ್ಟ- 43.91 ಟಿಎಂಸಿ ಇಂದಿನ ಒಳಹರಿವು- 173 ಕ್ಯೂಸೆಕ್ಸ್ ಇಂದಿನ ಹೊರಹರಿವು- 179 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್ ಒಟ್ಟು ಸಾಮರ್ಥ್ಯ – 123.08 ಟಿಎಂಸಿ ಇಂದಿನ ನೀರಿನ ಮಟ್ಟ- 106.32 ಟಿಎಂಸಿ ಇಂದಿನ ಒಳಹರಿವು- 4063 ಕ್ಯೂಸೆಕ್ಸ್ ಇಂದಿನ ಹೊರಹರಿವು- 580 ಕ್ಯೂಸೆಕ್ಸ್
ಇದನ್ನೂ ಓದಿ: Karnataka Dams Water Level: ಕಬಿನಿ ಡ್ಯಾಂನಲ್ಲಿ ತಗ್ಗಿದ ನೀರು; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
Andhra Pradesh Rain: ಆಂಧ್ರದಲ್ಲಿ ವರುಣನ ಆರ್ಭಟ; ಭೂಕುಸಿತವಾಗಿ ತಿರುಮಲ ಘಾಟ್ ರಸ್ತೆ ಬಂದ್